ಸ್ಯಾನ್ ಫ್ರಾನ್ಸಿಸ್ಕೋ:ಆಲಿಸ್ ಎಂಬ ಹೆಸರಿನ ಆಲ್-ಎಲೆಕ್ಟ್ರಿಕ್ ಏರೋಪ್ಲೇನ್‌ನ ಮೂಲ ಮಾದರಿಯು (ಪ್ರೊಟೊಟೈಪ್) ಈ ವಾರ ಯುಎಸ್‌ನ ಸೆಂಟ್ರಲ್ ವಾಷಿಂಗ್ಟನ್ ರಾಜ್ಯದಲ್ಲಿ ತನ್ನ ಮೊದಲ ಹಾರಾಟ ನಡೆಸಿತು. ದಿ ಸಿಯಾಟಲ್ ಟೈಮ್ಸ್ ಪ್ರಕಾರ, ವಿಮಾನವು ವಾಯುನೆಲೆಯ ಸುತ್ತಲೂ 3500 ಅಡಿಗಳ ಎತ್ತರಕ್ಕೆ ಹಾರಿ ಎರಡು ವಿಶಾಲ ತಿರುವುಗಳನ್ನು ತೆಗೆದುಕೊಂಡಿತು. ಮಂಗಳವಾರ ಬೆಳಗ್ಗೆ 7.10ಕ್ಕೆ ಟೇಕಾಫ್ ಆಗಿದ್ದು, ಒಂಬತ್ತು ಪ್ರಯಾಣಿಕರು ಮತ್ತು ಇಬ್ಬರು ಪೈಲಟ್‌ಗಳಿಗೆ ಅವಕಾಶ ಕಲ್ಪಿಸುವಂತೆ ಈ ವಿಮಾನವನ್ನು ವಿನ್ಯಾಸಗೊಳಿಸಲಾಗಿತ್ತು.
ವಿಮಾನವು ನೇರವಾಗಿ ಮೇಲಕ್ಕೇರುವ ಸಮಯದಲ್ಲಿ ಅದರ ಹಿಂಭಾಗದ ಪ್ರೊಪೆಲ್ಲರ್‌ಗಳು ತಿರುಗುವ ಶಬ್ದವು ನೆಲದ ಮೇಲಿರುವ ಜನರಿಗೆ ಕೇಳಿಸುತ್ತಿತ್ತು. ನಂತರ ಕೇವಲ 8 ನಿಮಿಷಗಳ ನಂತರ ವಿಮಾನವು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿತು ಎಂದು ವರದಿ ತಿಳಿಸಿದೆ. ಸುಮಾರು 15,000 ಅಡಿ ಎತ್ತರದಲ್ಲಿ ನಗರಗಳ ನಡುವೆ ಕೆಲವು ನೂರು ಮೈಲಿಗಳಷ್ಟು ಹಾರುವ ವಿದ್ಯುತ್ ವಾಣಿಜ್ಯ ಪ್ರಯಾಣಿಕ ವಿಮಾನದ ಸಾಮರ್ಥ್ಯವನ್ನು ಪ್ರದರ್ಶಿಸಲು ಆರ್ಲಿಂಗ್ಟನ್ ಮೂಲದ ಸ್ಟಾರ್ಟ್ - ಅಪ್ ಎವಿಯೇಷನ್ ಈ ವಿಮಾನವನ್ನು ವಿನ್ಯಾಸಗೊಳಿಸಿ ನಿರ್ಮಿಸಿದೆ.