ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ನಟನೆಯ ಬಹುನಿರೀಕ್ಷಿತ ಸಿನಿಮಾ ರುಸ್ತುಂ ಮುಂದಿನ ಶುಕ್ರವಾರ ಬಿಡುಗಡೆಯಾಗಲಿದೆ. ಸದ್ಯ ಈ ಚಿತ್ರಕ್ಕೆ ಬಾಲಿವುಡ್ ನಟ ಆಲ್ ದಿ ಬೆಸ್ಟ್ ಹೇಳಿದ್ದಾರೆ.
ಶಿವಣ್ಣನ ಸಿನಿಮಾಗೆ ಶುಭ ಕೋರಿದ ಬಾಲಿವುಡ್ ನಟ..! - ರಚಿತಾ ರಾಮ್
ಖ್ಯಾತ ಸಾಹಸ ನಿರ್ದೇಶಕ ರವಿ ವರ್ಮಾರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬರುತ್ತಿರುವ ರುಸ್ತುಂ ಚಿತ್ರಕ್ಕೆ ಬಿಟೌನ್ ನಟ ಜಾನ್ ಅಬ್ರಹಾಂ ಶುಭ ಕೋರಿದ್ದಾರೆ. ಈ ವಿಡಿಯೋವನ್ನು ರವಿ ವರ್ಮಾ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಖ್ಯಾತ ಸಾಹಸ ನಿರ್ದೇಶಕ ರವಿ ವರ್ಮಾರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬರುತ್ತಿರುವ ರುಸ್ತುಂ ಚಿತ್ರಕ್ಕೆ ಬಿಟೌನ್ ನಟ ಜಾನ್ ಅಬ್ರಹಾಂ ಶುಭ ಕೋರಿದ್ದಾರೆ. ಈ ವಿಡಿಯೋವನ್ನು ರವಿ ವರ್ಮಾ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ರವಿ ವರ್ಮಾರ ಅದ್ಭುತ ಸಿನಿಮಾ ರುಸ್ತುಂಗೆ ಒಳ್ಳೆಯದಾಗಲಿ. ರವಿ ವರ್ಮಾ ರಾಕ್ಸ್ಟಾರ್, ಈ ಚಿತ್ರ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಲಿ ಎಂದು ಜಾನ್ ಅಬ್ರಹಾಂ ಶುಭ ಹಾರೈಸಿದ್ದಾರೆ.ಶಿವರಾಜ್ ಕುಮಾರ್, ಶ್ರದ್ಧಾ ಶ್ರೀನಾಥ್, ರಚಿತಾ ರಾಮ್, ವಿವೇಕ್ ಓಬೇರಾಯ್ ಮುಖ್ಯ ಭೂಮಿಕೆಯಲ್ಲಿರುವ ರುಸ್ತುಂ ಚಿತ್ರಕ್ಕೆ ಯಶಸ್ವಿ ನಿರ್ಮಾಪಕ ಜಯಣ್ಣ ಬಂಡವಾಳ ಹೂಡಿದ್ದಾರೆ.