ನವದೆಹಲಿ:ವಾಟ್ಸ್ಆ್ಯಪ್ ನೂತನ ಗೌಪ್ಯತಾ ನೀತಿ ಜಾರಿಗೆ ತಂದಿದ್ದು, ಇದೀಗ ಮೇ. 15ರೊಳಗೆ ಇದನ್ನ ಒಪ್ಪಿಕೊಳ್ಳದಿದ್ದರೆ ನಾವು ಬಳಕೆ ಮಾಡುವ ಮೊಬೈಲ್ಗಳಲ್ಲಿ ವಾಟ್ಸ್ಆ್ಯಪ್ಗೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ.
ಜನವರಿ 2021ರಿಂದ ಕಂಪನಿ ತನ್ನ ನೂತನ ಗೌಪ್ಯತಾ ನೀತಿಯಲ್ಲಿ ಕೆಲವೊಂದು ಬದಲಾವಣೆ ಮಾಡಿದ್ದು, ಇದೀಗ ಅದನ್ನ ಒಪ್ಪಿಕೊಳ್ಳಬೇಕಾಗಿದೆ. ಮೇ 15ರೊಳಗೆ ಇನ್ಸ್ಟಂಟ್ ಮೆಸ್ಸಿಜಿಂಗ್ ಆ್ಯಪ್ನ ಬಳಕೆ ಮಾಡುತ್ತಿದ್ದರೆ ಗೌಪ್ಯತಾ ನೀತಿ ಒಪ್ಪಿಕೊಳ್ಳಬೇಕಾಗಿದೆ.