ಮುಂಬೈ :ಬಾಲಿವುಡ್ ಬೋಲ್ಡ್ ನಟಿ, ನಿರೂಪಕಿ ನೇಹಾ ಧೂಪಿಯಾ 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ಹುಟ್ಟು ಹಬ್ಬಕ್ಕೆ ಪತಿ ಅಂಗದ್ ಬೇಡಿ, ಹೃದಯಸ್ಪರ್ಶಿ ಬರಹ ಬರೆಯುವ ಮೂಲಕ ಪತ್ನಿಯ ಮನಸ್ಸು ಗೆದ್ದಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ನೇಹಾ ಧೂಪಿಯಾ ಪತಿ ಅಂಗದ್ ಒಂದು ಫೋಟೋವನ್ನು ಪೋಸ್ಟ್ ಮಾಡಿದ್ದು, ನೇಹಾ ಬರ್ತ್ಡೇಗೆ ಶುಭ ಕೋರಿ ಬರಹವನ್ನು ಬರೆದಿದ್ದಾರೆ. ''ನನ್ನ ಶಕ್ತಿಯ ಆಧಾರ ಸ್ತಂಭಕ್ಕೆ ಜನ್ಮದಿನದ ಶುಭಾಶಯಗಳು.. ನೀನು ಕೇವಲ ಆಗಸ್ಟ್ 27ನೇ ದಿನ ಮಾತ್ರವಲ್ಲ ಜೀವನಪೂರ್ತಿ ಪ್ರತಿದಿನವೂ ಸಂಭ್ರಮದ ಆಚರಣೆ ಇರುತ್ತದೆ. ವಾಹೇಗುರು ನೀನೂ ಬಯಸಿದ್ದಕ್ಕಿಂತ ಹೆಚ್ಚಿನದನು ನೀಡಲಿ.. ನಾನು ಈ ಜೀವನದಲ್ಲಿ ನಿಮ್ಮ ಅದ್ಭುತ ಪ್ರಯಾಣದ ಒಂದು ಸಣ್ಣ ಭಾಗವಾಗಿದ್ದೇನೆ.. ಮುಂಬರುವ ವರ್ಷಗಳನ್ನು ಒಟ್ಟಿಗೆ ಸ್ಮರಣೀಯವಾಗಿಸಬೇಕೆಂದು ನಾನು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.