ಕ್ಯಾಲಿಫೋರ್ನಿಯಾ (ಯುಎಸ್‌ಎ):ಆ್ಯಪಲ್ ಕಂಪೆನಿಯು ತನ್ನ ಪ್ರಧಾನ ಕಚೇರಿ ಇರುವ ಅಮೆರಿಕದ ಆ್ಯಪಲ್ ಪಾರ್ಕ್ ಕ್ಯುಪರ್ಟಿನೊದಲ್ಲಿ ಮಂಗಳವಾರ 'ವಾಂಡರ್‌ಲಸ್ಟ್' ಹೆಸರಿನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು, ಆ್ಯಪಲ್ ಮೊಬೈಲ್‌ಪ್ರಿಯರಿಗೆ ಸಿಹಿಸುದ್ದಿ ನೀಡಿದೆ. ಟೆಕ್ ದೈತ್ಯ ತನ್ನ ಹೊಸ, ಉನ್ನತ ಮಟ್ಟದ ಐಫೋನ್‌ಗಳನ್ನು (iPhone 15 Pro ಮತ್ತು 15 Pro Max) ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಮೊಬೈಲ್‌ಗಳಲ್ಲಿ ಹೆಚ್ಚು ಪ್ರೀಮಿಯಂ ಅನ್ನಿಸುವ ವಸ್ತುಗಳನ್ನು ಬಳಸಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ.
ಇದೇ ಮೊದಲ ಬಾರಿಗೆ ಟೈಟಾನಿಯಂ ವಿನ್ಯಾಸ:ಕಳೆದ ವರ್ಷದ ಮಾದರಿಗಳ ಹೊಳೆಯುವ, ಸ್ಟೈನ್‌ಲೆಸ್ ಸ್ಟೀಲ್ ಫ್ರೇಮ್‌ಗಿಂತ ಭಿನ್ನವಾಗಿ, ಪ್ರೊ ಮಾದರಿಯ ಫ್ರೇಮ್ ಬ್ರಷ್‌ನಂತೆ ಹೊಸ ಮೊಬೈಲ್‌ಗಳು ಕಾಣುತ್ತಿವೆ. ಇದೇ ಮೊದಲ ಬಾರಿಗೆ ಟೈಟಾನಿಯಂ ವಿನ್ಯಾಸ ಅಳವಡಿಸಲಾಗಿದೆ. ನೋಡಲು ಆಕರ್ಷಕವಾಗಿದ್ದು, ಹೆಚ್ಚು ಬಾಳಿಕೆ ಬರಲಿದೆ ಎಂದು ಕಂಪೆನಿ ಮಾಹಿತಿ ನೀಡಿದೆ. ಮಾಧ್ಯಮ ವರದಿಗಳ ಪ್ರಕಾರ, ಡಿಸ್ಪ್ಲೇ ಗಾತ್ರ 6.1 ಮತ್ತು 6.7 ಇಂಚು ಇದೆ. ಕುತೂಹಲದ ವಿಷಯವೆಂದರೆ, ಇದು ರಿಂಗ್ ಮ್ಯೂಟ್ ಸ್ವಿಚ್ ಹೊಂದಿಲ್ಲ. ಅದರ ಸ್ಥಳದಲ್ಲಿ ಕಾರ್ಯಾಚರಣೆಯ ಬಟನ್ ಇರಿಸಲಾಗಿದೆ.
ಹೊಸ ಬಟನ್‌ಗಳು ಶಾರ್ಟ್‌ಕಟ್‌ಗಳನ್ನು ಬಳಸಲು, ಪ್ರವೇಶಿಸುವಿಕೆ ವೈಶಿಷ್ಟ್ಯಗಳನ್ನು ತರಲು, ಕ್ಯಾಮರಾ ಬಳಸಲು, ಫ್ಲ್ಯಾಶ್‌ಲೈಟ್ ಆನ್ ಮಾಡಲು ಮತ್ತು ಹೆಚ್ಚಿನವುಗಳಿಗೆ ಅನುವು ಮಾಡಿಕೊಡುತ್ತದೆ. ಎರಡೂ ಮೊಬೈಲ್‌ಗಳು ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್ಪ್ಲೇ ಹೊಂದಿವೆ.