ಕರ್ನಾಟಕ

karnataka

ETV Bharat / sitara

ಜೋಹರ್​​​ 'ಗೇ' ಡೇಟಿಂಗ್...'ಪ್ರೀತಿ ಮಾಡಬಾರ್ದು, ಮಾಡಿದರೆ ಲೋಕಕ್ಕೆ ಹೆದರಬಾರ್ದು' ಎಂದ ಫ್ಯಾಷನ್ ಡಿಸೈನರ್​​ - ಡೇಟಿಂಗ್

ಬಾಲಿವುಡ್​​ ಸಿನಿಮಾ ನಿರ್ಮಾಪಕ ಕರಣ್​ ಜೋಹರ್​, ಪ್ರಬಾರ್​​ ಗುರುಂಗಾ ಜತೆ ಡೇಟಿಂಗ್​​ನಲ್ಲಿದ್ದಾರೆ ಅನ್ನೋ ಟಾಕ್​ ಬಿಟೌನ್​​ನಲ್ಲಿ ಶುರುವಾಗಿದೆ.

ಚಿತ್ರಕೃಪೆ : ಇನ್​ಸ್ಟಾಗ್ರಾಂ

By

Published : May 27, 2019, 3:36 PM IST

ಸೆಲಬ್ರಿಟಿಗಳಿಗೆ ಡೇಟಿಂಗ್​, ಚಾಟಿಂಗ್​, ಮೀಟಿಂಗ್ ಕಾಮನ್​. ಆದ್ರೆ, ಸದ್ಯ ಹರಿದಾಡುತ್ತಿರುವ ಜೋಹರ್​ ರೂಮರ್​ ಕೊಂಚ ಹೆಚ್ಚು ಗಮನ ಸೆಳೆಯುತ್ತಿದೆ. ಕಾರಣ, ಪ್ರಬಾರ್​​​ ಓರ್ವ ಗೇ. ಅಮೆರಿಕ ಮೂಲದ ಈತ ಪ್ರಸಿದ್ಧ ಫ್ಯಾಷನ್​ ಡಿಸೈನರ್​​​​. ಈತ ಭಾರತೀಯ ಸಿನಿಮಾ ನಿರ್ಮಾಪಕನೊಬ್ಬನ ಜತೆ ಡೇಟಿಂಗ್ ನಡೆಸುತ್ತಿದ್ದಾನೆ ಎನ್ನುವ ಸುದ್ದಿಯೊಂದು ಕೆಲ ದಿನಗಳ ಹಿಂದೆ ಪ್ರಕಟವಾಗಿತ್ತು. ಆದರೆ, ಆ ಪ್ರೊಡ್ಯೂಸರ್​ ಯಾರು ಎಂಬುದು ರಿವೀಲ್ ಆಗಿರಲಿಲ್ಲ. ಸದ್ಯ ಪ್ರಬಾರ್ ಮಾಡಿರುವ ಕಾಮೆಂಟ್​ವೊಂದು ಈತನ ಡೇಟಿಂಗ್​ ರೂಮರ್​ಗೆ ರೆಕ್ಕೆ-ಪುಕ್ಕ ನೀಡಿದೆ.

ಮೊನ್ನೆಯಷ್ಟೆ 47ನೇ ವಸಂತಕ್ಕೆ ಕಾಲಿಟ್ಟ ಕರಣ್​​ ಜೊಹರ್​​ಗೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸಾಗರವೇ ಹರಿದು ಬಂದಿತ್ತು. ಅವುಗಳಲ್ಲಿ ಪ್ರಬಾರ್ ಅವರ ಇನ್​ಸ್ಟಾಗ್ರಾಂ ವಿಶ್​​ವೊಂದು ಎಲ್ಲರ ಕಣ್ಣು ತನ್ನತ್ತ ತಿರುಗುವಂತೆ ಮಾಡಿತ್ತು. 'ಪ್ಯಾರ್ ಕಿಯಾ ತೋ ಡರ್ನಾ ಕಿಯಾ' ( ಪ್ರೀತಿ ಮಾಡಿದ ಮೇಲೆ ಹೆದರಿಕೆ ಏಕೆ ? ) ಹ್ಯಾಪಿ ಬರ್ತ್​​ಡೇ ಕರಣ್​ ಎಂದು ಪ್ರಬಾರ್ ಶುಭಾಶಯ ಕೋರಿದ್ದರು. ಇದಕ್ಕೆ 'ಕಂಟ್ರೋಲ್​ ಯುವರ್ಸೆಲ್ಫ್​ ಭಯ್ಯಾ' ಎಂದು ಕರಣ್​ ಪ್ರತಿಕ್ರಿಯಿಸಿದ್ದರು.

ಪ್ರಬಾರ್​ ಅವರ ಈ ಪೋಸ್ಟ್ ನೋಡುತ್ತಿದ್ದಂತೆ ಕಣ್ಣರಳಿಸಿದ ನೆಟ್ಟಿಜನ್​ಗಳು, ಇವರಿಬ್ಬರು ಡೇಟಿಂಗ್​ನಲ್ಲಿದ್ದಾರೆ ಎನ್ನುವ ರೂಮರ್ ಹರಿಬಿಟ್ಟಿದ್ದಾರೆ. ಎಲ್ಲಿ ನೋಡಿದ್ರೂ ಈ ಬಗ್ಗೆಯೂ ಗುಸು-ಗುಸು ಸ್ಟಾರ್ಟ್​ ಆಗಿದೆ..

ರೂಮರ್​ ತಳ್ಳಿಹಾಕಿದ ಪ್ರಬಾರ್​​:

ಇನ್ನು ಈ ವದಂತಿ ಪ್ರಬಾರ್​ ಕಿವಿಗೂ ಬಿದ್ದಿದೆ. ಕೂಡಲೇ ಅವರು ಪ್ರತಿಕ್ರಿಯಿಸಿದ್ದು, ಡೇಟಿಂಗ್​ ಸುದ್ದಿಯನ್ನು ತಿರಸ್ಕರಿಸಿದ್ದಾರೆ. ನಾನು ಕರಣ್ ಜೋಹರ್​​ನೊಂದಿಗೆ ಡೇಟಿಂಗ್ ಮಾಡುತ್ತಿಲ್ಲ. ಆತನ ನನಗೆ ಒಳ್ಳೆಯ ಸ್ನೇಹಿತ. ಬಿಗ್​ ಬ್ರದರ್​ ಇದ್ದಂಗೆ ಎಂದು ಟ್ವೀಟ್​ ಮಾಡಿದ್ದಾರೆ.

ABOUT THE AUTHOR

...view details