ಮುಂಬೈ:ಹಿರಿಯ ಹಾಸ್ಯನಟ ಜಗದೀಪ್ ಅವರನ್ನು ನೆನಪಿಸಿಕೊಂಡ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಹಿಂದಿ ಚಲನಚಿತ್ರೋದ್ಯಮವು ಮತ್ತೊಂದು ರತ್ನವನ್ನು ಕಳೆದುಕೊಂಡಿದೆ ಎಂದು ಹೇಳಿದರು. ಜಗದೀಪ್ ತಮ್ಮ 81ನೇ ವಯಸ್ಸಿನಲ್ಲಿ ನಿನ್ನೆ ತಮ್ಮ ನಿವಾಸದಲ್ಲಿ ನಿಧನರಾಗಿದ್ದರು.
ನಾವು ಮತ್ತೊಂದು ರತ್ನವನ್ನು ಕಳೆದುಕೊಂಡಿದ್ದೇವೆ: ಹಾಸ್ಯನಟ ಜಗದೀಪ್ ಸ್ಮರಿಸಿದ ಬಿಗ್ ಬಿ
ಶೋಲೆ ಮತ್ತು ಶಹನ್‌ಶಾ ಚಿತ್ರದಲ್ಲಿ ಜಗದೀಪ್ ಅವರೊಂದಿಗೆ ನಟಿಸಿರುವ ಅಮಿತಾಬ್ ಬಚ್ಚನ್, ಜಗದೀಪ್ ಅವರು ತಮ್ಮದೇ ಆದ ವಿಶಿಷ್ಟವಾದ ವೈಯಕ್ತಿಕ ಶೈಲಿಯನ್ನು ಹೊಂದಿದ್ದರು ಎಂದು ಹೇಳಿದ್ದಾರೆ.
jagdeep
ಕಳೆದ ರಾತ್ರಿ ನಾವು ಮತ್ತೊಂದು ರತ್ನವನ್ನು ಕಳೆದುಕೊಂಡಿದ್ದೇವೆ. ಜಗದೀಪ್ ಅಸಾಧಾರಣ ಹಾಸ್ಯ ನಟ. ಅವರು ತಮ್ಮದೇ ಆದ ವಿಶಿಷ್ಟವಾದ ವೈಯಕ್ತಿಕ ಶೈಲಿಯನ್ನು ಪರಿಚಯಿಸಿದ್ದಾರೆ. ಅವರೊಂದಿಗೆ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡುವ ಗೌರವ ನನಗೆ ಸಿಕ್ಕಿದೆ ಎಂದು ಬಚ್ಚನ್ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ.
ಅಂದಾಜ್ ಅಪ್ನಾ ಅಪ್ನಾ, ಫೂಲ್ ಔರ್ ಕಾಂಟೆ, ಬ್ರಹ್ಮಚಾರಿ, ದೊ ಬೀಗಾ ಜಮಿನ್, ಆರ್ ಪಾರ್, ಖಿಲೋನಾ, ತೀನ್ ಬಹುರಾನಿಯಾ ಮತ್ತು ಇತರ ಅನೇಕ ಸ್ಮರಣೀಯ ಪಾತ್ರಗಳನ್ನು ಒಳಗೊಂಡಂತೆ 400ಕ್ಕೂ ಅಧಿಕ ಚಲನಚಿತ್ರಗಳಲ್ಲಿ ಜಗದೀಪ್ ನಟಿಸಿ ಚಿತ್ರರಸಿಕರ ಮನಸ್ಸು ಗೆದ್ದಿದ್ದರು.