ಕರ್ನಾಟಕ

karnataka

ETV Bharat / sitara

ನಾವೆಲ್ಲರೂ ನಿಧಾನವಾಗಿ ನಮ್ಮ ಜೀವನವನ್ನು ಮರುಹೊಂದಿಸಲು ಪ್ರಾರಂಭಿಸಬೇಕು: ಅರ್ಜುನ್ ಕಪೂರ್

ಇತ್ತೀಚೆಗೆ ಜಾಹಿರಾತಿನ ಚಿತ್ರೀಕರಣ ಮಾಡಿದ ಅರ್ಜುನ್ ಕಪೂರ್, ಎಲ್ಲರೂ ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಬೇಕಾಗುತ್ತದೆ. ನಮ್ಮ ಚಿತ್ರದ ಸೆಟ್​ನಲ್ಲಿ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿದೆ ಎಂದು ಹೇಳಿದರು.

By

Published : Jul 11, 2020, 12:37 PM IST

arjun  kapoor
arjun kapoor

ಮುಂಬೈ:ಸುಮಾರು ನಾಲ್ಕು ತಿಂಗಳ ನಂತರ ಚಿತ್ರೀಕರಣಕ್ಕೆ ಕಾಲಿಟ್ಟ ನಟ ಅರ್ಜುನ್ ಕಪೂರ್, ಎಲ್ಲರೂ ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.

"ನಮ್ಮಲ್ಲಿ ಪ್ರತಿಯೊಬ್ಬರೂ ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಬೇಕು ಮತ್ತು ನಿಧಾನವಾಗಿ ನಮ್ಮ ಜೀವನವನ್ನು ಮರುಹೊಂದಿಸಲು ಪ್ರಾರಂಭಿಸಬೇಕು ಎಂದು ನಾನು ಭಾವಿಸುತ್ತೇನೆ. ವಿಷಯಗಳು ಬದಲಾಗಿವೆ, ಆದರೆ ನಾವೆಲ್ಲರೂ ಕೆಲಸ ಮಾಡಬೇಕಾಗುತ್ತದೆ. ನಾವೆಲ್ಲರೂ ನಮ್ಮ ಕುಟುಂಬಗಳನ್ನು ಬೆಂಬಲಿಸಬೇಕಾಗುತ್ತದೆ" ಎಂದು ಹೇಳಿದರು.

4 ತಿಂಗಳ ನಂತರ ಅವರು ಜಾಹಿರಾತಿನ ಚಿತ್ರೀಕರಣದಲ್ಲಿ ಭಾಗಿಯಾದರು. ಚಿತ್ರೀಕರಣದ ಸೆಟ್‌ಗಳಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

"ನಾನು ಪ್ರಾರಂಭದಲ್ಲಿ ಸ್ವಲ್ಪ ಗೊಂದಲಕ್ಕೊಳಗಾಗಿದ್ದೆ. ಆದರೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ನೋಡಿದಾಗ ಸಮಾಧಾನವಾಯಿತು. ಬಹಳ ದಿನಗಳ ಬಳಿಕ ಮತ್ತೆ ಕೆಲಸಕ್ಕೆ ಇಳಿಯುವುದು ಆರಂಭದಲ್ಲಿ ಮಾನಸಿಕವಾಗಿ ಸ್ವಲ್ಪ ಕಷ್ಟಕರವಾಗಿರುತ್ತದೆ. ಆದರೆ ನಮ್ಮ ಫಿಲಂ ಸೆಟ್​ನಲ್ಲಿ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿದೆ" ಎಂದು ಅವರು ಹೇಳಿದರು.

ಅರ್ಜುನ್ ಜೊತೆಗೆ ತಾಪ್ಸಿ ಪನ್ನು, ವಿದ್ಯಾ ಬಾಲನ್ ಮತ್ತು ಆಯುಷ್ಮಾನ್ ಖುರಾನಾ ಅವರಂತಹ ನಟರು ಕೂಡಾ ಲಾಕ್ ಡೌನ್ ನಂತರ ಸೆಟ್‌ಗಳಿಗೆ ಕಾಲಿಟ್ಟಿದ್ದಾರೆ.

ಆಯುಷ್ಮಾನ್ ಖುರಾನ ಇತ್ತೀಚೆಗೆ ಚಂಡೀಗಢದಲ್ಲಿ ಜಾಹೀರಾತಿಗಾಗಿ ಚಿತ್ರೀಕರಣ ನಡೆಸಿದ್ದರೆ, ತಾಪ್ಸಿ ಪನ್ನು ಕೂಡಾ ತಮ್ಮ ಚಿತ್ರದ ಶೂಟಿಂಗ್ ಪುನರಾರಂಭಿಸಿದ್ದಾರೆ. ಕೆಲವು ದಿನಗಳ ಹಿಂದೆ ಟಿವಿ ತಾರೆಗಳಾದ ಅನಿತಾ ಹನ್ಸನಂದಿನಿ ಮತ್ತು ನಿಯಾ ಶರ್ಮಾ ನಾಗಿನ್ 4 ಸಿರಿಯಲ್​ನ ಚಿತ್ರೀಕರಣದಲ್ಲಿದ್ದರು. ಮುಂಬರುವ ತಿಂಗಳುಗಳಲ್ಲಿ ಶೂಟಿಂಗ್ ಪುನರಾರಂಭಗೊಳ್ಳಲಿದೆ ಎಂದು ಅನೇಕ ಚಲನಚಿತ್ರ ನಿರ್ಮಾಣ ಸಂಸ್ಥೆಗಳು ಘೋಷಿಸಿವೆ. ಅಕ್ಷಯ್ ಕುಮಾರ್ ಅಭಿನಯದ ಬೆಲ್ ಬಾಟಮ್ ಚಿತ್ರೀಕರಣವೂ ಆಗಸ್ಟ್​ನಲ್ಲಿ ಪ್ರಾರಂಭಗೊಳ್ಳಲಿದೆ.

ABOUT THE AUTHOR

...view details