ಕರ್ನಾಟಕ

karnataka

ETV Bharat / sitara

ಹೃತಿಕ್​-ಟೈಗರ್ ಮಧ್ಯೆ ಭರ್ಜರಿ 'ವಾರ್' - ಟೈಗರ್ ಶ್ರಾಫ್

ಹಿಂದಿಯ 'ವಾರ್' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿದೆ. ಹೃತಿಕ್ ರೋಷನ್, ಟೈಗರ್ ಶ್ರಾಫ್ ಹಾಗೂ ವಾಣಿ ಕಪೂರ್ ನಟಿಸಿರುವ ಈ ಸಿನಿಮಾ ಅಕ್ಟೋಬರ್ 2ರಂದು ರಿಲೀಸ್ ಆಗಲಿದೆ. ​

ಚಿತ್ರಕೃಪೆ: ಇನ್​ಸ್ಟಾಗ್ರಾಂ

By

Published : Jul 15, 2019, 9:08 PM IST

ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ 'ವಾರ್'​ ಚಿತ್ರದಲ್ಲಿ ಜತೆಯಾಗಿ ನಟಿಸುತ್ತಿದ್ದಾರೆ. ಈ ಮೂಲಕ ಗ್ರೀಕ್ ಗಾಡ್​ ಜತೆ ತೆರೆ ಹಂಚಿಕೊಳ್ಳಬೇಕೆನ್ನುವ ಬಹುದಿನಗಳ ಬಯಕೆಯನ್ನು ಟೈಗರ್ ಈಡೇರಿಸಿಕೊಂಡಿದ್ದಾರೆ.

ಸಿದ್ದಾರ್ಥ್ ಆನಂದ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ವಾರ್' ಬಗ್ಗೆ ಬಿಟೌನ್ ಅಂಗಳದಲ್ಲಿ ಭಾರೀ ಟಾಕ್ ಆಗುತ್ತಿದೆ. ಈಗಾಗಲೇ ಸಂಚಲನ ಮೂಡಿಸಿರುವ ಈ ಚಿತ್ರದ ಪುಟ್ಟದೊಂದು ಟೀಸರ್​ ನಿನ್ನೆ ಬಿಡುಗಡೆಯಾಗಿದೆ. ಕೇವಲ ಒಂದು ನಿಮಿಷದ ಈ ಟೀಸರ್ ನೋಡುಗರನದ್ನು ರೋಮಾಂಚನಗೊಳಿಸುತ್ತದೆ. ಮೈನವಿರೇಳಿಸುವ ಫೈಟ್​, ಕಾರ್ ಚೇಸಿಂಗ್ ದೃಶ್ಯಗಳು ಮಾಸ್​​ ಪ್ರಿಯರಿಗೆ ರಸದೌತಣ ನೀಡುತ್ತಿವೆ. ಇದರಲ್ಲಿ ಹೃತಿಕ್ ಹಾಗೂ ಟೈಗರ್ ಶ್ರಾಫ್​ ನಡುವಿನ ಹೊಡೆದಾಟದ ಸೀನ್​ಗಳಂತೂ ಚಿತ್ರದ ಮೇಲಿನ ನಿರೀಕ್ಷೆ ದುಪ್ಟಟ್ಟುಗೊಳಿಸುತ್ತಿವೆ.

ನಿನ್ನೆಯಷ್ಟೆ ಬಿಡುಗಡೆಯಾಗಿರುವ ಈ ಟೀಸರ್ ಹ್ಯೂಜ್ ರೆಸ್ಪಾನ್ಸ್​ ಗಿಟ್ಟಿಸಿಕೊಳ್ಳುತ್ತಿದೆ. ಒಂದೇ ದಿನದಲ್ಲಿ 65 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆಯುವ ಮೂಲಕ ಯುಟ್ಯೂಬ್​​ನಲ್ಲಿ ನಂಬರ್​ 1 ಟ್ರೆಂಡಿಂಗ್​ನಲ್ಲಿದೆ. ಆದಿತ್ಯಾ ಚೋಪ್ರಾ ನಿರ್ಮಾಣದ 'ವಾರ್' ಸಿನಿಮಾ ಹಿಂದಿ ಸೇರಿದಂತೆ ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಅಕ್ಟೋಬರ್ 2ರಂದು ದೇಶಾದ್ಯಂತ ತೆರೆಗೆ ಅಪ್ಪಳಿಸಲಿದೆ. ​

ABOUT THE AUTHOR

...view details