ಕರ್ನಾಟಕ

karnataka

ETV Bharat / sitara

Vicky-Katrina wedding : ನಿರ್ಬಂಧಗಳ ನಡುವೆಯೂ ವಿಡಿಯೋ ತುಣುಕು ಲೀಕ್​ - ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆಯ ಫೋಟೋಗಳು

ವಿಕ್‌ಕ್ಯಾಟ್ ಹ್ಯಾಶ್‌ಟ್ಯಾಗ್ ಟ್ರೆಂಡ್‌ಗಳಲ್ಲಿ ಅಗ್ರಸ್ಥಾನದಲ್ಲಿದೆ. ಏಕೆಂದರೆ, ಅಭಿಮಾನಿಗಳು ಈ ಜೋಡಿಯ ಮೊದಲ ಫೋಟೋಗಾಗಿ ಕಾದು ಕುಳಿತಿದ್ದಾರೆ. ಆದರೆ, ಈ ನಡುವೆ ಸವಾಯಿ ಮಾಧೋಪುರದ ಸಿಕ್ಸ್‌ಸೆನ್ಸ್ ಫೋರ್ಟ್‌ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ..

Vicky-Katrina wedding
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್

By

Published : Dec 7, 2021, 3:32 PM IST

ಹೈದರಾಬಾದ್ :ಹಲವು ದಿನಗಳ ಗಾಸಿಪ್ ಬಳಿಕ ಇದೀಗ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಹಾಗೂ ನಟ ವಿಕ್ಕಿ ಕೌಶಲ್ ವಿವಾಹ ನಿಶ್ಚಯವಾಗಿದೆ. ರಾಜಸ್ಥಾನದಲ್ಲಿ ವಿವಾಹ ಮಹೋತ್ಸವ ಕಾರ್ಯಕ್ರಮಗಳು ನಡೆಯುತ್ತಿವೆ.

ಕೆಲವೇ ಅತ್ಯಾಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ವಿವಾಹ ಸಮಾರಂಭದ ಫೋಟೋ, ವಿಡಿಯೋ, ಲೊಕೇಶನ್ ಶೇರ್ ಮಾಡುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ.

ಆದರೆ, ಇಂತಹ ನಿರ್ಬಂಧದ ನಡುವೆಯೂ ವಿಡಿಯೋವೊಂದು ಆನ್​ಲೈನ್ ಸೈಟ್​ಗಳಲ್ಲಿ ಹರಿದಾಡುತ್ತಿದೆ. ರಾಜಸ್ಥಾನದ ಅವರ ಮದುವೆ ವಿಜೃಂಭಣೆಯ ವಿಡಿಯೋ ತುಣುಕು ಹರಿದಾಡುತ್ತಿದ್ದು, ವೈರಲ್ ಆಗಿದೆ.

ವಿಕ್‌ಕ್ಯಾಟ್ ಹ್ಯಾಶ್‌ಟ್ಯಾಗ್ ಟ್ರೆಂಡ್‌ಗಳಲ್ಲಿ ಅಗ್ರಸ್ಥಾನದಲ್ಲಿದೆ. ಏಕೆಂದರೆ, ಅಭಿಮಾನಿಗಳು ಈ ಜೋಡಿಯ ಮೊದಲ ಫೋಟೋಗಾಗಿ ಕಾದು ಕುಳಿತಿದ್ದಾರೆ. ಆದರೆ, ಈ ನಡುವೆ ಸವಾಯಿ ಮಾಧೋಪುರದ ಸಿಕ್ಸ್‌ಸೆನ್ಸ್ ಫೋರ್ಟ್‌ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಡಿಸೆಂಬರ್ 9ರಂದು ವಿವಾಹವಾಗಲಿದ್ದಾರೆ. ಈಗಾಗಲೇ ವಿವಾಹ ಪೂರ್ವ ಕಾರ್ಯಕ್ರಮಗಳು ಆರಂಭಗೊಂಡಿವೆ. ಜೋಧಾ ಅಕ್ಬರ್‌ ಚಿತ್ರದ ಖ್ವಾಜಾ ಮೇರೆ ಖ್ವಾಜಾ ಹಾಡಿಗೆ ಡ್ಯಾನ್ಸ್ ಮಾಡುತ್ತಿರುವ ದೃಶ್ಯವು ವಿಡಿಯೋ ತುಣುಕಿನಲ್ಲಿ ಕಂಡು ಬಂದಿದೆ. ವಿಡಿಯೋದಲ್ಲಿ ಇಡೀ ಸಭಾಂಗಣ ಬೆಳಕಿನಿಂದ ಕೂಡಿದೆ. ಅದ್ದೂರಿ ಅರಮನೆಯ ಮೈದಾನದಂತೆ ಕಂಗೊಳಿಸುತ್ತಿರುವುದು ಕಂಡು ಬಂದಿದೆ.

ಆದರೆ, ಈ ನಡುವೆ ನಟಿ ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ಮದುವೆಯ ವಿಶೇಷ ವಿಡಿಯೋಗಾಗಿ OTT ಸಂಸ್ಥೆಯೊಂದು ಬರೋಬ್ಬರಿ 100 ಕೋಟಿ ರೂ. ಬೇಡಿಕೆ ಇಟ್ಟಿದೆ ಎಂಬ ಮಾಹಿತಿ ದೊರೆತಿದೆ.

ಇದನ್ನೂ ಓದಿ:ಕತ್ರಿನಾ-ವಿಕ್ಕಿ ಮದುವೆಯ ವಿಶೇಷ ವಿಡಿಯೋಗೆ 100 ಕೋಟಿ ರೂ ಆಫರ್?

ABOUT THE AUTHOR

...view details