ಕರ್ನಾಟಕ

karnataka

ETV Bharat / sitara

‘ಗುಡ್​ ಲಕ್​ ಜೆರ್ರಿ’ಗೆ ಬ್ಯಾಡ್​ ಲಕ್​...?, ಜಾನ್ವಿಗೆ ಎದುರಾದ ರೈತರ ಸಂಕಟ!

ನಟಿ ಜಾನ್ವಿ ಕಪೂರ್ ಅಭಿನಯದ ‘ಗುಡ್ ಲಕ್ ಜೆರ್ರಿ’ ಚಿತ್ರದ ಶೂಟಿಂಗ್ ಪಂಜಾಬ್‌ನಲ್ಲಿ ತಡೆಯಲಾಗಿದೆ.

janhvi kapoor shoot halted by farmers  protest on janhvi kapoor film set  janhvi kapoor statement on farmers protest  farmers protest  ಜಾನ್ವಿ ಕಪೂರ್​ ಶೂಟಿಂಗ್​ ತಡೆದ ರೈತರು,  ಪಂಜಾಬ್​ನಲ್ಲಿ ಜಾನ್ವಿ ಕಪೂರ್​ ಶೂಟಿಂಗ್​ ತಡೆದ ರೈತರು,  ಜಾನ್ವಿ ಕಪೂರ್​ ​ ಗುಡ್​ ಲಕ್​ ಜೆರ್ರಿ ಶೂಟಿಂಗ್ ತಡೆದ ರೈತರು,
ಜಾನ್ವಿಗೆ ಎದುರಾದ ರೈತರ ಸಂಕಟ

By

Published : Jan 15, 2021, 12:34 PM IST

ಧಡಕ್​’ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದ ನಟಿ ಜಾನ್ವಿ ಕಪೂರ್​ ಒಂದಾದ ಮೇಲೆ ಒಂದರಂತೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈಗ ಅವರ ತೆಕ್ಕೆಗೆ ಹೊಸ ಸಿನಿಮಾ ಒಂದು ಸಿಕ್ಕಿದೆ. ಜಾನ್ವಿ ‘ಗುಡ್​ ಲಕ್​ ಜೆರ್ರಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆದ್ರೆ ಈ ಚಿತ್ರಕ್ಕೆ ರೈತರು ಅಡ್ಡಿ ಪಡಿಸಿದ್ದಾರೆ.

ಹೌದು, ಹೊಸ ಚಿತ್ರದ ಹೊಸ ಪೋಸ್ಟರ್​ ರಿಲೀಸ್​ ಆಗಿದ್ದು, ಅವರು ಮಧ್ಯಮ ವರ್ಗದ ಹುಡುಗಿಯಾಗಿ ಮಿಂಚಿದ್ದಾರೆ. ಈ ಚಿತ್ರದ ಶೂಟಿಂಗ್​ ಆರಂಭವಾಗಿದ್ದು, ಪಂಜಾಬ್​ನ ಬಾಸ್ಸಿ ಪಥಾನಾದಲ್ಲಿ ಚಿತ್ರೀಕರಣ ನಡೆಯುತ್ತಿದೆ. ರೈತರ ಗುಂಪೊಂದು ಅವರು ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಬೆಂಬಲಿಸಬೇಕೆಂದು ಒತ್ತಾಯಿಸಿದ ನಂತರ ಶೂಟಿಂಗ್ ಸ್ಥಗಿತವಾಗಿತ್ತು.

ಚಿತ್ರ ನಿರ್ಮಾಪಕ ಆನಂದ್ ಎಲ್ ರಾಯ್ ಅವರ ಕಲರ್ ಯೆಲ್ಲೊ ಪ್ರೊಡಕ್ಷನ್ಸ್ ನಿರ್ಮಿಸಿದ ಮತ್ತು ಸಿದ್ಧಾರ್ಥ್ ಸೇನ್‌ಗುಪ್ತಾ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಪಂಜಾಬ್‌ನಲ್ಲಿ ನಡೆಸುತ್ತಿತ್ತು. ರೈತರು ಚಲನಚಿತ್ರ ಸೆಟ್‌ ಬಳಿ ತೆರಳಿ ನಮ್ಮ ಪ್ರತಿಭಟನೆಗೆ ಬೆಂಬಲಿಸುವಂತೆ ಶೂಟಿಂಗ್​ ನಿಲ್ಲಿಸಿದ್ದಾರೆ ಎಂದು ಬಸ್ಸಿ ಪಥಾನಾದ ಡಿಎಸ್ಪಿ ಸುಖ್ಮಿಂದರ್ ಸಿಂಗ್ ಚೌಹಾಣ್ ಹೇಳಿದ್ದಾರೆ.

ರೈತರು ತಾವು ನಡೆಸುತ್ತಿದ್ದ ಪ್ರತಿಭಟನೆಗೆ ಕಲಾವಿದರ ಬೆಂಬಲ ಕೇಳಿದ್ದರು. ರೈತರ ಪ್ರತಿಭಟನೆಗೆ ಜಾನ್ವಿ ಕಪೂರ್​ ಬೆಂಬಲಿಸುವುದಾಗಿ ತಿಳಿಸಿದರು. ಭರವಸೆ ಬಳಿಕ ಮತ್ತೆ ಚಿತ್ರೀಕರಣ ಪುನರಾರಂಭವಾಯಿತು ಎಂದು ಚೌಹಾಣ್ ತಿಳಿಸಿದ್ದಾರೆ.

ಪಂಕಜ್​ ಮಟ್ಟಾ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಸಿದ್ಧಾರ್ತ್​ ಸೇನ್​ಗುಪ್ತಾ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದಲ್ಲದೇ, ದೋಸ್ತಾನಾ 2, ರೂಹಿ ಅಫ್ಜಾನಾ ಸಿನಿಮಾಗಳಲ್ಲಿ ಜಾನ್ವಿ ನಟಿಸುತ್ತಿದ್ದಾರೆ. ಕಳೆದ ವರ್ಷ ನೆಟ್​ಫ್ಲಿಕ್ಸ್​ನಲ್ಲಿ ರಿಲೀಸ್​ ಆಗಿದ್ದ ಗುಂಜನ್​ ಸಕ್ಸೇನಾ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.

ABOUT THE AUTHOR

...view details