ಮುಂಬೈ : ಲೋಕಸಭೆಯ ಚುನಾವಣೆಯಲ್ಲಿ ವೋಟ್ ಹಾಕದಿರುವ ಬಗ್ಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಎಲ್ಲಿಯೂ ಮಾತನಾಡುತ್ತಿಲ್ಲ. ಈ ಬಗ್ಗೆ ಇಂದು ಮಾಧ್ಯಮಗಳ ಕೇಳಿದ ಪ್ರಶ್ನೆಯಿಂದ ಅವರು ಜಾರಿಕೊಂಡ್ರು.
'ಮತದಾನ ಮಿಸ್' ....ಮಾಧ್ಯಮಗಳ ಪ್ರಶ್ನೆಗೆ 'ಕಿಲಾಡಿ' ರಿಯಾಕ್ಷನ್ ಹೇಗಿತ್ತು ಗೊತ್ತಾ ? - ರಿಯಾಕ್ಷನ್
ಮತ ಹಾಕದಿರುವ ಬಗ್ಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮೌನ ಮುಂದುವರೆದಿದೆ. ಈ ಮಾಧ್ಯಮಗಳಿಂದ ತೂರಿ ಬಂದ ಪ್ರಶ್ನೆಗೆ ಅವರು ಯಾವುದೇ ಉತ್ತರ ನೀಡದೆ ಜಾರಿಕೊಂಡಿದ್ದಾರೆ.
ಮೊನ್ನೆ (ಸೋಮವಾರ ) ನಡೆದ ಲೋಕಸಭೆಯ ನಾಲ್ಕನೇ ಹಂತದ ಮತದಾನದಂದು ಅಕ್ಷಯ್ ವೋಟ್ ಮಾಡಿರಲಿಲ್ಲ. ಕಿಲಾಡಿಯ ಈ ನಡೆಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ದೇಶ, ದೇಶಭಕ್ತಿ ಅಂತಾ ಬಂದಾಗ ಮೊದಲು ಅಕ್ಷಯ್ ಕುಮಾರ್ ಹೆಸರೇ ಮುಂಚೂಣಿಯಲ್ಲಿರುತ್ತೆ. ಅವರ ಕೆಲವೊಂದು ಚಿತ್ರಗಳು ಕೂಡ, ದೇಶಪ್ರೇಮವನ್ನು ಬಿಂಬಿಸುವಂತಿವೆ. ಅಷ್ಟೇ ಏಕೆ ಮೊನ್ನೆಯಷ್ಟೆ ಪ್ರಧಾನಿ ಮೋದಿ ಅವರನ್ನು ಸಂದರ್ಶಿಸಿ ದೇಶ್ಯಾದ್ಯಂತ ಸುದ್ದಿಯಾಗಿದ್ದರು. ಆದರೆ, ಪ್ರಜಾಪಭುತ್ವದಲ್ಲಿ ಮಹತ್ವದ ಪಾತ್ರವಹಿಸುವ 'ಮತ ಚಲಾವಣೆ'ಯನ್ನೇ ಅಕ್ಷಯ್ ಮರೆತು ಟೀಕೆಗೆ ಗುರಿಯಾಗಿದ್ದರು.
ಇಂದು ಚಿತ್ರವೊಂದರ ಪ್ರೀಮಿಯರ್ಗೆ ಬಂದಿದ್ದ ಅಕ್ಷಯ್ ಅವರಿಗೆ ಮಾಧ್ಯಮಗಳಿಂದ 'ಮತದಾನ ಮಿಸ್' ಮಾಡಿದ್ದರ ಬಗ್ಗೆ ಪ್ರಶ್ನಿಸಲಾಯಿತು. ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ಅವರು, 'ಲೆಟ್ಸ್ ಗೋ.. ಲೆಟ್ಸ್ ಗೋ' ಎನ್ನುತ್ತಲೇ ಮುಂದೆ ಹೋಗಿದ್ದಾರೆ.