ಸ್ಯಾನ್ ಫ್ರಾನ್ಸಿಸ್ಕೋ : ಅಮೆಜಾನ್ ಮಾರ್ಚ್ 9 ರಿಂದ ಕಿಂಡಲ್ ನ್ಯೂಸ್‌ಸ್ಟ್ಯಾಂಡ್ ಮೂಲಕ ನಿಯತಕಾಲಿಕೆ ಮತ್ತು ವೃತ್ತಪತ್ರಿಕೆ ಸಬ್ಸ್ಕ್ರಿಪ್ಷನ್ ಮಾರಾಟ ಮಾಡುವುದನ್ನು ನಿಲ್ಲಿಸಿದೆ ಮತ್ತು ಸೆಪ್ಟೆಂಬರ್‌ನಲ್ಲಿ ಪ್ರಸ್ತುತ ಜಾರಿಯಲ್ಲಿರುವ ಕಿಂಡಲ್ ನ್ಯೂಸ್‌ಸ್ಟ್ಯಾಂಡ್ ಸಬ್ಸ್ಕ್ರಿಪ್ಷನ್ಗಳ ಸೇವೆಯನ್ನು ನಿಲ್ಲಿಸುವುದಾಗಿ ಹೇಳಿದೆ. ಕಿಂಡಲ್ ನ್ಯೂಸ್‌ಸ್ಟ್ಯಾಂಡ್ ಎಂಬುದು ಕಿಂಡಲ್ಗಾಗಿ ತಯಾರಿಸಿದ ಪುಸ್ತಕ ಅಥವಾ ವೃತ್ತಪತ್ರಿಕೆಯನ್ನು ಓದುವ ಪ್ಲಾಟ್ಪಾರ್ಮ್ ಆಗಿದೆ.
ಮಾಸಿಕ ಕಿಂಡಲ್ ನ್ಯೂಸ್ ಸಬ್ ಸ್ಕ್ರಿಪ್ಷನ್ ಖರೀದಿಸಿದವರು ಸೆಪ್ಟೆಂಬರ್ 4, 2023 ರವರೆಗೆ ತಮ್ಮ ಸಂಚಿಕೆಗಳನ್ನು ಪಡೆಯುವುದನ್ನು ಮುಂದುವರಿಸುತ್ತಾರೆ. ಚಂದಾದಾರರು ತಾವಾಗಿಯೇ ತಮ್ಮ ಸಬ್ಸ್ಕ್ರಿಪ್ಷನ್ ಅನ್ನು ರದ್ದು ಮಾಡದಿದ್ದರೆ ಈ ದಿನಾಂಕದವರೆಗೆ ಸಂಚಿಕೆಗಳನ್ನು ಪಡೆಯುತ್ತಾರೆ. ಆ ದಿನಾಂಕದ ನಂತರ, ಅಮೆಜಾನ್ ಮೂಲಕ ನಿಮ್ಮ ಚಂದಾದಾರಿಕೆ(ಗಳನ್ನು) ನವೀಕರಿಸಲು ನಿಮಗೆ ಇನ್ನು ಮುಂದೆ ಸಾಧ್ಯವಾಗುವುದಿಲ್ಲ. ನಿಮಗೆ ಈಗಾಗಲೇ ತಲುಪಿಸಲಾದ ಸಂಚಿಕೆಗಳನ್ನು ನೀವು ಓದುವುದನ್ನು ಮುಂದುವರಿಸಬಹುದು ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
ಕಂಪನಿಯು ಕಿಂಡಲ್ ನ್ಯೂಸ್‌ಸ್ಟ್ಯಾಂಡ್ ಚಂದಾದಾರಿಕೆಗಳ ಜೊತೆಗೆ ಮುದ್ರಣ ನಿಯತಕಾಲಿಕೆಗಳು ಮತ್ತು ಪತ್ರಿಕೆಗಳ ಮಾರಾಟ ಸಹ ಸ್ಥಗಿತಗೊಳಿಸಿದೆ. ಜೂನ್ 5, 2023 ರವರೆಗೆ ಅಮೆಜಾನ್ ಮೂಲಕ ನಿಮ್ಮ ಪ್ರಿಂಟ್ ಮ್ಯಾಗಜೀನ್ ಚಂದಾದಾರಿಕೆ(ಗಳನ್ನು) ನಿರ್ವಹಿಸುವುದನ್ನು ನೀವು ಮುಂದುವರಿಸಬಹುದು. ಆ ದಿನಾಂಕದ ನಂತರ, ಯಾವುದೇ ಉಳಿದಿರುವ ಸಕ್ರಿಯ ಚಂದಾದಾರಿಕೆಗಳಿಗಾಗಿ ಎಲ್ಲ ಗ್ರಾಹಕ ಸೇವಾ ವಿಚಾರಣೆಗಳನ್ನು ಪ್ರಕಾಶಕರು ನೇರವಾಗಿ ನಿರ್ವಹಿಸುತ್ತಾರೆ ಎಂದು ಕಂಪನಿ ಹೇಳಿದೆ. ಈ ತಿಂಗಳ ಆರಂಭದಲ್ಲಿ, ಅಮೆಜಾನ್ ಅಮೆರಿಕದಲ್ಲಿನ ತನ್ನ ಎಂಟು ಗೋ ಕನ್ವಿನಿಯನ್ಸ್ ಮಳಿಗೆಗಳನ್ನು ಮುಚ್ಚುವುದಾಗಿ ಘೋಷಿಸಿದೆ.
ಮಾಧ್ಯಮ ವರದಿಗಳ ಪ್ರಕಾರ, ಅಮೆಜಾನ್ ನ್ಯೂಯಾರ್ಕ್ ನಗರದಲ್ಲಿ ಎರಡು ಗೋ ಸ್ಟೋರ್‌ಗಳು, ಸಿಯಾಟಲ್‌ನಲ್ಲಿ ಎರಡು ಸ್ಥಳಗಳು ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಾಲ್ಕು ಮಳಿಗೆಗಳನ್ನು ಏಪ್ರಿಲ್ 1 ರಂದು ಮುಚ್ಚಲಿದೆ. ಇದರಿಂದ ಕೆಲಸ ಕಳೆದುಕೊಳ್ಳುವ ಉದ್ಯೋಗಿಗಳಿಗೆ ಕಂಪನಿಯಲ್ಲಿ ಬೇರೆ ಕೆಲಸ ನೀಡಲು ಪ್ರಯತ್ನ ಮಾಡಲಿದೆ ಎಂದು ಹೇಳಿದೆ.