ಹೈದರಾಬಾದ್ :ಹೃತಿಕ್ ರೋಷನ್ ಮತ್ತು ಸೈಫ್ ಅಲಿ ಖಾನ್ ಅಭಿನಯದ 'ವಿಕ್ರಮ್ ವೇದ' ಚಿತ್ರದಲ್ಲಿ ಸೈಫ್ ಪಾತ್ರದ 'ವಿಕ್ರಮ' ಫಸ್ಟ್ ಲುಕ್ ಫೆಬ್ರವರಿ 24 ರಂದು ಬಿಡುಗಡೆಯಾಗಲಿದೆ.
ಈ ಸಿನಿಮಾದಲ್ಲಿ ಹೃತಿಕ್ ರೋಷನ್ 'ವೇದ' ಪಾತ್ರದಲ್ಲಿ ನಟಿಸುತ್ತಿದ್ದಾರೆ. 'ವಿಕ್ರಮ್ ವೇದ' ಚಿತ್ರವು ಸೌತ್ನ ನಟ ವಿಜಯ್ ಸೇತುಪತಿ ಅಭಿನಯದ ತಮಿಳು ಚಿತ್ರ 'ವಿಕ್ರಮ್ ವೇದ'ದ ಹಿಂದಿ ರಿಮೇಕ್ ಆಗಿದೆ. ಹೃತಿಕ್-ಸೈಫ್ ಅಭಿನಯದ 'ವಿಕ್ರಮ್ ವೇದ' ಸೆಪ್ಟೆಂಬರ್ 30ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
'ವಿಕ್ರಮ್ ವೇದ' ಚಿತ್ರದ ಸೈಫ್ ಅಲಿ ಖಾನ್ ಪಾತ್ರದ 'ವಿಕ್ರಮ್'ನ ಫಸ್ಟ್ ಲುಕ್ ಫೆಬ್ರವರಿ 24ರಂದು ಬಿಡುಗಡೆಯಾಗಲಿದೆ ಎಂದು ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.
ನಟ ಹೃತಿಕ್ ರೋಷನ್ 48ನೇ ಹುಟ್ಟುಹಬ್ಬದ ದಿನದಂದು ನಿರ್ಮಾಪಕರು 'ವೇದ' ಪಾತ್ರದ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದ್ದರು. ಈ ಚಿತ್ರದಲ್ಲಿ ಹೃತಿಕ್ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ:'ಲಾಕ್ ಅಪ್'ನಲ್ಲಿ ಬಂಧಿಯಾದ ಪೂನಂ ಪಾಂಡೆ : ರಣಾವತ್ ಶೋಗೆ ಎಂಟ್ರಿ ಕೊಟ್ಟ ಬೋಲ್ಡ್ ಬ್ಯೂಟಿ
ಭಾರತದ ಜಾನಪದ ಕಥೆಯಾದ ವಿಕ್ರಮ ಮತ್ತು ಬೇತಾಳ ಕಥೆಯನ್ನು ಆಧರಿಸಿದೆ. ಈ ಚಿತ್ರದಲ್ಲಿ ರಾಧಿಕಾ ಆಪ್ಟೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮಿಳು ಚಿತ್ರದಲ್ಲಿ ಆರ್.ಮಾಧವನ್ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ತಮಿಳು ಚಿತ್ರವನ್ನು ನಿರ್ದೇಶಿಸಿದ ಪುಷ್ಕರ್ ಮತ್ತು ಗಾಯತ್ರಿ ಇದರ ಹಿಂದಿ ರಿಮೇಕ್‌ನ ನಿರ್ದೇಶಕರೂ ಆಗಿದ್ದಾರೆ. ಇದನ್ನು ಎಸ್ ಶಶಿಕಾಂತ್ ಮತ್ತು ಭೂಷಣ್ ಕುಮಾರ್ ನಿರ್ಮಿಸಿದ್ದಾರೆ.