ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ಜತೆಯಾಗಿ ನಟಿಸುತ್ತಿರುವ 'ವಾರ್' ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.
ಭರ್ಜರಿಯಾಗಿದೆ ’ವಾರ್’ ಟ್ರೇಲರ್ - ಹೃತಿಕ್ ರೋಷನ್
ಟೈಗರ್ ಶ್ರಾಫ್ ಹಾಗೂ ಹೃತಿಕ್ ರೋಷನ್ ಜತೆಯಾಗಿ ನಟಿಸಿರುವ ವಾರ್ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದೆ.
bollywood war
'ವಾರ್' ಮೊದಲ ಟೀಸರ್ನಿಂದ ಬಿಟೌನ್ ಅಂಗಳದಲ್ಲಿ ಭಾರೀ ಟಾಕ್ ಶುರು ಮಾಡಿತ್ತು. ಇದೀಗ ಟ್ರೇಲರ್ ಕೂಡ ಸಖತ್ ಆಗಿ ಮೂಡಿ ಬಂದಿದ್ದು, ನೋಡುಗರ ಮೈನವಿರೇಳಿಸುವಂತಿದೆ. ಫೈಟ್, ಕಾರ್ ಚೇಸಿಂಗ್ ದೃಶ್ಯಗಳು ಮಾಸ್ ಪ್ರಿಯರಿಗೆ ರಸದೌತಣ ನೀಡುತ್ತಿವೆ. ಇದರಲ್ಲಿ ಹೃತಿಕ್ ಹಾಗೂ ಟೈಗರ್ ಶ್ರಾಫ್ ನಡುವಿನ ಹೊಡೆದಾಟದ ಸೀನ್ಗಳಂತೂ ಚಿತ್ರದ ಮೇಲಿನ ನಿರೀಕ್ಷೆ ದುಪ್ಟಟ್ಟುಗೊಳಿಸುತ್ತಿವೆ.
ಇನ್ನು ಸಿದ್ದಾರ್ಥ್ ಆನಂದ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಇದೇ ವರ್ಷ ಅಕ್ಟೋಬರ್ 2 ರಂದು ರಿಲೀಸ್ ಆಗಲಿದೆ.