ಬಾಲಿವುಡ್ ಸೆಲಬ್ರಿಟಿಗಳಾದ ಮಲೈಕಾ ಅರೋರ, ರಕುಲ್ ಪ್ರೀತ್ ಸಿಂಗ್ , ಶ್ರುತಿ ಹಾಸನ್ ಹಾಗೂ ಇನ್ನಿತರರು ಮುಂಬೈನ ಬಾಂದ್ರಾದಲ್ಲಿ ಪಾಪರಾಜಿಗಳ ಕ್ಯಾಮರಾಗೆ ಸೆರೆಯಾಗಿದ್ದಾರೆ. ಮಲೈಕಾ ಅರೋರ ಹಾಗೂ ರಕುಲ್ ಪ್ರೀತ್ ಸಿಂಗ್ ಜಿಮ್ನಲ್ಲಿ, ಶ್ರುತಿ ಹಾಸನ್ ಶಾಪಿಂಗ್ ಮಾಲ್ವೊಂದರ ಬಳಿ ಕಾಣಿಸಿಕೊಂಡಿದ್ದಾರೆ.
ಪಾಪರಾಜಿಗಳ ಕ್ಯಾಮರಾಗೆ ಸೆರೆಯಾದ ಬಾಲಿವುಡ್ ಚೆಲುವೆಯರು - Rakul Preet Singh in Mumbai
ಮುಂಬೈನ ಜಿಮ್, ಶಾಪಿಂಗ್ ಕಾಂಪ್ಲೆಕ್ಸ್, ಏರ್ಪೋರ್ಟ್ಗಳಲ್ಲಿ ಆಗ್ಗಾಗ್ಗೆ ಕಾಣಿಸಿಕೊಳ್ಳುವ ಬಾಲಿವುಡ್ ಸೆಲಬ್ರಿಟಿಗಳ ವಿಡಿಯೋ ಮಾಡಲು ಪಾಪರಾಜಿಗಳು ಕಾಯುತ್ತಿರುತ್ತಾರೆ. ನಿನ್ನೆಯಷ್ಟೇ ಮಲೈಕಾ ಅರೋರಾ, ರಕುಲ್ ಪ್ರೀತ್ ಸಿಂಗ್, ಶ್ರುತಿ ಹಾಸನ್ ಹಾಗೂ ಇನ್ನಿತರರು ಮುಂಬೈ ಸಾರ್ವಜನಿಕ ಪ್ರದೇಶಗಳಲ್ಲಿ ಕಾಣಿಸಿಕೊಂಡಿರುವ ವಿಡಿಯೋ ರಿವೀಲ್ ಆಗಿದೆ.
ಇದನ್ನೂ ಓದಿ:ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ ತ್ರಿಕೋನ ಟೀಸರ್
ರಕುಲ್ ಪ್ರೀತ್ ಸಿಂಗ್ ತೆಲುಗು ಜೊತೆ ಹಿಂದಿ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಆಗ್ಗಾಗ್ಗೆ ಹೈದರಾಬಾದ್, ಮುಂಬೈಗಳಿಗೆ ಟ್ರಾವೆಲ್ ಮಾಡುತ್ತಿರುತ್ತಾರೆ. ಆದರೆ ಎಲ್ಲಿ ಹೋದರೂ ಯೋಗ, ಜಿಮ್ ಮಾತ್ರ ತಪ್ಪಿಸುವುದಿಲ್ಲ. ಮುಂಬೈನಲ್ಲಿ ನೆಲೆಸಿದ್ದಾಗ ಬಾಂದ್ರಾದಲ್ಲಿ ರಕುಲ್, ತಪ್ಪದೆ ಯೋಗ ಕ್ಲಾಸ್ಗೆ ಸೇರುತ್ತಾರೆ. ಇನ್ನು ಶ್ರುತಿ ಹಾಸನ್ ಕೂಡಾ ತಮಿಳು, ಹಿಂದಿ, ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದು ಅವರೂ ಕೂಡಾ ಆಗ್ಗಾಗ್ಗೆ ಬಾಂಬೆಗೆ ಹೋಗಿಬರುತ್ತಾರೆ. ಬಾಂದ್ರಾದ ಫುಡ್ ಹಾಲ್ ಎಂಬ ಮಾಲ್ನಲ್ಲಿ ಶ್ರುತಿ ಹಾಸನ್ ಶಾಪಿಂಗ್ ಮಾಡಿ ಬರುವಾಗ ಪಾಪರಾಜಿಗಳು ಅವರ ವಿಡಿಯೋ ಮಾಡಿದ್ದಾರೆ. ಇನ್ನು 40 ಪ್ಲಸ್ ಆದರೂ 20 ರ ಹುಡುಗಿಯಂತೆ ಯಂಗ್ ಆಗಿ ಕಾಣುವ ಮಲೈಕಾ ಅರೋರ ಕೂಡಾ ವರ್ಕೌಟ್ ಮಾಡುವುದರಿಂದ ತಪ್ಪಿಸಿಕೊಳ್ಳುವುದಿಲ್ಲ. ಬಾಂದ್ರಾ ಜಿಮ್ವೊಂದರ ಬಳಿ ಮಲೈಕಾ ಅರೋರ ಕಾಣಿಸಿಕೊಂಡಿದ್ದಾರೆ.