ಮೈಸೂರು: ದಸರಾ ಮಹೋತ್ಸವದ ಯುವದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಅವರ ಲವ್ ಪ್ರಪೋಸ್‌ಗೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮೂರು ದೂರುಗಳು ದಾಖಲಾಗಿದೆ.
ದಸರಾದಲ್ಲಿ ನಿವೇದಿತಾಗೆ ಪ್ರೀತಿ ನಿವೇದನೆ : ಚಂದನ್ ವಿರುದ್ದ ದಾಖಲಾಯ್ತು ದೂರು! - ಯುವ ದಸರಾದಲ್ಲಿ ಚಂದನ್ ಶೆಟ್ಟಿ ಪ್ರಪೋಸ್
ದಸರಾ ಮಹೋತ್ಸವದ ಯುವದಸರಾ ವೇದಿಕೆಯಲ್ಲಿ ಚಂದನ್‌ಶೆಟ್ಟಿ ಹಾಗೂ ನಿವೇದಿತಾ ಅವರ ಎಂಗೇಜ್ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮೂರು ದೂರುಗಳು ದಾಖಲಾಗಿದೆ. ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಚಂದನ್ ಶೆಟ್ಟಿ ಮೇಲೆ ಮೂರು ಕೇಸ್ ದಾಖಲಾಗಿದೆ.
ಚಂದನ್ ವಿರುದ್ದ ದಾಖಲಾಯ್ತು ದೂರು..!
ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಚಂದನ್ ಶೆಟ್ಟಿ ಮೇಲೆ ಮೂರು ಕೇಸ್ ದಾಖಲಾಗಿದೆ. ಸರ್ಕಾರಿ ವೇದಿಕೆ ದುರ್ಬಳಕೆ, ಸಾರ್ವಜನಿಕ ಸ್ಥಳದಲ್ಲಿ ಅನುಚಿತ ವರ್ತನೆ, ನಿವೇದಿತಾರಿಂದ ಅತಿಕ್ರಮ ಪ್ರವೇಶ, ಸಂಚು ರೂಪಿಸಿ ಪ್ರಚಾರ ಪಡೆದ ಆರೋಪಗಳ ಮೇಲೆ ದೂರು ದಾಖಲಾಗಿದೆ.
ಮೈಸೂರು ಯೂತ್ ಕಾಂಗ್ರೆಸ್, ಕರ್ನಾಟಕ ಪ್ರಜಾಪಾರ್ಟಿ ಮತ್ತು ಸಾಮಾಜಿಕ ಹೋರಾಟಗಾರ ಗಂಗರಾಜು ಕೇಸ್ ದಾಖಲು ಮಾಡಿದ್ದಾರೆ. ಈ ಘಟನೆ ದಸರಾ ಗಲಾಟೆ ನಡುವೆ ಪೊಲೀಸರಿಗೆ ಮತ್ತೊಂದು ತಲೆ ಬಿಸಿಯಾಗಿದೆ.
Last Updated : Oct 5, 2019, 11:31 PM IST