ಬೆಂಗಳೂರು: 44ನೇ ವಸಂತಕ್ಕೆ ಕಾಲಿಟ್ಟಿರುವ ಡಿ ಬಾಸ್ ಬರ್ತ್ಡೇಗೆ ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿ ದೇವರುಗಳು ರಾತ್ರಿಯೇ ಬಂದು ತಮ್ಮ ನೆಚ್ಚಿನ ನಟನ ದರ್ಶನ ಮಾಡಿ ಹುಟ್ಟು ಹಬ್ಬಕ್ಕೆ ವಿಶ್ ಮಾಡಿ ಸಂಭ್ರಮಿಸಿದ್ದಾರೆ.
44ನೇ ವಸಂತಕ್ಕೆ ಕಾಲಿಟ್ಟ ಬಾಕ್ಸ್‌ಆಫೀಸ್ ಸುಲ್ತಾನ್.. ಫ್ಯಾನ್ಸ್‌ಗೆ ದಚ್ಚು ಕೇಳಿದ್ದೇನು? - darshan latest news
ರಾತ್ರಿಯೇ ಅಭಿಮಾನಿಗಳ ಜೊತೆ ಕೇಕ್ ಕಟ್ ಮಾಡಿ ಬೆಳಗಿನ ಜಾವ 3 ಗಂಟೆ ತನಕವೂ ಇದ್ದ ದರ್ಶನ್, ಹಾರ-ಪಟಾಕಿ ಇಲ್ಲದೆ ಸರಳವಾಗಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.
ರಾತ್ರಿಯೇ ಅಭಿಮಾನಿಗಳ ಜೊತೆ ಕೇಕ್ ಕಟ್ ಮಾಡಿ ಬೆಳಗಿನ ಜಾವ 3 ಗಂಟೆ ತನಕವೂ ಇದ್ದ ದರ್ಶನ್, ಹಾರ-ಪಟಾಕಿ ಇಲ್ಲದೆ ಸರಳವಾಗಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.
ಹುಟ್ಟು ಹಬ್ಬಕ್ಕೆ ಹೂ-ಕೇಕ್, ಪಟಾಕಿ ಬದಲು ಅಕ್ಕಿ ಬೇಳೆ ದವಸಧಾನ್ಯಗಳನ್ನು ತಂದು ಕೊಡಿ ಅವನ್ನು ಅನಾಥಾಶ್ರಮಗಳಿಗೆ ಒಪ್ಪಿಸುವ ಜವಾಬ್ದಾರಿ ನನ್ನದು ಎಂದು ದಾಸ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಅದರಂತೆ ಅಭಿಮಾನಿ ದೇವರುಗಳು ಟನ್ಗಟ್ಟಲೇ ದವಸಧಾನ್ಯಗಳನ್ನು ಈಗಾಗಲೇ ದರ್ಶನ್ ಮನೆಗೆ ಸೇರಿಸಿದ್ದಾರೆ. ಇದರ ಜೊತೆಗೆ ದಚ್ಚು ಹುಟ್ಟುಹಬ್ಬದ ಸರ್ಪ್ರೈಜ್ ಗಿಫ್ಟ್ ಆಗಿ ರಾಬರ್ಟ್ ಚಿತ್ರದ ಟೀಸರ್ ಲಾಂಚ್ ಮಾಡಿದ ಚಿತ್ರತಂಡ, ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ನೀಡಿದೆ.