ವಾಷಿಂಗ್ಟನ್: ಕ್ಷುದ್ರ ಗ್ರಹಗಳ ಅಧ್ಯಯನಕ್ಕೆ ಕಳುಹಿಸಬೇಕು ಎಂದುಕೊಂಡಿದ್ದ ’ಸೈಕ್ ಆಸ್ಟ್ರೈಡ್ ಮಿಷನ್’ 2022 ಯೋಜನೆಯನ್ನು ನಾಸಾ ರದ್ದುಗೊಳಿಸಿದೆ. ಕ್ಷುದ್ರಗ್ರಹಗಳಲ್ಲಿ ಲೋಹಗಳ ಬಗ್ಗೆ ಅಧ್ಯಯನ ಮಾಡಲು ಈ ಯೋಜನೆ ರೂಪಿಸಲಾಗಿತ್ತು.
ಬಾಹ್ಯಾಕಾಶ ನೌಕೆಯಗೆ ಅಳವಡಿಸಿಬೇಕಿದ್ದ ಸಾಫ್ಟ್‌ವೇರ್ ಮತ್ತು ಪರೀಕ್ಷಾ ಸಲಕರಣೆಗಳು ಸರಬರಾಜಿನಲ್ಲಿ ವ್ಯತ್ಯಯವಾಗಿದ್ದರಿಂದ ಈ ಯೋಜನೆ ತಡವಾಗಿದೆ. ಈ ಮೊದಲಿನ ಪ್ಲಾನ್ ಪ್ರಕಾರ ಆಗಸ್ಟ್ನಲ್ಲಿ ನೌಕೆ ಉಡ್ಡಯನ ಮಾಡಲು ಯೋಜಿಸಲಾಗಿತ್ತು. ಆದರೆ ಅಗತ್ಯ ಸಲಕರಣೆಗಳ ಪೂರೈಕೆ ತಡವಾಗಿದ್ದರಿಂದ ಸಂಪೂರ್ಣ ಪರೀಕ್ಷೆ ಮಾಡಲಾಗಿಲ್ಲ. ಹೀಗಾಗಿ ಮಿಷನ್ ಕಾರ್ಯಾಚರಣೆ ವಿಳಂಬವಾಗಿದೆ ಎಂದು ನಾಸಾ ತಿಳಿಸಿದೆ.
ದಕ್ಷಿಣ ಕ್ಯಾಲಿಫೋರ್ನಿಯಾದ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯಲ್ಲಿನ ಮಿಷನ್ ತಂಡವು, ’ಸೈಕ್ ಆಸ್ಟ್ರೈಡ್ ಮಿಷನ್ ಉಡ್ಡಯನಕ್ಕೆ ಎಲ್ಲ ಸಿದ್ಧತೆಗಳನ್ನು ಪರೀಕ್ಷೆ ಮಾಡಲು ಆರಂಭಿಸಿದಾಗ, ನೌಕೆಯಲ್ಲಿ ಸಾಫ್ಟ್‌ವೇರ್‌ನ ಟೆಸ್ಟ್‌ಬೆಡ್ ಸಿಮ್ಯುಲೇಟರ್‌ಗಳ ಹೊಂದಾಣಿಕೆ ಸಮಸ್ಯೆ ಕಂಡು ಬಂದಿದ್ದರಿಂದ ನಾಸಾ ಈ ನಿರ್ಧಾರ ಕೈಗೊಂಡಿದೆ.