ಕರ್ನಾಟಕ

karnataka

ETV Bharat / science-and-technology

ಸ್ಯಾಮ್ಸಂಗ್ Galaxy F54 5G ಲಾಂಚ್: ಇದರ ಬೆಲೆ ಎಷ್ಟು ಗೊತ್ತಾ? - ನೋ ಶೇಕ್ ಕ್ಯಾಮೆರಾ

ಸ್ಯಾಮ್ಸಂಗ್​​ನ ಹೊಸ 5ಜಿ ಸ್ಮಾರ್ಟ್​ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ. ಹೊಸ ಗ್ಯಾಲಕ್ಸಿ ಎಫ್ 54 5 ಜಿ ಮಾದರಿಯ ಬೆಲೆ 27,999 ಆಗಿದೆ.

Samsung India unveils Galaxy F54 5G with 108MP camera, 6.7-inch display
Samsung India unveils Galaxy F54 5G with 108MP camera, 6.7-inch display

By

Published : Jun 6, 2023, 1:42 PM IST

ನವದೆಹಲಿ : ಸ್ಯಾಮ್‌ಸಂಗ್ ತನ್ನ ಎಫ್ ಸರಣಿಯ 'ಗ್ಯಾಲಕ್ಸಿ ಎಫ್ 54 5 ಜಿ' ಸ್ಮಾರ್ಟ್​ಫೋನ್​ ಅನ್ನು ಮಂಗಳವಾರ ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು 108 ಎಂಪಿ ಕ್ಯಾಮೆರಾ ಮತ್ತು 6.7-ಇಂಚಿನ ಸೂಪರ್ AMOLED + 120Hz ಡಿಸ್‌ಪ್ಲೇ ಹೊಂದಿದೆ. ಇದು Meteor Blue ಮತ್ತು Stardust Silver ಹೀಗೆ ಎರಡು ಆಕರ್ಷಕ ವರ್ಣಗಳಲ್ಲಿ ಲಭ್ಯವಿದ್ದು, ಗ್ಯಾಲಕ್ಸಿ F54 8GB + 256GB ಸ್ಟೋರೇಜ್ ಮಾದರಿಯ ಬೆಲೆ ರೂ 27,999 ಆಗಿದೆ. ಸದ್ಯ ನೀವಿದನ್ನು ಕಂಪನಿಯ ಅಧಿಕೃತ ವೆಬ್‌ಸೈಟ್, ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿ ಖರೀದಿಸಬಹುದು.

ಸಾಟಿಯಿಲ್ಲದ 120 Hz ಸೂಪರ್ AMOLED+ ಡಿಸ್​ಪ್ಲೇ, 6000 mAh ಬ್ಯಾಟರಿ ಮತ್ತು 4 ಜನರೇಶನ್​ಗಳವರೆಗೆ OS ಅಪ್ಡೇಟ್​ಗಳೊಂದಿಗೆ ಸಂಯೋಜಿಸಲ್ಪಟ್ಟ Nightography ಮತ್ತು Astrolapse ನಂತಹ ವೈಶಿಷ್ಟ್ಯಗಳೊಂದಿಗೆ ನಾವು Galaxy F54 5G ನೊಂದಿಗೆ ಅತ್ಯುತ್ತಮ ಬಳಕೆದಾರ ಅನುಭವವನ್ನು ಖಾತರಿಪಡಿಸುತ್ತಿದ್ದೇವೆ ಎಂದು ಸ್ಯಾಮ್ಸಂಗ್ ಇಂಡಿಯಾದ MX ವಿಭಾಗದ ಹಿರಿಯ ಉಪಾಧ್ಯಕ್ಷ ರಾಜು ಪುಲ್ಲನ್ ಹೇಳಿದ್ದಾರೆ.

ಸ್ಮಾರ್ಟ್‌ಫೋನ್ 108 MP (OIS) ನೋ ಶೇಕ್ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ 8 MP ಅಲ್ಟ್ರಾ-ವೈಡ್ ಲೆನ್ಸ್, 2 MP ಮ್ಯಾಕ್ರೋ ಲೆನ್ಸ್ ಮತ್ತು 32 MP ಸೆಲ್ಫಿ ಕ್ಯಾಮೆರಾ ಜೊತೆಗೆ ಪ್ರಮುಖ ಕ್ಯಾಮೆರಾ ವೈಶಿಷ್ಟ್ಯಗಳಾದ Astrolapse ಮತ್ತು Nightography ಅನ್ನು ಹೊಂದಿದೆ. ಇದು ಮುಖ್ಯ ಮತ್ತು ಸೆಲ್ಫಿ ಕ್ಯಾಮೆರಾಗಳಲ್ಲಿ ಸೆಕೆಂಡಿಗೆ 30 ಫ್ರೇಮ್‌ಗಳಲ್ಲಿ ಅಲ್ಟ್ರಾ-ಎಚ್‌ಡಿ 4K ವೀಡಿಯೊ ರೆಕಾರ್ಡಿಂಗ್ ಅನ್ನು ಸಹ ಬೆಂಬಲಿಸುತ್ತದೆ.

ಇದಲ್ಲದೇ ಗ್ಯಾಲಕ್ಸಿ F54 25W ಸೂಪರ್ ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯದೊಂದಿಗೆ ಶಕ್ತಿಯುತ 6000 mAh ಬ್ಯಾಟರಿಯಿಂದ ಚಾಲಿತವಾಗಿದೆ. ಇದರಿಂದ ಗ್ರಾಹಕರು ಇದನ್ನು ಪುನಃ ಚಾರ್ಜ್ ಮಾಡದೇ ದಿನವಿಡೀ ಬಳಸಬಹುದು. ಫೋನ್ Exynos 1380 5nm ಪ್ರೊಸೆಸರ್‌ ಹೊಂದಿದ್ದು, ತಡೆರಹಿತ ಮಲ್ಟಿ ಟಾಸ್ಕಿಮಘ್ ಮತ್ತು ಅಡೆತಡೆ ಇಲ್ಲದ ಮುಕ್ತ ಅನುಭವಕ್ಕಾಗಿ ಹೆಚ್ಚಿನ ಶಕ್ತಿ ಮತ್ತು ವೇಗವನ್ನು ನೀಡುತ್ತದೆ.

ಇದರಲ್ಲಿ ವಾಯ್ಸ್ ಫೋಕಸ್ ವೈಶಿಷ್ಟ್ಯವಿದ್ದು ಇದು ಧ್ವನಿ ಮತ್ತು ವೀಡಿಯೊ ಕರೆಗಳ ಸಮಯದಲ್ಲಿ ಹಿನ್ನೆಲೆಯ ಶಬ್ದವನ್ನು ಕಡಿಮೆ ಮಾಡುತ್ತದೆ. ಇದರಿಂದ ಸಂಭಾಷಣೆಯು ತೀರಾ ಸ್ಪಷ್ಟವಾಗಿ ಕೇಳಿಸುತ್ತದೆ. ಹೊಸ ಸ್ಮಾರ್ಟ್​ಫೋನ್ ಇತ್ತೀಚಿನ One UI 5.1 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಬಳಕೆದಾರ ಸ್ನೇಹಿ ಇಂಟರ್ಫೇಸ್ ಮತ್ತು ತಡೆರಹಿತ ನ್ಯಾವಿಗೇಷನ್ ಅನುಭವ ನೀಡುತ್ತದೆ. ಇದು ನಾಲ್ಕು ಜನರೇಶನ್​ಗಳವರೆಗೆ OS ಅಪ್ಡೇಟ್​ಗಳನ್ನು ಮತ್ತು ಐದು ವರ್ಷಗಳವರೆಗೆ ಸೆಕ್ಯೂರಿಟಿ ಅಪ್ಡೇಟ್​ಗಳನ್ನು ಬೆಂಬಲಿಸುತ್ತದೆ.

ಸ್ಯಾಮ್‌ಸಂಗ್ ಇದು ದಕ್ಷಿಣ ಕೊರಿಯಾದ ಕಂಪನಿಯಾಗಿದ್ದು, ಮೂಲತಃ ಮಾರ್ಚ್ 1938 ರಲ್ಲಿ ಲೀ ಬೈಯುಂಗ್-ಚುಲ್ ಅವರಿಂದ ಒಂದು ಕಿರಾಣಿ ವ್ಯಾಪಾರದ ಅಂಗಡಿಯಾಗಿ ಸ್ಥಾಪನೆಯಾಗಿತ್ತು. ಕಂಪನಿಯು 1969 ರಲ್ಲಿ ಎಲೆಕ್ಟ್ರಾನಿಕ್ಸ್ ಉದ್ಯಮಕ್ಕೆ ಕಾಲಿಟ್ಟಿತು ಮತ್ತು ಅದರ ಮೊದಲ ಎಲೆಕ್ಟ್ರಾನಿಕ್ ಉತ್ಪನ್ನವು ಕಪ್ಪು ಬಿಳುಪು ದೂರದರ್ಶನವಾಗಿತ್ತು. ಶೀಘ್ರದಲ್ಲೇ, ಕಂಪನಿಯು ತನ್ನ ಉತ್ಪನ್ನಗಳನ್ನು ರಫ್ತು ಮಾಡಲು ಪ್ರಾರಂಭಿಸಿತು. 1970 ರಲ್ಲಿ ಕಂಪನಿಯು ಕೊರಿಯಾ ಸೆಮಿಕಂಡಕ್ಟರ್‌ನಲ್ಲಿ 50 ಪ್ರತಿಶತ ಪಾಲನ್ನು ಸ್ವಾಧೀನಪಡಿಸಿಕೊಂಡಿತು.

ಇದನ್ನೂ ಓದಿ : ಚಿಪ್​​ಸೆಟ್​ ಫೋನ್​ನ ಹಾರ್ಟ್​ ಆ್ಯಂಟ್​ ಬ್ರೈನ್: ಗ್ರಾಹಕರಲ್ಲಿ ಹೆಚ್ಚಿದ ಅರಿವು

ABOUT THE AUTHOR

...view details