ನವದೆಹಲಿ: ಗ್ರಾಹಕರಿಗೆ ತಡೆರಹಿತ ಮತ್ತು ರೋಮಾಂಚಕ ಗೇಮಿಂಗ್ ಅನುಭವವನ್ನು ನೀಡುವ ಉದ್ದೇಶದಿಂದ ಎಲ್ಜಿ ತನ್ನ ಹೊಸ ಟಿವಿಯೊಂದನ್ನು ಜಗತ್ತಿಗೆ ಪರಿಚಯಿಸಿದೆ.
ಇದರ ಹೆಸರು ಎಲ್ಜಿ 'ಒಎಲ್ಇಡಿ48ಸಿಎಕ್ಸ್‌ಟಿವಿ'. ಈ ಟಿವಿಯ ಬೆಲೆ 1,99,990, ರೂಗಳಾಗಿವೆ. ಈ ಹೊಸ ಟಿವಿಯಲ್ಲಿ LGಯ ಆಲ್ಫಾ 9 ಜೆನ್ 3 ಪ್ರೊಸೆಸರ್ ಫೀಚರ್ ಅನ್ನು ಕೂಡ ನೀಡಲಾಗಿದೆ.
ಹೊಸ ಎಲ್ಜಿ ಟಿವಿ ಸ್ಪೋರ್ಟ್ಸ್ ಅಲರ್ಟ್ ವೈಶಿಷ್ಟ್ಯದೊಂದಿಗೆ ಬರುತ್ತಿದೆ. ಇದು ಬಳಕೆದಾರರಿಗೆ ತಮ್ಮ ನೆಚ್ಚಿನ ಕ್ರೀಡಾ ಸುದ್ದಿ ಮತ್ತು ಆಟದ ನವೀಕರಣಗಳಲ್ಲಿ ರಿಯಲ್ ಟೈಮ್ ಅಲರ್ಟ್ಗಳನ್ನು ನೀಡುವ ಮೂಲಕ ನಾನ್ಸ್ಟಾಪ್ ಕ್ರೀಡಾ ವೀಕ್ಷಣೆಯ ಅನುಭವವನ್ನು ನೀಡುತ್ತದೆ. ಕಂಪನಿ ಹೇಳಿಕೆ ಪ್ರಕಾರ, ಟಿವಿ ವೈಯಕ್ತಿಕ ಸ್ವಯಂ- ಲೈಟ್ ಪಿಕ್ಸೆಲ್‌ಗಳನ್ನು ಹೊಂದಿದ್ದು ಮತ್ತು ಅದು ಬಣ್ಣಗಳಲ್ಲಿ ಹೈ ಕ್ವಾಲಿಟಿ ಒದಗಿಸುವ ಮೂಲಕ ಸಿನಿಮಾ ಅನುಭವವನ್ನು ನೀಡುತ್ತದೆ.
ಇದನ್ನೂ ಓದಿ:ಅಂಚೆ ಕಚೇರಿ ಯೋಜನೆಗಳಿಂದ ಹಣ ವಿತ್ಡ್ರಾ ಮಾಡಿಕೊಂಡರೆ ಟಿಡಿಎಸ್ ಕಡಿತ