ಕರ್ನಾಟಕ

karnataka

ETV Bharat / sitara

ತಡರಾತ್ರಿ ಆಸ್ಪತ್ರೆಯ ಕಾರಿಡಾರ್​ನಲ್ಲಿ ವಾಕಿಂಗ್​ ಮಾಡುತ್ತಿರುವ ಫೋಟೋ ಹಂಚಿಕೊಂಡ ಅಭಿಷೇಕ್ ಬಚ್ಚನ್​ - ನಾನಾವತಿ ಆಸ್ಪತ್ರೆಯಲ್ಲಿ ಅಭಿಷೇಕ್ ಬಚ್ಚನ್ ವಾಕಿಂಗ್​

ಖಾಲಿ ಕಾರಿಡಾರ್​ನಲ್ಲಿ ನಡೆದಾಡುತ್ತಿರುವ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ನಟ ಅಭಿಷೇಕ್ ಬಚ್ಚನ್​, "ಸುರಂಗದ ಕೊನೆಯಲ್ಲಿ ಬೆಳಕು​, ತಡರಾತ್ರಿಯ ನಡಿಗೆ" ಎಂದು ಬರೆದುಕೊಂಡಿದ್ದಾರೆ..

abhishek bachchan late night walk
ಆಸ್ಪತ್ರೆಯಲ್ಲಿ ಅಭಿಷೇಕ್ ಬಚ್ಚನ್ ವಾಕಿಂಗ್​

By

Published : Jul 31, 2020, 4:53 PM IST

ಮುಂಬೈ :ಕೋವಿಡ್​ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್​ ನಟ ಅಭಿಷೇಕ್ ಬಚ್ಚನ್​ ತಡರಾತ್ರಿ ನಾನಾವತಿ ಆಸ್ಪತ್ರೆಯ ಕಾರಿಡಾರ್​​ನಲ್ಲಿ ಏಕಾಂಗಿಯಾಗಿ ವಾಕಿಂಗ್​ ಮಾಡುತ್ತಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಖಾಲಿ ಕಾರಿಡಾರ್​ನಲ್ಲಿ ನಡೆದಾಡುತ್ತಿರುವ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅವರು, "ಸುರಂಗದ ಕೊನೆಯಲ್ಲಿ ಬೆಳಕು​, ತಡರಾತ್ರಿಯ ನಡಿಗೆ" ಎಂದು ಬರೆದುಕೊಂಡಿದ್ದಾರೆ.

ನಿಮ್ಮ ತಂದೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಈಗ ನಿಮಗೆ ಯಾರು ಆಹಾರ ನೀಡ್ತಾರೆ ಎಂದು ವ್ಯಂಗ್ಯವಾಗಿ ವ್ಯಕ್ತಿಯೊಬ್ಬರು ಮಾಡಿರುವ ಟ್ವೀಟ್​ಗೆ ಜೂನಿಯರ್​ ಬಚ್ಚನ್​ ಅದೇ ಶೈಲಿಯಲ್ಲಿ ಉತ್ತರಿಸಿದ್ದು, ಸದ್ಯಕ್ಕೆ ನಾವಿಬ್ಬರು ಆಸ್ಪತ್ರೆಯ ಗೋಡೆಗೆ ಒರಗಿ ತಿನ್ನುತ್ತಿದ್ದೇವೆ ಎಂದು ಮಾರುತ್ತರ ನೀಡಿದ್ದಾರೆ.

ಇದಕ್ಕೂ ಮೊದಲು ಅಮಿತಾಬ್​​ ಬಚ್ಚನ್ ಕೊರೊನಾ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವಾರಿಯರ್​ಗಳಿಗೆ ಇನ್​ಸ್ಟಾಗ್ರಾಂನಲ್ಲಿ ಧನ್ಯವಾದ ಸಲ್ಲಿಸಿದ್ದರು.

ABOUT THE AUTHOR

...view details