ಕರ್ನಾಟಕ

karnataka

By ETV Bharat Karnataka Team

Published : Dec 19, 2023, 7:47 PM IST

ETV Bharat / science-and-technology

ದೀರ್ಘಾವಧಿ ಬ್ಯಾಟರಿಯ ಎಲಿಸ್ಟಾ ಇ-ಸೀರಿಸ್ ಸ್ಮಾರ್ಟ್​ವಾಚ್​ ಬಿಡುಗಡೆ: ಬೆಲೆ ರೂ.1,299 ರಿಂದ ಆರಂಭ

ಎಲೆಕ್ಟ್ರಾನಿಕ್ಸ್​ ಉಪಕರಣ ತಯಾರಕ ಕಂಪನಿ ಎಲಿಸ್ಟಾ ತನ್ನ ಹೊಸ ಸ್ಮಾರ್ಟ್​ವಾಚ್​ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

Elista launches 3 smartwatches with longer battery life
Elista launches 3 smartwatches with longer battery life

ನವದೆಹಲಿ:ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ವಸ್ತುಗಳು, ಐಟಿ ಮತ್ತು ಮೊಬೈಲ್ ಬಿಡಿಭಾಗಗಳ ತಯಾರಕ ಕಂಪನಿಯಾದ ಎಲಿಸ್ಟಾ ಮಂಗಳವಾರ ತನ್ನ ಇತ್ತೀಚಿನ ಸ್ಮಾರ್ಟ್ ರಿಸ್ಟ್ ಇ-ಸೀರಿಸ್ (SmartRist E-Series) ಸ್ಮಾರ್ಟ್ ವಾಚ್​ಗಳನ್ನು ಬಿಡುಗಡೆ ಮಾಡಿದೆ. ಹೊಸ ಸ್ಮಾರ್ಟ್ ವಾಚ್ ಸರಣಿಯು ಸ್ಮಾರ್ಟ್ ರಿಸ್ಟ್ ಇ-1, ಸ್ಮಾರ್ಟ್ ರಿಸ್ಟ್ ಇ-2 ಮತ್ತು ಸ್ಮಾರ್ಟ್ ರಿಸ್ಟ್ ಇ-4 ಎಂಬ ಮೂರು ವಿಭಿನ್ನ ವೈಶಿಷ್ಟ್ಯಗಳ ಸ್ಮಾರ್ಟ್ ವಾಚ್​ಗಳನ್ನು ಹೊಂದಿದೆ. ಹೊಸ ಸ್ಮಾರ್ಟ್​ವಾಚ್​ಗಳು ಎಲಿಸ್ಟಾದ ರಿಟೇಲ್ ನೆಟ್ ವರ್ಕ್ ಮಳಿಗೆಗಳಲ್ಲಿ ಮತ್ತು ಅಮೆಜಾನ್​ನಲ್ಲಿ 1,299 ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿರುತ್ತವೆ.

"ಈ ಸ್ಮಾರ್ಟ್ ವಾಚ್​ಗಳು ಆಕರ್ಷಕ ವಿನ್ಯಾಸದೊಂದಿಗೆ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿವೆ. ಆಧುನಿಕ ಶೈಲಿ ಮತ್ತು ಕಾರ್ಯಕ್ಷಮತೆಯ ಸಂಯೋಜನೆ ಇವುಗಳಲ್ಲಿದೆ. ಇತ್ತೀಚಿನ ತಂತ್ರಜ್ಞಾನದ ಆರೋಗ್ಯ ಮತ್ತು ಫಿಟ್ನೆಸ್ ಫೀಚರ್​ಗಳು ಇದರಲ್ಲಿದ್ದು, ಗ್ರಾಹಕರ ಅಗತ್ಯಗಳನ್ನು ಪೂರೈಸುತ್ತವೆ" ಎಂದು ಎಲಿಸ್ಟಾ ಸಿಇಒ ಪವನ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಿರಂತರ ಆರೋಗ್ಯ ಮತ್ತು ಫಿಟ್ನೆಸ್ ಮಾನಿಟರಿಂಗ್ ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ಈ ಸ್ಮಾರ್ಟ್ ವಾಚ್ ಗಳು ಎಸ್​ಪಿಒ 2 ಮಾನಿಟರಿಂಗ್, ಹೃದಯ ಬಡಿತ ಮಾನಿಟರ್, ರಕ್ತದೊತ್ತಡ ಮಾನಿಟರ್, ಸ್ಲೀಪ್ ಮಾನಿಟರ್ ಮತ್ತು ಪೆಡೋಮೀಟರ್ ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ಕೂಡ ಹೊಂದಿವೆ.

ಇದಲ್ಲದೇ ಈ 'ಮೇಡ್ ಇನ್ ಇಂಡಿಯಾ' ಸ್ಮಾರ್ಟ್​ವಾಚ್​ಗಳು ತಡೆ ರಹಿತ ಸಂಪರ್ಕಕ್ಕಾಗಿ ಸುಧಾರಿತ ಬ್ಲೂಟೂತ್ ಕರೆ ಸೌಲಭ್ಯ ಹೊಂದಿದ್ದು, ಆಂಡ್ರಾಯ್ಡ್, ಐಒಎಸ್ ಸ್ಮಾರ್ಟ್​ಪೋನ್​ಗಳು ಮತ್ತು ಟ್ಯಾಬ್ಲೆಟ್​ಗಳಿಗೆ ಕಂಪ್ಯಾಟಿಬಲ್ ಆಗಿವೆ. ಸ್ಮಾರ್ಟ್ ರಿಸ್ಟ್ ಇ-1 ಮತ್ತು ಇ-2 51.05 ಎಂಎಂ (2.01 ಇಂಚಿನ) ಐಪಿಎಸ್ ಡಿಸ್​ಪ್ಲೇ (240 x 296 ಪಿಕ್ಸೆಲ್) ಹೊಂದಿದ್ದು, 600 ಎನ್ಐಟಿಎಸ್ ಪ್ರಕಾಶಮಾನತೆ ನೀಡುತ್ತವೆ.

ಈ ಎರಡೂ ವೇರೆಬಲ್ ಸ್ಮಾರ್ಟ್​ಫೋನ್​ಗಳು ವೈರ್ ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತವೆ. ಒಂದು ಪೂರ್ಣ ಚಾರ್ಜಿಂಗ್​ನಿಂದ 15 ದಿನಗಳವರೆಗೆ ಬಳಸಬಹುದು ಎಂದು ಕಂಪನಿ ತಿಳಿಸಿದೆ. ಈ ಸರಣಿಯ ಸ್ಮಾರ್ಟ್ ವಾಚ್​ಗಳು ಸ್ಟ್ರಾಪ್​ಗಳೊಂದಿಗೆ ಸ್ಥಿತಿಸ್ಥಾಪಕ ನೀರು - ನಿರೋಧಕ ಮೆಟಾಲಿಕ್ ಫ್ರೇಮ್ ಅನ್ನು ಹೊಂದಿದೆ ಎಂದು ಕಂಪನಿ ಉಲ್ಲೇಖಿಸಿದೆ. ಎಲ್ಲ ಸ್ಮಾರ್ಟ್ ವಾಚ್​ಗಳು ಕ್ಲೌಡ್ ಆಧಾರಿತ ವಾಚ್ ಫೇಸ್​ಗಳು ಮತ್ತು ಹೆಚ್ಚುವರಿ ಅನುಕೂಲಕ್ಕಾಗಿ ಆಲ್ವೇಸ್-ಆನ್ ಡಿಸ್ ಪ್ಲೇ ಮೋಡ್ ಅನ್ನು ಹೊಂದಿವೆ.

ಇದನ್ನೂ ಓದಿ : ಶೇ 45ರಷ್ಟು ಐಟಿ-ಟೆಕ್ ಪದವೀಧರರು ಮಾತ್ರ ನೇಮಕಾತಿಗೆ ಅರ್ಹರು; ಅಧ್ಯಯನ ವರದಿ

ABOUT THE AUTHOR

...view details