ಹೈದರಾಬಾದ್: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅಭಿನಯದ ಗೆಹ್ರೈಯಾನ್ ಸಿನಿಮಾ ಒಟಿಟಿ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಿ ಸಾಕಷ್ಟು ಮೆಚ್ಚುಗೆ ಪಡೆದಿದೆ. ಸಿನಿಮಾದಲ್ಲಿ ದೀಪಿಕಾ, ಅನನ್ಯಾ ಪಾಂಡೆ ಸೋದರ ಸಂಬಂಧಿಗಳಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರತಂಡ ಪರಸ್ಪರ ಮನೆಗಳಿಗೆ ಭೇಟಿ ನೀಡಿ ಸುತ್ತಾಡಿದ್ದು, ಈ ವೇಳೆ, ಅನನ್ಯಾ ಬಗ್ಗೆ ತಿಳಿಯದ ಸಂಗತಿಯನ್ನು ದೀಪಿಕಾ ಹಂಚಿಕೊಂಡಿದ್ದಾರೆ.
ಚಿತ್ರದ ಪ್ರಚಾರ ಸಂದರ್ಶನದಲ್ಲಿ, ಅನನ್ಯಾ ತನ್ನ ಆಹಾರವನ್ನು ಯಾರೊಂದಿಗೂ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ಎಂಬ ವಿಷಯವನ್ನು ದೀಪಿಕಾ ಬಹಿರಂಗ ಪಡಿಸಿದ್ದಾರೆ. ಗೆಹ್ರೈಯಾನ್ ಚಿತ್ರೀಕರಣದ ದಿನಗಳ ಘಟನೆಯನ್ನು ವಿವರಿಸಿದ ದೀಪಿಕಾ, ಅನನ್ಯಾ ರಾತ್ರಿಯ ಊಟಕ್ಕೆ ಕೀಮಾ ಪಾವೊ ತಿನ್ನಲಿದ್ದಾಳೆ ಎಂದು ತಿಳಿದ ನಂತರ ಅವಳೇ ಒಮ್ಮೆ ತಮ್ಮನ್ನು ಅವರ ಮನೆಗೆ ಆಹ್ವಾನಿಸಿದಳು. ಆದರೆ ನೀವು ಬರಲು ಬಯಸಿದರೆ ದಯವಿಟ್ಟು ಬನ್ನಿ, ಆದರೆ ನಿಮ್ಮೆಲ್ಲರಿಗೂ ಸಾಕಷ್ಟು ಪಾವೊ ಇಲ್ಲ ಎಂದಿದ್ದಳು ಎಂದು ಹೇಳಿದರು.