ಹೈದರಾಬಾದ್ (ತೆಲಂಗಾಣ):ನಟಿ, ನರ್ತಕಿ ಮತ್ತು ರೂಪದರ್ಶಿ ಮಲೈಕಾ ಅರೋರಾ ತಮ್ಮ ಬೋಲ್ಡ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ನಟಿ ಆಗಾಗ ತನ್ನ ಮನಮೋಹಕ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ತಮ್ಮ ಸ್ಟೈಲ್, ಫಿಟ್‌ನೆಸ್‌ನಿಂದ ಅಭಿಮಾನಿಗಳಿಗೆ ಸಲಹೆಗಳನ್ನು ನೀಡುವುದರಲ್ಲಿಯೂ ಅವರು ಪ್ರಸಿದ್ಧರಾಗಿದ್ದಾರೆ.
ಮಲೈಕಾ ಅವರು ಅನೇಕ ರಿಯಾಲಿಟಿ ಶೋಗಳ ತೀರ್ಪುಗಾರರಾಗಿದ್ದರು. ನಟಿ ಮಲೈಕಾ ಅರೋರಾ ಅವರಿಗೆ ಈಗ 48ರ ಪ್ರಾಯ. ಈ ವಯಸ್ಸಿನಲ್ಲೂ ಅವರು ತಮ್ಮ ಗ್ಲಾಮರ್ನಿಂದ ಗಮನ ಸೆಳೆಯುತ್ತಾರೆ. ಅವರ ಫೋಟೋ ನೋಡಿದ ಅಭಿಮಾನಿಗಳು ಮಲೈಕಾ ಅವರ ಸೌಂದರ್ಯವನ್ನು ಹೊಗಳಿ ಕಾಮೆಂಟ್ ಮಾಡಿದ್ದಾರೆ.