ಕರ್ನಾಟಕ

karnataka

ETV Bharat / sitara

ಇಂದು ರಿಯಾ, ಶೋವಿಕ್ ಜಾಮೀನು ಅರ್ಜಿ ವಿಚಾರಣೆ - ಸ್ಯಾಮ್ಯುಯೆಲ್ ಮಿರಾಂಡಾ

ನ್ಯಾಯಾಂಗ ಬಂಧನದಲ್ಲಿರುವ ನಟಿ ರಿಯಾ ಚಕ್ರವರ್ತಿ ಹಾಗೂ ಎನ್​ಸಿಬಿ ಕಸ್ಟಡಿಯಲ್ಲಿರುವ ಶೋವಿಕ್ ಚಕ್ರವರ್ತಿಯ ಜಾಮೀನು ಅರ್ಜಿಗಳ ವಿಚಾರಣೆಯನ್ನು ಮುಂಬೈ ಸ್ಪೆಷಲ್​ ಕೋರ್ಟ್ ಇಂದು ನಡೆಸಲಿದೆ.

Rhea, Showik's bail plea to be heard today
ಇಂದು ರಿಯಾ, ಶೋವಿಕ್ ಜಾಮೀನು ಅರ್ಜಿ ವಿಚಾರಣೆ

By

Published : Sep 10, 2020, 11:54 AM IST

ಮುಂಬೈ: ನಟಿ ರಿಯಾ ಚಕ್ರವರ್ತಿ ಹಾಗೂ ಅವರ ಸಹೋದರ ಶೋವಿಕ್ ಚಕ್ರವರ್ತಿಯ ಜಾಮೀನು ಅರ್ಜಿಗಳ ವಿಚಾರಣೆಯನ್ನು ಮುಂಬೈನ ವಿಶೇಷ ನ್ಯಾಯಾಲಯ ಇಂದು ನಡೆಸಲಿದೆ.

ಬಾಲಿವುಡ್​ ನಟ ಸುಶಾಂತ್​ ಸಿಂಗ್ ರಜಪೂತ್​ ಅಸಹಜ ಸಾವಿನ ಪ್ರಕರಣ ಸಂಬಂಧ ಡ್ರಗ್ಸ್ ಮಾಫಿಯಾ ನಂಟಿನ ಆರೋಪದಡಿ ಸೆ. 8ರಂದು ನಟಿ ರಿಯಾ ಚಕ್ರವರ್ತಿಯನ್ನು ಎನ್​​ಸಿಬಿ ಬಂಧಿಸಿತ್ತು. ಸೆ.​​ 22ರವರೆಗೆ ಅವರನ್ನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ನಿನ್ನೆಯಿಂದ ಬೈಕುಲ ಕಾರಾಗೃಹದಲ್ಲಿರಿಸಲಾಗಿದೆ.

ಇನ್ನು ಜಾರಿ ನಿರ್ದೇಶನಾಲಯ (ಇಡಿ) ಕೋರಿಕೆಯ ಮೇರೆಗೆ ಪ್ರಕರಣ ಸಂಬಂಧ ಸುಶಾಂತ್​ ಮನೆಯ ನಿರ್ವಾಹಕನಾಗಿದ್ದ ಸ್ಯಾಮ್ಯುಯೆಲ್ ಮಿರಾಂಡಾ ಹಾಗೂ ರಿಯಾ ಸಹೋದರ ಶೋವಿಕ್ ಚಕ್ರವರ್ತಿ ಮೇಲೆ ಕೂಡ ಎನ್​ಸಿಬಿ ಪ್ರಕರಣ ದಾಖಲಿಸಿತ್ತು.

ರಿಯಾ ಚಕ್ರವರ್ತಿ ಪರ ವಕೀಲ ಸತೀಶ್​ ಮಾನೆಶಿಂಧೆ ಈಗಾಗಲೇ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಮತ್ತೊಮ್ಮೆ ರಿಯಾ ಹಾಗೂ ಶೋವಿಕ್ ಪರವಾಗಿ ಸತೀಶ್​ ಮಾನೆ ಶಿಂಧೆ ಜಾಮೀನು ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆಯನ್ನು ಮುಂಬೈ ಸ್ಪೆಷಲ್​ ಕೋರ್ಟ್​ ಇಂದು ನಡೆಸಲಿದೆ.

ABOUT THE AUTHOR

...view details