ಕರ್ನಾಟಕ

karnataka

ETV Bharat / sitara

ಪಠಾಣ್ ಚಿತ್ರದ ಚಿತ್ರೀಕರಣಕ್ಕೆ ಸ್ಪೇನ್​ಗೆ ತೆರಳಿದ ಶಾರೂಖ್ ಖಾನ್ - ಶಾರೂಕ್ ಖಾನ್ ಮುಂದಿನ ಚಿತ್ರ

ಪಠಾಣ್ ಚಿತ್ರದ ಚಿತ್ರೀಕರಣಕ್ಕಾಗಿ ಬಾಲಿವುಡ್ ನಟ ಶಾರುಖ್ ಖಾನ್ ಸ್ಪೇನ್​ಗೆ ತೆರಳಿದ್ದು, ಮುಂದಿನ ವರ್ಷ ಜನವರಿಯಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.

shah rukh khan jet off to spain for completing movie Pathaan
ಪಠಾಣ್ ಚಿತ್ರದ ಚಿತ್ರೀಕರಣಕ್ಕೆ ಸ್ಪೇನ್​ಗೆ ತೆರಳಿದ ಶಾರೂಕ್

By

Published : Mar 5, 2022, 12:21 PM IST

Updated : Mar 5, 2022, 2:17 PM IST

ಹೈದರಾಬಾದ್ :ಬಾಲಿವುಡ್ ನಟ ಶಾರುಖ್ ಖಾನ್ ಸುಮಾರು ಐದು ವರ್ಷಗಳ ನಂತರ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಶುಕ್ರವಾರ ರಾತ್ರಿ ಮುಂಬೈನಲ್ಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿರುವ ಅವರು ಪಠಾಣ್ ಚಿತ್ರದ ಚಿತ್ರೀಕರಣಕ್ಕೆ ಸ್ಪೇನ್​ಗೆ ಹಾರಿದ್ದಾರೆ.

ಪಠಾಣ್ ಚಿತ್ರದ ಸದ್ಯದ ಚಿತ್ರೀಕರಣ ಸ್ಪೇನ್​ನಲ್ಲಿ ನಡೆಯುತ್ತಿದ್ದು, ಶಾರೂಕ್ ಜೊತೆಯಲ್ಲಿ ಜಾನ್ ಅಬ್ರಹಾಂ ಮತ್ತು ಆತನ ಪತ್ನಿಯೂ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಜಾನ್ ಅಬ್ರಾಹಂ ಈ ಚಿತ್ರದಲ್ಲಿ ಖಳನಾಯಕನ ಪಾತ್ರ ಮಾಡುತ್ತಿದ್ದಾರೆ.

ವಿಭಿನ್ನ ನಟನಾ ಶೈಲಿಯಿಂದ ಪ್ರಸಿದ್ಧರಾದ ಶಾರುಖ್ ಖಾನ್ ಏರ್ಪೋರ್ಟ್​ನಲ್ಲಿ ಕಪ್ಪು ಬಣ್ಣದ ಟೀ ಶರ್ಟ್​ ಮತ್ತು ನೀಲಿ ಬಣ್ಣದ ಜಾಕೆಟ್ ಧರಿಸಿದ್ದರು. ಇದರ ಜೊತೆಗೆ ತಲೆಗೆ ಕಡು ನೀಲಿ ಬಣ್ಣದ ಸ್ಕಾರ್ಫ್​ ಕಟ್ಟಿಕೊಂಡಿದ್ದರು. ಇದರೊಂದಿಗೆ ಶಾರುಖ್ ಮಾಸ್ಕ್ ಮತ್ತು ಫ್ಯಾನ್ಸಿ ಗ್ಲಾಸ್ ಕೂಡಾ ಶಾರುಖ್ ಧರಿಸಿದ್ದರು.

ತನ್ನ ಪತ್ನಿಯೊಂದಿಗೆ ಜಾನ್ ಅಬ್ರಹಾಂ

ಇದನ್ನೂ ಓದಿ:'ಟೈಗರ್ 3' ಟೀಸರ್‌ ಬಿಡುಗಡೆ: ಏ. 21 ಕ್ಕೆ ಘರ್ಜಿಸಲು ಸಿದ್ಧರಾದ ಸಲ್ಮಾನ್ ಖಾನ್, ಕತ್ರಿನಾ ಕೈಫ್

ಈ ಹಿಂದೆಯೇ ಶಾರುಖ್ ಸ್ಪೇನ್​ಗೆ ತೆರಳುತ್ತಾರೆ ಎಂದು ಹೇಳಲಾಗುತ್ತಿತ್ತು. ಈಗ ಶೂಟಿಂಗ್ ನಡೆಯುತ್ತಿರುವ ಪಠಾಣ್ ಚಿತ್ರದ ಚಿತ್ರೀಕರಣವನ್ನು ಆದಷ್ಟು ಬೇಗ ಮುಗಿಸುವ ಯತ್ನದಲ್ಲಿ ಚಿತ್ರತಂಡವಿದೆ. ಮುಂದಿನ ವರ್ಷ ಜನವರಿ 25ರಂದು ಈ ಚಿತ್ರ ಬಿಡುಗಡೆಯಾಗಲಿದೆ.

Last Updated : Mar 5, 2022, 2:17 PM IST

ABOUT THE AUTHOR

...view details