ಮಿಲ್ಕಿ ಬ್ಯೂಟಿ ಎಂದೇ ಹೆಸರಾಗಿರುವವರು ನಟಿ ತಮನ್ನಾ. ತೆಲುಗು, ತಮಿಳಿನಲ್ಲಿ ತನ್ನದೇ ಆದ ಹೆಸರು ಮಾಡಿರುವ ಈ ನಟಿ ದಕ್ಷಿಣ ಭಾರತದ ಅತ್ಯಂತ ಬ್ಯುಸಿ ನಟಿಯಲ್ಲಿ ಒಬ್ಬರು. ಹಿಂದಿಯಲ್ಲಿಯೂ ತಮ್ಮ ಅದೃಷ್ಟ ಪರೀಕ್ಷಿಸಿದ ಈ ನಟಿಗೆ ಇಂದು 32ನೇ ವಸಂತದ ಸಂಭ್ರಮ. 17 ವರ್ಷಗಳ ಹಿಂದೆ ಸಿನಿ ಜಗತ್ತಿಗೆ ಕಾಲಿರಿಸಿ ಇವರು ಈಗಾಗಲೇ 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಜನ್ಮದಿನದ ಸಂಭ್ರಮದಲ್ಲಿ ಮಿಲ್ಕಿ ಬ್ಯೂಟಿ.. ಸಾಮಾಜಿಕ ಜಾಲತಾಣದಲ್ಲಿ ತಮನ್ನಾಗೆ ಶುಭಾಶಯಗಳ ಮಹಾಪೂರ - ತಮನ್ನಾ ಭಾಟಿಯಾ ಚಿತ್ರಗಳು
ಮಿಲ್ಕಿ ಬ್ಯೂಟಿ ತಮನ್ನಾಗೆ ಇಂದು 32ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿ ತಮನ್ನಾ ಭಾಟಿಯಾ 2005ರಂದು ‘ಚಾಂದ್ ಸಾ ರೋಶನ್ ಚೆಹರಾ’ ಎಂಬ ಹಿಂದಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಜನ್ಮದಿನದ ಸಂಭ್ರಮದಲ್ಲಿ ಮಿಲ್ಕಿ ಬ್ಯೂಟಿ
‘ಬಾಹುಬಲಿ’ ಚಿತ್ರದ ಮೂಲಕ ತಮನ್ನಾ ಇನ್ನಷ್ಟು ಜನಪ್ರಿಯತೆ ಪಡೆದರು. ತಮನ್ನಾ 1989 ಡಿಸೆಂಬರ್ 21ರಂದು ಜನಿಸಿದ್ದು, ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸಿನಿಮಾ ತಾರೆಯರು ಸೇರಿದಂತೆ ಅನೇಕ ಗಣ್ಯರು ಇಂದು ಸಾಮಾಜಿಕ ಜಾಲತಾಣದಲ್ಲಿ ತಮನ್ನಾಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ.