ಕರ್ನಾಟಕ

karnataka

ETV Bharat / science-and-technology

ಬಹುನಿರೀಕ್ಷಿತ Galaxy S23 ಸರಣಿ ಮೊಬೈಲ್​ ಫೆಬ್ರವರಿಯಲ್ಲಿ ಬಿಡುಗಡೆ - Galaxy S23 ಸರಣಿಯ ಮೊಬೈಲ್

ಮುಂದಿನ ವರ್ಷ ಫೆಬ್ರವರಿ ಮೊದಲ ವಾರದಲ್ಲಿ ನಡೆಯಲಿರುವ ಅನ್ಪ್ಯಾಕ್ಡ್ ಈವೆಂಟ್‌ನಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಾಗುವುದು ಎಂದು ಸ್ಯಾಮ್‌ಸಂಗ್ ಕಾರ್ಯನಿರ್ವಾಹಕರು ಬಹಿರಂಗಪಡಿಸಿದ್ದಾರೆ. ಮುಂಬರುವ Samsung Galaxy ಸರಣಿಯು ಜಾಗತಿಕವಾಗಿ Snapdragon ಪ್ರೊಸೆಸರ್‌ನಿಂದ ಚಾಲಿತವಾಗಲಿದೆ.

ಸ್ಯಾಮ್‌ಸಂಗ್
ಸ್ಯಾಮ್‌ಸಂಗ್

By

Published : Dec 13, 2022, 5:28 PM IST

ಸ್ಯಾನ್ ಫ್ರಾನ್ಸಿಸ್ಕೋ:ಸ್ಯಾಮ್‌ಸಂಗ್ ವಿಶಿಷ್ಟವಾಗಿ ತನ್ನ ಪ್ರಮುಖ S ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಪ್ರತಿ ವರ್ಷದ ಮೊದಲ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡುತ್ತದೆ. ಮುಂಬರುವ ಸ್ಯಾಮ್​ಸಂಗ್​ ಗ್ಯಾಲಕ್ಷಿ S23 ಸರಣಿಯ ಸ್ಮಾರ್ಟ್​ಪೋನ್​ಗಳನ್ನು ಫೆಬ್ರವರಿ 2023ರಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಕಂಪನಿ ಹೇಳಿದೆ.

ಸ್ಯಾಮ್​ಸಂಗ್​ ಗ್ಯಾಲಕ್ಷಿ S23 ಸರಣಿಯು ಕನಿಷ್ಠ ಮೂರು ಮಾದರಿಗಳನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗುತ್ತಿದೆ. ಅವುಗಳೆಂದರೆ Samsung Galaxy S23, Galaxy S23 Plus ಮತ್ತು Galaxy S23 ಅಲ್ಟ್ರಾ. ಅಲ್ಲದೇ ಇದು 8K 30fps ವಿಡಿಯೋ ರೆಕಾರ್ಡಿಂಗ್​ ಹೊಂದಿರುತ್ತದೆ ಎಂದು ವರದಿಯಾಗಿದೆ.

GSMArena ವರದಿಯ ಪ್ರಕಾರ, Galaxy S23 ಸರಣಿಯು ಚಿಪ್ ತಯಾರಕ ಕ್ವಾಲ್ಕಾಮ್‌ನ ಮೂರನೇ ತಲೆಮಾರಿನ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಟ್ವಿಟರ್​ ಬ್ಲೂ ಮತ್ತೆ ಜಾರಿ: ಖಾತೆಗಳ ಸಾಂಪ್ರದಾಯಿಕ ಬ್ಲೂ ಟಿಕ್ ರದ್ದು​

ಮುಂಬರುವ Galaxy S23 ಸರಣಿಯು ಜಾಗತಿಕವಾಗಿ ಸ್ನಾಪ್‌ಡ್ರಾಗನ್ ಪ್ರೊಸೆಸರ್‌ನಿಂದ ಚಾಲಿತವಾಗಲಿದೆ ಎಂದು Qualcomm ದೃಢಪಡಿಸಿತು. ಈ ನಡುವೆ ಮುಂದಿನ ವರ್ಷದ ಫೆಬ್ರವರಿ ಮೊದಲ ವಾರದಲ್ಲಿ ಅನ್ಪ್ಯಾಕ್ಡ್ ಈವೆಂಟ್‌ನಲ್ಲಿ S23 ಸರಣಿಯನ್ನು ಲಾಂಚ್​ ಮಾಡಲಾಗುವುದು ಎಂದು ಸ್ಯಾಮ್‌ಸಂಗ್ ಕಾರ್ಯನಿರ್ವಾಹಕರು ಬಹಿರಂಗಪಡಿಸಿದ್ದಾರೆ.

ಇನ್ನೂ ವಿನ್ಯಾಸದ ವಿಷಯಕ್ಕೆ ಬರುವುದಾದರೆ, Galaxy S23 ಮತ್ತು S23 ಪ್ಲಸ್ ಹಿಂಭಾಗದಲ್ಲಿ ಮರು ವಿನ್ಯಾಸಗೊಳಿಸಲಾದ ಕ್ಯಾಮೆರಾ ಬಂಪ್ ಬರುವ ಸಾಧ್ಯತೆ ಇದೆ. ಇದು Galaxy S22 ಅಲ್ಟ್ರಾದಲ್ಲಿರುವಂತೆಯೇ ಇರುತ್ತದೆ. ಎರಡೂ ಮಾದರಿಗಳು ಮೀಸಲಾದ ಅಲ್ಟ್ರಾ - ವೈಡ್ ಆಂಗಲ್ ಲೆನ್ಸ್, ಟೆಲಿಫೋಟೋ ಲೆನ್ಸ್ ಮತ್ತು ವೈಡ್ - ಆಂಗಲ್ ಲೆನ್ಸ್‌ನೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ.

Galaxy S23 Ultra ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಟೆಲಿಫೋಟೋ ಲೆನ್ಸ್, ಪೆರಿಸ್ಕೋಪ್ ಜೂಮ್ ಲೆನ್ಸ್, ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು ವೈಡ್-ಆಂಗಲ್ ಲೆನ್ಸ್‌ನೊಂದಿಗೆ ಕ್ವಾಡ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ. ಎಲ್ಲ ಮೂರು ರೂಪಾಂತರಗಳು ಹೊಸ ಮತ್ತು ಸುಧಾರಿತ ಅಲ್ಟ್ರಾ-ಸಾನಿಕ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಒಳಗೊಂಡಿರುವ ನಿರೀಕ್ಷೆಯಿದೆ.


ABOUT THE AUTHOR

...view details