ಮುಂಬೈ: ನಟ ಸೋನು ಸೂದ್ ಅವರು ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ನೆರವಾಗಿದ್ದು ಮತ್ತು ಆ ದಿನಗಳ ಬಗ್ಗೆ ಪುಸ್ತಕವೊಂದನ್ನು ಬರೆಯಲು ಸಜ್ಜಾಗಿದ್ದಾರೆ.
"ಕಳೆದ ಮೂರೂವರೆ ತಿಂಗಳಲ್ಲಿ ಕೊರೊನಾ ತಮ್ಮ ಜೀವನವನ್ನ ಬದಲಾಯಿಸಿದ ಅನುಭವವನ್ನ ನೀಡಿದೆ. ಇಂತಹ ಬಿಕ್ಕಟ್ಟಿನ ಹಾಗೂ ಸಂಕಷ್ಟದ ದಿನಗಳಲ್ಲಿ ವಲಸಿಗರೊಂದಿಗೆ ದಿನಕ್ಕೆ 16 ರಿಂದ 18 ಗಂಟೆಗಳ ಕಾಲ ವಾಸಿಸುವ ಅವಕಾಶ ಸಿಕ್ಕಿದ್ದು, ಈ ಮೂಲಕ ಹೊಸ ಅನುಭವ ಪಡೆದಿದ್ದೇನೆ. ಬಡವರ ಜತೆ ಇದ್ದು ಅವರ ನೋವನ್ನು ಕಂಡಿದ್ದೇನೆ. ಇಂತಹವರಿಗೆ ಸಹಾಯಕ್ಕೆ ಮುಂದಾಗಿದ್ದು, ನನಗೆ ತುಂಬಾ ಸಂತಸ ತಂದಿದೆ. ಅವರ ಮುಖದಲ್ಲಿನ ನಗುವನ್ನು ನೋಡಿ, ಅವರ ಕಣ್ಣುಗಳಲ್ಲಿನ ಸಂತೋಷದ ಕಣ್ಣೀರು ನನ್ನ ಜೀವನದ ಅತ್ಯಂತ ಸಾರ್ಥಕ ಕ್ಷಣಗಳಾಗಿವೆ’’ ಎಂದು ಸೋನು ಸೂದ್ ಹೇಳಿದ್ದಾರೆ.