ನಿಮ್ಮ ಮೊಬೈಲ್ನಲ್ಲಿ ಕಾಲ್ ರೆಕಾರ್ಡರ್ ಆ್ಯಪ್ ಅನ್ನು ಬಳಸುತ್ತಿದ್ದರೆ ಇನ್ನು ಮುಂದೆ ಅದು ವರ್ಕ್ ಆಗಲ್ಲ. ಕಾರಣ ಗೂಗಲ್ ಸಂಸ್ಥೆ ತನ್ನ ಹೊಸ ನೀತಿಯಲ್ಲಿ ಕಾಲ್ ರೆಕಾರ್ಡರ್ ಆ್ಯಪ್ಗಳ (ಥರ್ಡ್ ಪಾರ್ಟಿ ಆ್ಯಪ್)ಬಳಕೆ ನಿಷೇಧಿಸುತ್ತಿದೆ. ಅಲ್ಲದೇ ಅವುಗಳನ್ನು ಗೂಗಲ್ ಪ್ಲೇ ಸ್ಟೋರ್ನಿಂದ ಕಿತ್ತುಹಾಕಲಿದೆ.
ಗೂಗಲ್ ತನ್ನ ಪ್ಲೇ ಸ್ಟೋರ್ ನೀತಿಗೆ ಕೆಲ ಬದಲಾವಣೆ ತಂದಿದ್ದು, ಅದರಲ್ಲಿ ಕಾಲ್ ರೆಕಾರ್ಡರ್ ಆ್ಯಪ್ಗಳನ್ನು ನಿಷೇಧಿಸುತ್ತಿದೆ. ಮೇ 11 ರಿಂದ ಈ ನಿಯಮ ಜಾರಿಗೆ ಬರಲಿದ್ದು, ಆ್ಯಂಡ್ರಾಯ್ಡ್ ಮೊಬೈಲ್ಗಳಲ್ಲಿ ಥರ್ಡ್ ಪಾರ್ಟಿ ಆ್ಯಪ್ಗಳಾಗಿ ಬಳಕೆಯಾಗುತ್ತಿದ್ದ ಕಾಲ್ ರೆಕಾರ್ಡರ್ಗಳು ಇನ್ನು ಅಲ್ಲಿ ಕಾಣಸಿಗುವುದಿಲ್ಲ. ಈಗಾಗಲೇ ಡೌನ್ಲೋಡ್ ಮಾಡಿಕೊಂಡು ಬಳಕೆ ಮಾಡುತ್ತಿರುವ ಆ್ಯಪ್ಗಳು ಕೂಡ ನಿಷ್ಕ್ರಿಯವಾಗಲಿವೆ ಎಂದು ಕಂಪನಿ ತಿಳಿಸಿದೆ.