ಕರ್ನಾಟಕ

karnataka

ETV Bharat / sitara

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ ಸಮಂತಾ ವರ್ಕೌಟ್​ ವಿಡಿಯೋ! - ಸಮಂತಾ ವರ್ಕೌಟ್​ ವಿಡಿಯೋಗಳು

ಸಮಂತಾ ರುತ್ ಪ್ರಭು ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿನ ಹರಿಯಬಿಟ್ಟ ಇತ್ತೀಚಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸೌಂಡ್​ ಮಾಡುತ್ತಿದೆ..

samantha weightlifting squats  samantha gym videos  samantha workout videos  samantha latest news  samantha latest udpates  ಸಮಂತಾ ವೇಟ್‌ಲಿಫ್ಟಿಂಗ್ ಸ್ಕ್ವಾಟ್ಸ್​ ನಟಿ ಸಮಂತಾ ಜಿಮ್​ ವಿಡಿಯೋಗಳು  ಸಮಂತಾ ವರ್ಕೌಟ್​ ವಿಡಿಯೋಗಳು  ನಟಿ ಸಮಂತಾ ಸುದ್ದಿಗಳು
ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ ಸಮಂತಾ ವರ್ಕೌಟ್​ ವಿಡಿಯೋ

By

Published : Jan 8, 2022, 1:35 PM IST

ಹೈದರಾಬಾದ್(ತೆಲಂಗಾಣ) :ನಟಿ ಸಮಂತಾ ರುತ್ ಪ್ರಭುಗೆ ಫಿಟ್ನೆಸ್ ಫ್ರೀಕ್ ಎಂಬುದು ಗೊತ್ತೇ ಇದೆ. ತನ್ನ ತರಬೇತಿ ಅವಧಿಗಳಲ್ಲಿ ಚಿತ್ರಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುವ ನಟಿ ಈಗ ತನ್ನ 'ಫಾರ್ಮ್‌'ಗೆ ಮರಳಿದ್ದಾರೆ.

100 ಕಿಲೋಗಳಷ್ಟು ತೂಕವನ್ನು ಎತ್ತುವುದರಿಂದ ಹಿಡಿದು ಪಾರ್ಕರ್ ಸ್ಟಂಟ್‌ಗಳನ್ನು ಹೊಡೆಯುವವರೆಗೆ ಸಖತ್​ ಆಗಿ ವ್ಯಾಯಾಮ ಮಾಡುತ್ತಿದ್ಧಾರೆ ಸಮಂತಾ. ಹಾರ್ಡ್‌ಕೋರ್ ಫಿಟ್‌ನೆಸ್ ಉತ್ಸಾಹಿಯಾಗಿದ್ದಾರೆ ನಟಿ.

Instagramನಲ್ಲಿನ ಅವರ ಇತ್ತೀಚಿನ ವಿಡಿಯೋಗಳಲ್ಲಿ ದಿ ಫ್ಯಾಮಿಲಿ ಮ್ಯಾನ್ 2 ನಟನ ಜೊತೆ ವೇಟ್‌ಲಿಫ್ಟಿಂಗ್ ಸ್ಕ್ವಾಟ್‌ಗಳಲ್ಲಿ ತೊಡಗಿಸಿಕೊಂಡಿರುವುದು ಕಾಣಬಹುದಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ ಸಮಂತಾ ವರ್ಕೌಟ್​ ವಿಡಿಯೋ..

ಶನಿವಾರ, ಸಮಂತಾ ತನ್ನ Instagram ಸ್ಟೋರೀಸ್‌ಗೆ ಒಂದೆರಡು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಜುನೈದ್ ಶೇಖ್ ಅವರಿಂದ ತರಬೇತಿ ಪಡೆಯುತ್ತಿರುವುದು ಕಾಣಬಹುದಾಗಿದೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ.

ಈ ವಾರದ ಆರಂಭದಲ್ಲಿ ಸಮಂತಾ ಮಾನಸಿಕ ಶಕ್ತಿಯ ಪ್ರಾಮುಖ್ಯತೆ ಮತ್ತು ತನ್ನ ವೈಯಕ್ತಿಕ ಜೀವನದಲ್ಲಿ ಹಿನ್ನಡೆಯ ನಂತರ ಬಲವಾದ ವ್ಯಕ್ತಿಯಾಗಬೇಕೆಂಬ ಉದ್ದೇಶದ ಬಗ್ಗೆ ಮಾತನಾಡಿದರು.

ಸಮಂತಾ ತನ್ನ ಮುಂಬರುವ ದೊಡ್ಡ ಪ್ರಾಜೆಕ್ಟ್​ ತಯಾರಿಯಲ್ಲಿ ನಿರತರಾಗಿದ್ದಾರೆ. ಅದರಲ್ಲಿ ಒಂದು ಹಿಂದಿ ವೆಬ್ ಸರಣಿಯನ್ನು ದಿ ಫ್ಯಾಮಿಲಿ ಮ್ಯಾನ್ ಖ್ಯಾತಿಯ ರಾಜ್-ಡಿಕೆ ನಿರ್ಮಿಸಲಿದ್ದಾರೆ ಎಂಬ ವದಂತಿಗಳಿವೆ.

ABOUT THE AUTHOR

...view details