ನವದೆಹಲಿ:ಇಂದು ವಿಶ್ವವೇ ಯೋಗ ಡೇ ಆಚರಿಸುತ್ತಿದೆ. ಭಾರತೀಯರ ಹೆಮ್ಮೆಯ ದಿನವಾದ ಇಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಸ್ಫೂರ್ತಿದಾಯಕ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.
73ರ ಹರೆಯದಲ್ಲೂ ತಮ್ಮ ತಾಯಿ ಯೋಗಾಸನಕ್ಕೆ ನೀಡುತ್ತಿರುವ ಪ್ರಾಮುಖ್ಯತೆ. ಹಾಗೂ ಪ್ರತಿದಿನ ಯೋಗಾ ಮಾಡುವುದರಿಂದ ಅವರ ಆರೋಗ್ಯ ವೃದ್ಧಿ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ಅಕ್ಷಯ್.
ಅಕ್ಷಯ್ ಕುಮಾರ್ ತಾಯಿ ಅರುಣಾ ಭಾಟಿಯಾ ಅವರು ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇದಾದ ನಂತರವೂ ನಿತ್ಯ ತಪ್ಪದೆ ಯೋಗಾಸನ ಮಾಡುತ್ತಾರೆ. ಇದರಿಂದ ಅವರ ಆರೋಗ್ಯ ದಿನದಿಂದ ದಿನಕ್ಕೆ ಸುಧಾರಿಸುತ್ತಿದೆಯಂತೆ. ಈ ವಿಚಾರವನ್ನು ಹೆಮ್ಮೆಯಿಂದ ತಮ್ಮ ಟ್ವಿಟ್ಟರ್ಲ್ಲಿ ಹಂಚಿಕೊಂಡಿರುವ ಅಕ್ಷಯ್ ಕುಮಾರ್, ಅವರ ತಾಯಿ ಅರುಣಾ ಯೋಗ ಮಾಡುತ್ತಿರುವ ಪೋಟೊವೊಂದನ್ನು ಶೇರ್ ಮಾಡಿದ್ದಾರೆ. ಇದರೊಂದಿಗೆ ಯೋಗದ ಮಹತ್ವ ಎಷ್ಟಿದೆ ಎಂಬುದನ್ನು ಇತರರಿಗೆ ತಿಳಿಯಪಡಿಸುವ ಪ್ರಯತ್ನ ಮಾಡಿದ್ದಾರೆ.
ಮತ್ತೊಂದೆಡೆ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಕೂಡ ತಮ್ಮ ಯೋಗದ ದಿನಚರಿ ಬಗ್ಗೆ ಹೇಳಿಕೊಂಡಿದ್ದಾರೆ. ತಮ್ಮ 15 ನೇ ವಯಸ್ಸಿನಿಂದಲೇ ಯೋಗ ಮಾಡಲು ಪ್ರಾರಂಭಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ.