ಕರ್ನಾಟಕ

karnataka

ETV Bharat / sitara

ಕ್ರೈಂ ಥ್ರಿಲ್ಲರ್ ವೆಬ್ ಸೀರೀಸ್​​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಬಾಲಿವುಡ್​ ಬೆಡಗಿ ರವೀನಾ ಟಂಡನ್ - ಬಾಲಿವುಡ್ ನಟಿ ರವೀನಾ ಟಂಡನ್

1990ರ ದಶಕದ ಮೋಹಕ ನಟಿ ರವೀನಾ ಟಂಡನ್ ಮತ್ತೆ ಬಣ್ಣ ಹಚ್ಚಿದ್ದಾರೆ. ಆದರೆ, ಈ ಬಾರಿ ಹಿರಿತೆರೆಗಲ್ಲ. ಡಿಜಿಟಲ್ ತೆರೆಗೆ. 'ಅರಣ್ಯಕ್' ಎಂಬ ವೆಬ್ ಸೀರೀಸ್​ನಲ್ಲಿ ಪೊಲೀಸ್ ಪಾತ್ರ ನಿರ್ವಹಿಸಲು ಅವರು ಸಜ್ಜಾಗಿದ್ದಾರೆ.

Raveena Tandon set to make digital debut with web series 'Aranayak'
'ಅರಣ್ಯಕ್' ವೆಬ್ ಸೀರೀಸ್ ಮೂಲಕ ಡಿಜಿಟಲ್​​ಗೆ ಪಾದಾರ್ಪಣೆ ಮಾಡಲಿರುವ ಬಾಲಿವುಡ್​ ಬೆಡಗಿ ರವೀನಾ ಟಂಡನ್

By

Published : Nov 24, 2021, 7:37 AM IST

Raveena Tandon:1990ರ ದಶಕದಲ್ಲಿ ಬಾಲಿವುಡ್​ನಲ್ಲಿ ಕಿಚ್ಚು ಹಚ್ಚಿದವರು ಬಾಲಿವುಡ್​ ಬೆಡಗಿ ರವೀನಾ ಟಂಡನ್.​ ಅಂದಾಜ್​ ಅಪ್ನ ಅಪ್ನ, ಮೊಹ್ರಾ, ಲಾಡ್ಲಾ ಮುಂತಾದ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. 'ತು ಚೀಸ್​ ಬಡೀ ಹೈ ಮಸ್ತ್​ ಮಸ್ತ್​' ಎಂದು ಬಾಲಿವುಡ್​ನಲ್ಲಿ ಫೇಮಸ್​ ಆಗಿದ್ದ ಅವರನ್ನು ಕನ್ನಡಕ್ಕೆ ಕರೆತಂದವರು ಉಪೇಂದ್ರ.

'ಅರಣ್ಯಕ್' ವೆಬ್ ಸೀರೀಸ್ ಮೂಲಕ ಡಿಜಿಟಲ್​​ಗೆ ಪಾದಾರ್ಪಣೆ ಮಾಡಲಿರುವ ಬಾಲಿವುಡ್​ ಬೆಡಗಿ ರವೀನಾ ಟಂಡನ್

ಸದ್ಯ ರವೀನಾ ಟಂಡನ್ ಕ್ರೈಂ ಥ್ರಿಲ್ಲರ್ 'ಅರಣ್ಯಕ್' ಎಂಬ ವೆಬ್ ಸೀರೀಸ್ ಮೂಲಕ ಡಿಜಿಟಲ್​​ಗೆ ಪದಾರ್ಪಣೆ ಮಾಡಲಿದ್ದಾರೆ. ಅಲ್ಲಿ ಅವರು ಕಾಣೆಯಾದ ಮಗುವಿನ ಪ್ರಕರಣವನ್ನು ತನಿಖೆ ಮಾಡುವ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಮಹಿಳಾ ಅಧಿಕಾರಿಗಳು ತಮ್ಮ ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನವನ್ನು ಸಾಧಿಸಲು ಪ್ರಯತ್ನಿಸುವಾಗ ಅವರು ಎದುರಿಸುತ್ತಿರುವ ಕಷ್ಟಗಳು ಮತ್ತು ಪೂರ್ವಾಗ್ರಹಗಳನ್ನು ಈ ವೆಬ್​​ ಸರಣಿ ಪ್ರಸ್ತುತ ಪಡಿಸುತ್ತದೆ. ರವೀನಾ ಟಂಡನ್ ಈ ವೆಬ್ - ಸರಣಿಯ ಟ್ರೈಲರ್​​ನ್ನು ಇನ್​​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:'ರಾಹುಲ್​​ ದ್ರಾವಿಡ್​​ ನನ್ನ ಮೊದಲ ಲವ್': ಬಾಲಿವುಡ್ ನಟಿ ರಿಚಾ ಚಡ್ಡಾ

ABOUT THE AUTHOR

...view details