ಕರ್ನಾಟಕ

karnataka

By

Published : Oct 4, 2021, 3:53 PM IST

Updated : Oct 4, 2021, 4:06 PM IST

ETV Bharat / sitara

ಪ್ಯಾರಿಸ್​ ಫ್ಯಾಷನ್​ ವೀಕ್​ನಲ್ಲಿ ರ್‍ಯಾಂಪ್​ ವಾಕ್​​ ಮಾಡಿದ ನಟಿ ಐಶ್ವರ್ಯ ರೈ

ಕೊರೊನಾದಿಂದ ಕಳೆದ 2 ವರ್ಷದಿಂದ ನಿಲ್ಲಿಸಲಾಗಿದ್ದ ಪ್ಯಾರಿಸ್​ ಫ್ಯಾಷನ್​ ವೀಕ್​ಗೆ ಮತ್ತೆ ಚಾಲನೆ ಸಿಕ್ಕಿದೆ. ಕೊರೊನಾ ತಗ್ಗಿದ್ದರಿಂದ ಬಾಲಿವುಡ್​ ಹಾಗೂ ಬಾಲಿವುಡ್​ ನಟಿಮಣಿಯರು ಸೇರಿಕೊಂಡು ಈ ಫ್ಯಾಷನ್​ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ಮೂಲಕ ಗಮನ ಸೆಳೆದರು.

Paris Fashion Week: Aishwarya Rai lives 'deja vu' moment after two years - video
Paris Fashion Week: Aishwarya Rai lives 'deja vu' moment after two years - video

ಪ್ಯಾರಿಸ್ (ಫ್ರಾನ್ಸ್):ಎಲ್ 'ಓರಿಯಲ್ ರನ್ವೇ ಶೋನ 50ನೇ ವಾರ್ಷಿಕೋತ್ಸವದ ನಿಮಿತ್ತ ಇಲ್ಲಿ ಆಯೋಜಿಸಲಾಗಿದ್ದ ಪ್ಯಾರಿಸ್​ ಫ್ಯಾಷನ್​ ವೀಕ್​ನಲ್ಲಿ ಮಾಜಿ ವಿಶ್ವ ಸುಂದರಿ ಹಾಗೂ ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಶ್ವೇತ ವಸ್ತ್ರ ಧರಿಸಿ ಮಿಂಚು ಹರಿಸಿದರು. ನಟಿಯ ಜೊತೆ ಪತಿ ಅಭಿಷೇಕ್ ಬಚ್ಚನ್ ಮತ್ತು ಮಗಳು ಆರಾಧ್ಯ ಬಚ್ಚನ್ ಸಹ ಇದ್ದರು.

ಹಾಲಿವುಡ್​ ನಟಿಯರೊಂದಿಗೆ ಐಶ್ವರ್ಯ ರೈ ಬಚ್ಚನ್

ಭಾನುವಾರ ನಡೆದ ಪ್ಯಾರಿಸ್ ಫ್ಯಾಶನ್ ವೀಕ್‌ನಲ್ಲಿ ವಿವಿಧ ದೇಶದ ಪ್ರಸಿದ್ಧ ನಟಿಯರ ಜೊತೆ 47 ವರ್ಷದ ಐಶ್ವರ್ಯ ರೈ ರ್‍ಯಾಂಪ್​ ವಾಕ್​​ ಮಾಡಿ ಗಮನ ಸೆಳೆದರು. ಈ ಇವೆಂಟ್‌ನ ಫೋಟೋಗಳನ್ನು ನಟಿಯು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ವಿದೇಶಿ ನೆಲದಲ್ಲಿ ಬಿಳಿ ಬಟ್ಟೆ ತೊಟ್ಟು ರ್‍ಯಾಂಪ್​ ವಾಕ್ ಮಾಡುತ್ತಿರುವ ನಟಿಯ ಫೋಟೋ ಹಾಗೂ ವಿಡಿಯೋಗಳನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ ತರಹೇವಾರಿ ಕಾಮೆಂಟ್​ ಮಾಡುತ್ತಿದ್ದಾರೆ. ಫೋಟೋ ಹಾಗೂ ವಿಡಿಯೋಗಳು ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.

ಪ್ಯಾರಿಸ್​ ಫ್ಯಾಷನ್​ ವೀಕ್​ನಲ್ಲಿ ಐಶ್ವರ್ಯ ರೈ ಬಚ್ಚನ್

ಐಫೆಲ್ ಟವರ್ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ಈ​ ಫ್ಯಾಷನ್​ ವೀಕ್​ನಲ್ಲಿ ವಿವಿಧ ದೇಶಗಳ ನಟಿಮಣಿಯರು ಕುಣಿದ ಎಂಜಾಯ್​ ಮಾಡಿದರು. ಕೊರೊನಾ ಕಾರಣದಿಂದ ಕಳೆದ ಎರಡು ವರ್ಷದಿಂದ ಈ ಫ್ಯಾಷನ್​ ವೀಕ್​​ ನಿಲ್ಲಿಸಲಾಗಿತ್ತು. ಕೊರೊನಾ ಪ್ರಮಾಣ ತಗ್ಗಿದ್ದರಿಂದ ಈ ಸಾರಿ ಮತ್ತೆ ಫ್ಯಾಷನ್​ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ಮೂಲಕ ಗಮನ ಸೆಳೆದರು.

ಹಾಲಿವುಡ್​ ನಟಿಯರೊಂದಿಗೆ ಐಶ್ವರ್ಯ ರೈ ಬಚ್ಚನ್

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ ಐಶ್ವರ್ಯ ರೈ, ಎರಡು ವರ್ಷಗಳ ನಂತರ ಇಲ್ಲಿ ನಾವೆಲ್ಲರೂ ಒಟ್ಟಿಗೆ ಸೇರಿದ್ದೇವೆ. ಯಾವುದೋ ಒಂದು ಶಕ್ತಿಯ ಆಶೀರ್ವಾದಿಂದ ನಾವು ಇಲ್ಲಿ ಮತ್ತೆ ಒಂದಾಗಿದ್ದೇವೆ. ಇದು ಮಹಿಳೆಯರಿಗೆ ಮತ್ತು ಅವರ ಸಬಲೀಕರಣಕ್ಕಾಗಿ ನಡೆಸುತ್ತಿರುವ ಹಬ್ಬವಾಗಿದೆ.

ಪ್ಯಾರಿಸ್​ ಫ್ಯಾಷನ್​ ವೀಕ್​ನಲ್ಲಿ ಐಶ್ವರ್ಯ ರೈ ಬಚ್ಚನ್

ಎಲ್ಲರ ಪ್ರಾರ್ಥನೆಯಿಂದ ಜಗತ್ತು ಇಂದು ಸಂಕಷ್ಟದಿಂದ ಹೊರ ಬರುತ್ತಿದೆ. ದೇವರ ಆಶೀರ್ವಾದ ಎಲ್ಲರ ಮೇಲಿರಲಿ. ನಿಮ್ಮ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಮನವಿ ಮಾಡಿಕೊಂಡರು.

ಐಶ್ವರ್ಯ ರೈ ಬಚ್ಚನ್
Last Updated : Oct 4, 2021, 4:06 PM IST

ABOUT THE AUTHOR

...view details