ಕರ್ನಾಟಕ

karnataka

ರಿಮೇಕ್​ ಚಿತ್ರವಾದ್ರೂ ಸಿಕ್ಕಾಪಟ್ಟೆ ಕ್ರೇಜ್​...ಟಾಪ್​ ಟ್ರೆಂಡಿಂಗ್​ನಲ್ಲಿ 'ಕಬೀರ್​ ಸಿಂಗ್' ಟ್ರೇಲರ್​

ಅರ್ಜುನ್ ರೆಡ್ಡಿ ಚಿತ್ರದ ನಿರ್ದೇಶಕ ಸಂದೀಪ್​ ರೆಡ್ಡಿ ಅವರೇ ಕಬೀರ್​ ಸಿಂಗ್​ಗೆ ಆ್ಯಕ್ಷನ್ ಕಟ್​ ಹೇಳುತ್ತಿದ್ದಾರೆ. ಸ್ವಮೇಕ್ ಚಿತ್ರದಲ್ಲಿ ವಿಜಯ್ ದೇವರಕೊಂಡ ನಿಭಾಯಿಸಿದ್ದ ಪಾತ್ರದಲ್ಲಿ ಶಾಹೀದ್​ ಕಪೂರ್ ನಟಿಸುತ್ತಿದ್ದಾರೆ.

By

Published : May 15, 2019, 5:08 PM IST

Published : May 15, 2019, 5:08 PM IST

ಕಬೀರ್​ ಸಿಂಗ್

ಬಾಲಿವುಡ್ 'ಕಬೀರ್​ ಸಿಂಗ್' ಸಿನಿಮಾ ಟ್ರೇಲರ್​ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದೆ. 48 ಗಂಟೆಯಲ್ಲಿ 2 ಕೋಟಿ ವೀಕ್ಷಣೆಯಾಗಿ ಟಾಪ್​ ಟ್ರೆಂಡಿಂಗ್​​ನಲ್ಲಿದೆ.

ಟಾಲಿವುಡ್​ನ 'ಅರ್ಜುನ್​ ರೆಡ್ಡಿ' ಸಿನಿಮಾ ಬಿಟೌನ್​ಗೆ 'ಕಬೀರ್​ ಸಿಂಗ್' ಆಗಿ ರಿಮೇಕ್ ಆಗುತ್ತಿದೆ. ಅರ್ಜುನ್ ರೆಡ್ಡಿ ಚಿತ್ರದ ನಿರ್ದೇಶಕ ಸಂದೀಪ್​ ರೆಡ್ಡಿ ಅವರೇ ಕಬೀರ್​ ಸಿಂಗ್​ಗೆ ಆ್ಯಕ್ಷನ್ ಕಟ್​ ಹೇಳುತ್ತಿದ್ದಾರೆ. ಸ್ವಮೇಕ್ ಚಿತ್ರದಲ್ಲಿ ವಿಜಯ್ ದೇವರಕೊಂಡ ನಿಭಾಯಿಸಿದ್ದ ಪಾತ್ರದಲ್ಲಿ ಶಾಹೀದ್​ ಕಪೂರ್ ನಟಿಸುತ್ತಿದ್ದಾರೆ. ನಟಿ ಕೈರಾ ಅದ್ವಾನಿ ಶಾಹೀದ್​ಗೆ ಜತೆಯಾಗಿ ನಟಿಸುತ್ತಿದ್ದಾರೆ.

ಸದ್ಯ ರಿಲೀಸ್ ಆಗಿರುವ ಕಬೀರ್ ಸಿಂಗ್ ಟ್ರೇಲರ್​​ನಲ್ಲಿ ಶಾಹೀದ್​ ಕಪೂರ್​ ರಫ್​ ಆ್ಯಂಡ್​ ಟಪ್​ ಆಗಿ ಕಾಣಿಸಿಕೊಂಡಿದ್ದಾರೆ. ದೇವರಕೊಂಡನಂತೆ ರೌಡಿ ಲುಕ್​ನಲ್ಲಿ ಶಾಹೀದ್ ಮಿಂಚಿದ್ದಾರೆ. ರಾ ಲುಕ್​​ ಶಾಹೀದ್​ಗೆ ಸಖತ್​ ಸೂಟ್ ಆಗಿದೆ. ಎರಡು ನಿಮಿಷದ ಟ್ರೇಲರ್​ನಲ್ಲಿರುವ ಸಂಭಾಷಣೆ, ಕೆಲ ಸೀನ್​​ಗಳು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸುತ್ತಿದೆ. ಜೂನ್​ 21 ರಂದು ತೆರೆ ಮೇಲೆ ಕಬೀರ್ ಸಿಂಗ್​ ಅಬ್ಬರ ಶುರುವಾಗಲಿದೆ.

ABOUT THE AUTHOR

...view details