ಕರ್ನಾಟಕ

karnataka

ETV Bharat / sitara

ಸುಶಾಂತ್​ ಆತ್ಮಹತ್ಯೆ ಪ್ರಕರಣ​: 3ನೇ ದಿನದ ಎನ್​​ಸಿಬಿ ವಿಚಾರಣೆಗೆ ರಿಯಾ ಹಾಜರು - ಸ್ಯಾಮ್ಯುಯೆಲ್ ಮಿರಾಂಡಾ

ಸುಶಾಂತ್​ ಸಿಂಗ್ ರಜಪೂತ್​ ಸಾವಿನ ಪ್ರಕರಣ ಸಂಬಂಧ ಡ್ರಗ್ಸ್ ಲಿಂಕ್ ಕುರಿತ ತನಿಖೆ ನಡೆಸಲಾಗುತ್ತಿದ್ದು, ಮೂರನೇ ದಿನದ ಎನ್​​ಸಿಬಿ ವಿಚಾರಣೆಗೆ ನಟಿ ರಿಯಾ ಚಕ್ರವರ್ತಿ ಹಾಜರಾಗಿದ್ದಾರೆ.

Actor Rhea Chakraborty arrives at NCB office
ರಿಯಾ

By

Published : Sep 8, 2020, 11:54 AM IST

ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್ ರಜಪೂತ್​ ಸಾವಿನ ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ಭೇದಿಸಲಾಗುತ್ತಿದೆ. ಪ್ರಕರಣ ಸಂಬಂಧ ಡ್ರಗ್ಸ್ ಲಿಂಕ್ ಕುರಿತ ತನಿಖೆ ನಡೆಸಲಾಗುತ್ತಿದ್ದು, ವಿಚಾರಣೆಗಾಗಿ ನಟಿ ರಿಯಾ ಚಕ್ರವರ್ತಿ ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್​​ಸಿಬಿ) ಕಚೇರಿಗೆ ಆಗಮಿಸಿದ್ದಾರೆ.

ಎನ್​​ಸಿಬಿ ವಿಚಾರಣೆಗೆ ಹಾಜರಾದ ರಿಯಾ ಚಕ್ರವರ್ತಿ

ಎನ್​​ಸಿಬಿ ವಿಚಾರಣೆಗೆ ರಿಯಾ ಈಗ ಮೂರನೇ ಬಾರಿ ಹಾಜರಾದಂತಾಗಿದೆ. ಭಾನುವಾರ ಆರು ಗಂಟೆಗಳ ಕಾಲ ಹಾಗೂ ಸೋಮವಾರ ಎಂಟು ಗಂಟೆಗಳ ಕಾಲ ಎನ್​​ಸಿಬಿ ಅಧಿಕಾರಿಗಳು ರಿಯಾಳನ್ನು ವಿಚಾರಣೆಗೆ ಒಳಪಡಿಸಿದ್ದರು. ಒಟ್ಟು ಎರಡು ಎನ್​​ಸಿಬಿ ತಂಡಗಳು ವಿಚಾರಣೆ ನಡೆಸುತ್ತಿವೆ.

ಪ್ರಕರಣ ಸಂಬಂಧ ಸುಶಾಂತ್​ ಮನೆಯ ನಿರ್ವಾಹಕನಾಗಿದ್ದ ಸ್ಯಾಮ್ಯುಯೆಲ್ ಮಿರಾಂಡಾ ಎಂಬುವರನ್ನು ಸೆ. 9ರವರೆಗೆ ಎನ್​​ಸಿಬಿ ಕಸ್ಟಡಿಗೆ ನೀಡಲಾಗಿದೆ. ವಿಚಾರಣೆ ವೇಳೆ ಸ್ಯಾಮ್ಯುಯೆಲ್ ಮಿರಾಂಡಾ ಬಗ್ಗೆ ತನಗೆ ತಿಳಿದಿದೆ ಎಂದು ರಿಯಾ ಚಕ್ರವರ್ತಿ ಎನ್‌ಸಿಬಿ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ABOUT THE AUTHOR

...view details