ಸ್ಯಾನ್ ಫ್ರಾನ್ಸಿಸ್ಕೊ : ಭಾರತ ಮತ್ತು ಬ್ರೆಜಿಲ್ನಲ್ಲಿನ ತನ್ನ ಬಳಕೆದಾರರಿಗೆ ಇನ್ - ಆ್ಯಪ್ ಪೇಮೆಂಟ್ ಸೌಲಭ್ಯ ಪರಿಚಯಿಸಿದ ನಂತರ, ಮೆಟಾ ಒಡೆತನದ ವಾಟ್ಸ್ಆ್ಯಪ್ ಈಗ ಈ ಸೌಲಭ್ಯವನ್ನು ಸಿಂಗಾಪುರದಲ್ಲಿಯೂ ಆರಂಭಿಸಲಿದೆ. ಮೆಟಾದಲ್ಲಿ ವಾಣಿಜ್ಯ ಮತ್ತು ಹಣಕಾಸು ತಂತ್ರಜ್ಞಾನಗಳ ಮುಖ್ಯಸ್ಥ ಸ್ಟೀಫನ್ ಕ್ಯಾಸ್ರಿಯೆಲ್ ಅವರು ಮಂಗಳವಾರ ಈ ಬಗ್ಗೆ ಟ್ವೀಟ್ ಮಾಡಿದ್ದು, "ಸಿಂಗಾಪುರದಲ್ಲಿನ ವಾಟ್ಸ್ಆ್ಯಪ್ ಬಳಕೆದಾರರು ಈಗ ಸ್ಥಳೀಯ ವ್ಯಾಪಾರಗಳಿಗೆ ಸರಕು ಮತ್ತು ಸೇವೆಗಳಿಗೆ ತಾವು ಬಯಸಿದಾಗ ಸರಳ ಮತ್ತು ಸುರಕ್ಷಿತವಾಗಿ ವಾಟ್ಸ್ಆ್ಯಪ್ ಚಾಟ್ಗಳಲ್ಲಿ ಪೇಮೆಂಟ್ ಮಾಡಬಹುದು" ಎಂದು ಹೇಳಿದ್ದಾರೆ.
ಈ ಕ್ಷೇತ್ರದಲ್ಲಿ ಸೌಲಭ್ಯಗಳನ್ನು ಆರಂಭಿಸಲು ಮೆಟಾ, ಐರಿಷ್ ಅಮೆರಿಕನ್ ಹಣಕಾಸು ಕಂಪನಿ ಸ್ಟ್ರೈಪ್ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ವಾಟ್ಸ್ಆ್ಯಪ್ ಈ ಪೇಮೆಂಟ್ ವೈಶಿಷ್ಟ್ಯವನ್ನು ಸ್ಟ್ರೈಪ್ ಕನೆಕ್ಟ್ ಮತ್ತು ಸ್ಟ್ರೈಪ್ ಚೆಕೌಟ್ ಗಳೊಂದಿಗೆ ತಯಾರಿಸಿದೆ. ಹೀಗಾಗಿ ಆನ್ಲೈನ್ ಹಾಗೂ ಆಫ್ಲೈನ್ ಎರಡರ ಮೂಲಕವೂ ಇನ್-ಆ್ಯಪ್ ಪೇಮೆಂಟ್ ಮಾಡಬಹುದಾಗಿದೆ. ಗ್ರಾಹಕರು ಸಿಂಗಾಪುರದಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ಪೆನಾವೊ ಫಂಡ್ ಟ್ರಾನ್ಸ್ಫರ್ ಸಿಸ್ಟಮ್ನೊಂದಿಗೆ ವ್ಯವಹಾರಗಳಿಗೆ ಪಾವತಿಸಬಹುದು ಎಂದು ವರದಿ ಹೇಳಿದೆ.
ಸಿಂಗಾಪೂರ್ನಲ್ಲಿ ನನಗೆ ತಿಳಿದಿರುವ ಹೆಚ್ಚಿನ ಜನರು ಪರಸ್ಪರ ಚಾಟ್ ಮಾಡಲು ವಾಟ್ಸ್ಆ್ಯಪ್ ಅನ್ನು ಬಳಸುತ್ತಾರೆ ಎಂದು ಸ್ಟ್ರೈಪ್ನಲ್ಲಿನ ಆಗ್ನೇಯ ಏಷ್ಯಾದ ಪ್ರಾದೇಶಿಕ ಮುಖ್ಯಸ್ಥೆ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಸರಿತಾ ಸಿಂಗ್ ಹೇಳಿದರು. ಈಗ ಅವರು ಅಪ್ಲಿಕೇಶನ್ ಬಳಸಿ ಸ್ಥಳೀಯ ವ್ಯಾಪಾರಿಗಳಿಗೂ ಪೇಮೆಂಟ್ ಮಾಡಬಹುದು. ವಾಟ್ಸ್ಆ್ಯಪ್ ಮೂಲಕ ಪಾವತಿಗಳ ಹೊಸ ಚಾನಲ್ಗಳೊಂದಿಗೆ ತಮ್ಮ ಆದಾಯದ ಸ್ಟ್ರೀಮ್ಗಳನ್ನು ವಿಸ್ತರಿಸಲು ಮತ್ತು ವ್ಯಾಪಕವಾದ ಗ್ರಾಹಕರ ನೆಲೆಯನ್ನು ತಲುಪಲು ಸಹಾಯ ಮಾಡುತ್ತವೆ ಎಂದು ಅವರು ತಿಳಿಸಿದರು.