ಹೈದರಾಬಾದ್: ವಿಶ್ವದಲ್ಲೇ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್‌ಸಿ) ನಡೆಸುವ ಭಾರತೀಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ವಿಶ್ವದಾದ್ಯಂತ ಅಗಾಧವಾದ ಜನಪ್ರಿಯತೆ ಹೊಂದಿರುವ OpenAIನ ಚಾಟ್‌ಬಾಟ್ ಚಾಟ್‌ಜಿಪಿಟಿ ಪರೀಕ್ಷೆಯಲ್ಲಿ ಅನುತ್ತಿರ್ಣವಾಗಿದೆ ಎಂದು ವರದಿಯಾಗಿದೆ. ಅನಾಲಿಟಿಕಲ್ ಇಂಡಿಯಾ ಮ್ಯಾಗಜೀನ್ ನಡೆಸಿದ ಯುಪಿಎಸ್‌ಸಿ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಚಾಟ್‌ಜಿಪಿಟಿ 100ಕ್ಕೆ 54 ಅಂಕಗಳಿಸಿದೆ.
ಬೆಂಗಳೂರು ಮೂಲದ ಅನಾಲಿಟಿಕ್ಸ್ ಇಂಡಿಯಾ ಮ್ಯಾಗಜೀನ್ ಕೃತಕ ಬುದ್ದಿಮತ್ತೆಯ ಕೃತಕ ಪ್ರಾವೀಣ್ಯತೆಯನ್ನು ಪರೀಕ್ಷಿಸುವ ಸಲುವಾಗಿ, ಭೂಗೋಳ, ಅರ್ಥಶಾಸ್ತ್ರ, ಇತಿಹಾಸ, ಪರಿಸರ ವಿಜ್ಞಾನ, ಸಾಮಾನ್ಯ ವಿಜ್ಞಾನ ಮತ್ತು ಪ್ರಚಲಿತ ವಿಷಯಗಳ ಮೇಲೆ ವಿಭಿನ್ನ ಪ್ರಶ್ನೆಗಳೊಂದಿಗೆ ನಾಗರಿಕ ಸೇವಾಗಳ ಪರೀಕ್ಷೆಯನ್ನು ತೆಗೆದುಕೊಳ್ಳಲು ಒಳಪಡಿಸಿತು. ಅನಾಲಿಟಿಕಲ್ ಇಂಡಿಯಾ ಮ್ಯಾಗಜೀನ್ ನಡೆಸಿದ ಪರೀಕ್ಷೆಯಲ್ಲಿ, UPSC 2022ರ ಪ್ರಿಲಿಮ್ಸ್ ಪ್ರಶ್ನೆ ಪತ್ರಿಕೆ 1ರಲ್ಲಿ ಚಾಟ್ಜಿಪಿಟಿಯು 100 ಪ್ರಶ್ನೆಗಳಿಗೆ ಎಲ್ಲವನ್ನು ಉತ್ತರಿಸುವ ಅಗತ್ಯವಿತ್ತು. ಆದರೆ ‘‘ಚಾಟ್ಜಿಪಿಟಿಯು 100 ಪ್ರಶ್ನೆಗಳಲ್ಲಿ 54 ಪ್ರಶ್ನೆಗಳಿಗೆ ಮಾತ್ರ ಸರಿಯಾಗಿ ಉತ್ತರಿಸಿದೆ’’ ಎಂದು ನಿಯತಕಾಲಿಕವು ವರದಿ ಮಾಡಿದೆ.
ಅರ್ಥಶಾಸ್ತ್ರ ಮತ್ತು ಭೂಗೋಳ ವಿಷಯದ ಬಗ್ಗೆ ತಪ್ಪು ಉತ್ತರ : ಚಾಟ್ಜಿಪಿಟಿಯ ಜ್ಞಾನವು ಸೆಪ್ಟೆಂಬರ್ 2021ಕ್ಕೆ ಸೀಮಿತವಾಗಿದ್ದು, ಪ್ರಸ್ತುತ ಘಟನೆಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಲು ಚಾಟ್ಬಾಟ್ನಿಂದ ಸಾಧ್ಯವಾಗಲಿಲ್ಲ. ಅಷ್ಟೇ ಅಲ್ಲ ಅರ್ಥಶಾಸ್ತ್ರ ಮತ್ತು ಭೂಗೋಳ ಸಮಯ-ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಚಾಟ್ಜಿಪಿಟಿಗೆ ಸರಿಯಾದ ಉತ್ತರವನ್ನು ನೀಡಲು ಸಾಧ್ಯವಾಗಲಿಲ್ಲ ಎಂದು ಅನಾಲಿಟಿಕ್ಸ್ ಇಂಡಿಯಾ ಮ್ಯಾಗಜೀನ್ ತಿಳಿಸಿದೆ.
ಚಾಟ್ಜಿಪಿಟಿಯು ಈಗಾಗಲೇ ಅಮೆರಿಕದಲ್ಲಿ ಹಲವಾರು ಪರೀಕ್ಷೆಗಳನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದು, ಇದರಲ್ಲಿ ಯುನೈಟೆಡ್ ಸ್ಟೇಟ್ಸ್ ವೈದ್ಯಕೀಯ ಪರವಾನಗಿ ಪರೀಕ್ಷೆ (USMLE) ಮತ್ತು MBA ಪರೀಕ್ಷೆಗಳನ್ನು ಸೇರಿ ಹಲವಾರು ಪರೀಕ್ಷೆಯಲ್ಲಿ ಉತ್ತಿರ್ಣವಾಗಿದೆ. ಚಾಟ್ಜಿಪಿಟಿಯು ಲೆವಲ್ 3 ಇಂಜಿನಿಯರ್ಗಳಿಗಾಗಿ ನಡೆಸುವ ಗೂಗಲ್ ಕೋಡಿಂಗ್ ಸಂದರ್ಶನವನ್ನು ಸಹ ತೆರವುಗೊಳಿಸಿದೆ.
ಇಂಟರ್ನೆಟ್ ಬೇಕಾಗಿಲ್ಲ: ಚಾಟ್‌ಜಿಪಿಟಿಯನ್ನು ಮಾನವನ ರೀತಿ ಬರೆಯುವ ಹಾಗೆ ಮತ್ತು ಪದಗಳ ಅನುಕ್ರಮವನ್ನು ಪತ್ತೆ ಹಚ್ಚುವ ಅಥವಾ ಊಹಿಸುವ ಹಾಗೆ ವಿನ್ಯಾಸಗೊಳಿಸಲಾಗಿದೆ. ಇತರ ಚಾಟ್‌ಬಾಟ್‌ಗಳಿಗಿಂತ ಭಿನ್ನವಾಗಿರುವ ಚಾಟ್‌ಜಿಪಿಟಿ ಇಂಟರ್ನೆಟ್ ಇಲ್ಲದಿದ್ದರೂ ಸಹ ಅದರ ಆಂತರಿಕ ಪ್ರಕ್ರಿಯೆಗಳಿಂದ ಪಠ್ಯವನ್ನು ರಚಿಸಿ ಉತ್ತರವನ್ನು ನೀಡುತ್ತದೆ. ಹಿಂದಿನ ವರದಿಗಳ ಪ್ರಕಾರ, ಸಿಂಗಾಪುರದಲ್ಲಿ ಆರನೇ ತರಗತಿಯವರಿಗೆ ವಿನ್ಯಾಸಗೊಳಿಸಲಾದ ಪರೀಕ್ಷೆಯಲ್ಲಿಯು ಸಹ ಚಾಟ್‌ಜಿಪಿಟಿ ವಿಫಲವಾಗಿದೆ.
ಬುದ್ಧಿಮತ್ತೆಯ ದುರುಪಯೋಗದಿಂದ ಅಪಾಯ ಎದುರಾಗಬಹುದು: ಇಂಟರ್ನೆಟ್ ಜಗತ್ತಿನಲ್ಲಿ ಬಿರುಗಾಳಿ ಎಬ್ಬಿಸಿರುವ ಚಾಟ್ ಜಿಪಿಟಿಯ ಇನ್ನೊಂದು ಮುಖದ ಬಗ್ಗೆ ಅದನ್ನು ತಯಾರಿಸಿರುವವರಲ್ಲಿ ಒಬ್ಬರಾದ ಹಾಗೂ OpenAI ಸಿಇಒ ಆಗಿರುವ ಸ್ಯಾಮ್ ಆಲ್ಟ್ಮನ್ ಪ್ರಪಂಚವು ಕೃತಕ ಬುದ್ಧಿಮತ್ತೆ ಉಪಕರಣಗಳಿಂದ ಎದುರಾಗಬಹುದಾದ ಸಂಭವನೀಯ ಅಪಾಯಕಾರಿ ಸ್ಥಿತಿಯಿಂದ ಅಪಾಯಕ್ಕೆ ಒಳಗಾಗುವ ದಿನಗಳು ದೂರವಿಲ್ಲ ಮತ್ತು ಅಂತಹ AI ಚಾಟ್‌ಬಾಟ್‌ಗಳು ಜನಸಾಮಾನ್ಯರನ್ನು ತಲುಪುವ ಮೊದಲೇ ಅವನ್ನು ಸ್ವತಂತ್ರವಾಗಿ ಪರಿಶೀಲನೆ ಮಾಡುವುದು ಅಗತ್ಯ ಎಂದು ಎಚ್ಚರಿಸಿದ್ದಾರೆ. ಕೃತಕ ಸಾಮಾನ್ಯ ಬುದ್ಧಿಮತ್ತೆಯ ದುರುಪಯೋಗದಿಂದ ತೀವ್ರ ಅಪಘಾತ, ಸಾಮಾಜಿಕ ಅಡ್ಡಿ ಮತ್ತು ಗಂಭೀರ ಅಪಾಯಗಳು ಎದುರಾಗಬಹುದು ಎಂದು ಅನಾಲಿಟಿಕ್ಸ್ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ:ಬಿಂಗ್ ಸರ್ಚ್ಗೆ ಚಾಟ್‌ಜಿಪಿಟಿ ಸಂಯೋಜಿಸಿದ ಮೈಕ್ರೋಸಾಫ್ಟ್.. ಏನಿದರ ಪ್ರಯೋಜನ?