ಸ್ಯಾನ್ ಫ್ರಾನ್ಸಿಸ್ಕೊ (ಅಮೆರಿಕ): ಆನ್ಲೈನ್ ಜಗತ್ತಿನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಹಾಗೂ ಮಾನವರನ್ನು ಪ್ರತ್ಯೇಕಿಸಿ ಗುರುತಿಸಲು ಸಾಧ್ಯವಾಗುವಂಥ ತಂತ್ರಜ್ಞಾನವೊಂದನ್ನು ತಯಾರಿಸುವ ಯೋಜನೆಯನ್ನು OpenAI ಸಿಇಒ ಸ್ಯಾಮ್ ಆಲ್ಟಮನ್ ಘೋಷಿಸಿದ್ದಾರೆ. ಇದು ಕಣ್ಣು ಗುಡ್ಡೆಯನ್ನು ಸ್ಕ್ಯಾನ್ ಮಾಡಿ (eyeball-scanning) ಮನುಷ್ಯರನ್ನು ಗುರುತಿಸುವ ಕ್ರಿಪ್ಟೊಕರೆನ್ಸಿ ತಂತ್ರಜ್ಞಾನವಾಗಿದ್ದು, ಈ ಸ್ಟಾರ್ಟಪ್ಗೆ ವರ್ಲ್ಡ್‌ಕಾಯಿನ್ (Worldcoin) ಎಂದು ಹೆಸರಿಸಲಾಗಿದೆ.
"ಈ ವರ್ಲ್ಡ್‌ಕಾಯಿನ್ ಯೋಜನೆ ಯಶಸ್ವಿಯಾದಲ್ಲಿ, ಇದು ಆರ್ಥಿಕ ಬೆಳವಣಿಗೆಯ ಅವಕಾಶಗಳನ್ನು ಗಮನಾರ್ಹವಾಗಿ ಹೆಚ್ಚಿಸಬಹುದು, ಗೌಪ್ಯತೆ ಕಾಪಾಡಿಕೊಂಡು ಆನ್‌ಲೈನ್‌ನಲ್ಲಿ ಎಐನಿಂದ ಮಾನವರನ್ನು ಪ್ರತ್ಯೇಕಿಸುವ ವಿಶ್ವಾಸಾರ್ಹ ವಿಧಾನವನ್ನು ನೀಡಬಹುದು, ಜಾಗತಿಕ ಪ್ರಜಾಪ್ರಭುತ್ವ ಪ್ರಕ್ರಿಯೆಗಳನ್ನು ಸಕ್ರಿಯಗೊಳಿಸಬಹುದು ಮತ್ತು ಅಂತಿಮವಾಗಿ AI ನಿಧಿಯ UBI ಗೆ ಸಂಭಾವ್ಯ ಮಾರ್ಗವನ್ನು ತೋರಿಸಬಹುದು ಎಂದು ನಾವು ನಂಬುತ್ತೇವೆ" ಎಂದು ವರ್ಲ್ಡ್‌ಕಾಯಿನ್ ನ ಸಂಸ್ಥಾಪಕರಾದ ಅಲೆಕ್ಸ್ ಬ್ಲಾನಿಯಾ ಮತ್ತು ಸ್ಯಾಮ್ ಆಲ್ಟ್‌ಮನ್ ಹೇಳಿದ್ದಾರೆ.
ನಿಯಮಗಳು ಎಲ್ಲಿ ಸ್ಪಷ್ಟವಾಗಿಲ್ಲವೋ ಅಲ್ಲಿ ಇದರ ಪ್ರಯೋಜನ:ವರ್ಲ್ಡ್‌ಕಾಯಿನ್ ಗೌಪ್ಯತೆ ಕಾಪಾಡುವ ಡಿಜಿಟಲ್ ಗುರುತನ್ನು (World ID) ಒಳಗೊಂಡಿರುತ್ತದೆ ಮತ್ತು ಕಾನೂನುಗಳ ಪ್ರಕಾರ ಎಲ್ಲೆಲ್ಲಿ ಅವಕಾಶವಿದೆಯೋ ಅಲ್ಲಿ ಮಾನವರಾಗಿರುವುದನ್ನು ಸಾಬೀತು ಪಡಿಸಲು ಡಿಜಿಟಲ್ ಕರೆನ್ಸಿ (WLD) ಯನ್ನು ಸರಳವಾಗಿ ಸ್ವೀಕರಿಸಲಾಗುತ್ತದೆ. ಅಮೆರಿಕ ಸೇರಿದಂತೆ ಯಾವ ದೇಶಗಳಲ್ಲಿ ನಿಯಮಗಳು ಸ್ಪಷ್ಟವಾಗಿಲ್ಲವೋ ಅಂಥಲ್ಲಿ ಹೆಚ್ಚಿನ ಜನರು ಎರಡರಿಂದಲೂ ಪ್ರಯೋಜನ ಪಡೆಯುವಂತೆ ಇದನ್ನು ರೂಪಿಸಲಾಗುತ್ತದೆ ಎಂದು ಕಂಪನಿ ಹೇಳಿದೆ.
ಬಳಕೆದಾರರು ಈಗ ಮೊದಲ ಪ್ರೋಟೋಕಾಲ್ - ಹೊಂದಾಣಿಕೆಯ ವ್ಯಾಲೆಟ್ ಆಗಿರುವ ವರ್ಲ್ಡ್ ಆ್ಯಪ್ (World App) ಅನ್ನು ಡೌನ್‌ಲೋಡ್ ಮಾಡಬಹುದು ಮತ್ತು ತಮ್ಮ ಪಾಲನ್ನು ಕಾಯ್ದಿರಿಸಬಹುದು. ಬಯೋಮೆಟ್ರಿಕ್ ಪರಿಶೀಲನಾ ಸಾಧನವಾದ ಆರ್ಬ್ ಅನ್ನು ಸಂಪರ್ಕಿಸಿದ ನಂತರ ಅವರಿಗೆ World ID ನೀಡಲಾಗುತ್ತದೆ. ಇದರ ಮೂಲಕ ಜನ ಆನ್‌ಲೈನ್‌ನಲ್ಲಿ ತಮ್ಮ ಖಾಸಗಿತನವನ್ನು ಸಂಪೂರ್ಣವಾಗಿ ಸಂರಕ್ಷಿಸಿಕೊಂಡು ಆನ್‌ಲೈನ್‌ನಲ್ಲಿ ತಾವು ನಿಜವಾದ ಮತ್ತು ಅನನ್ಯ ವ್ಯಕ್ತಿ ಎಂದು ಸಾಬೀತುಪಡಿಸಲು ಸಾಧ್ಯವಾಗುತ್ತದೆ.
ಆರ್ಬ್‌ಗಳ ರೋಲ್‌ಔಟ್ ಪ್ರಾರಂಭ:ಆರ್ಬ್ಸ್‌ನ ಜಾಗತಿಕ ವಿತರಣೆಯು ಹೆಚ್ಚುತ್ತಿರುವ ಮಧ್ಯೆ ಬಳಕೆದಾರರು ವರ್ಲ್ಡ್ ಅಪ್ಲಿಕೇಶನ್‌ನೊಂದಿಗೆ ಮತ್ತು ವರ್ಲ್ಡ್‌ಕಾಯಿನ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ವೆರಿಫೈ ಮಾಡಿಸಲು ಹತ್ತಿರದ ಆರ್ಬ್ಸ್ ಅನ್ನು ಕಂಡು ಹಿಡಿಯಬಹುದು ಮತ್ತು ಸಮಯವನ್ನು ಬುಕ್ ಮಾಡಬಹುದು. ಇದರ ಜೊತೆಗೆ, ವರ್ಲ್ಡ್ ಐಡಿಗಾಗಿ ಜಾಗತಿಕ ಬೇಡಿಕೆ ಪೂರೈಸಲು ವರ್ಲ್ಡ್‌ಕಾಯಿನ್ ಸ್ಟಾರ್ಟಪ್ 1,500 ಆರ್ಬ್‌ಗಳ ರೋಲ್‌ಔಟ್ ಅನ್ನು ಪ್ರಾರಂಭಿಸಿದೆ.
"ಯೋಜನೆಯು ಲಭ್ಯವಿರುವ ಆರ್ಬ್‌ಗಳ ಸಂಖ್ಯೆಯನ್ನು 1,500 ಕ್ಕೆ ಹೆಚ್ಚಿಸಲಿದೆ ಮತ್ತು ಪ್ರಪಂಚದಾದ್ಯಂತ 35 ಕ್ಕೂ ಹೆಚ್ಚು ನಗರಗಳಲ್ಲಿ ಇದು ಲಭ್ಯವಾಗಲಿದೆ " ಎಂದು ವರ್ಲ್ಡ್‌ಕಾಯಿನ್ ಬ್ಲಾಗ್‌ಪೋಸ್ಟ್‌ನಲ್ಲಿ ತಿಳಿಸಿದೆ. ಹೊಸ ಆರ್ಬ್ಸ್ ಈಗ ಮತ್ತು 2023 ರ ಅಂತ್ಯದ ನಡುವೆ ಐದು ಖಂಡಗಳಾದ್ಯಂತ ಭಾರತ ಸೇರಿದಂತೆ 20 ಕ್ಕೂ ಹೆಚ್ಚು ದೇಶಗಳ 35ಕ್ಕೂ ಹೆಚ್ಚು ನಗರಗಳಲ್ಲಿ ಲಭ್ಯವಿರುತ್ತದೆ. ಯಂತ್ರಗಳು, ವಿಶೇಷವಾಗಿ ಕಂಪ್ಯೂಟರ್ ವ್ಯವಸ್ಥೆಗಳಿಂದ ಮಾನವ ಬುದ್ಧಿವಂತಿಕೆಯ ಪ್ರಕ್ರಿಯೆಗಳ ಅನುಕರಣೆ ಮಾಡುವುದು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವಾಗಿದೆ.
ಇದನ್ನೂ ಓದಿ : ಉಪಗ್ರಹದ ಮೂಲಕ SMS; Android 14 ಆವೃತ್ತಿ ತರಲಿದೆ ಹೊಸ ವೈಶಿಷ್ಟ್ಯ