ನವದೆಹಲಿ:ಜೂನ್ 16ರಿಂದ ಜುಲೈ 31ರೊಳಗೆ ಸುಮಾರು 30 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಬ್ಯಾನ್ ಮಾಡಲಾಗಿದೆ ಎಂದು ವಾಟ್ಸಪ್ ಇತ್ತೀಚೆಗೆ ಬಿಡುಗಡೆ ಮಾಡಿರುವ ಅನುಸರಣಾ (compliance) ವರದಿಯಲ್ಲಿ ಮಾಹಿತಿ ನೀಡಿದೆ.
ಮಂಗಳವಾರ ವರದಿ ಬಿಡುಗಡೆ ಮಾಡಿದ್ದು, +91 ಸಂಖ್ಯೆಯಿಂದ ಆರಂಭವಾಗುವ ಸುಮಾರು 30,27,000 ಖಾತೆಗಳನ್ನು ಬ್ಯಾನ್ ಮಾಡಲಾಗಿದೆ. ಅದರ ಜೊತೆಗೆ ಇದೇ ಅವಧಿಯಲ್ಲಿ ಸುಮಾರು 594 ದೂರುಗಳು ಕುಂದುಕೊರತೆ ವಿಭಾಗಕ್ಕೆ ಬಂದಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಹಿಂದೆ, ಸ್ಪ್ಯಾಮ್ ಮೆಸೇಜ್ಗಳನ್ನು ಮತ್ತು ಸ್ವಯಂಚಾಲಿತ ಮೆಸೇಜ್ಗಳನ್ನು ಅನಧಿಕೃತವಾಗಿ ಬಳಸುತ್ತಿದ್ದ ಕಾರಣದಿಂದ ಶೇಕಡಾ 95ರಷ್ಟು ವಾಟ್ಸಪ್ ಖಾತೆಗಳನ್ನು ಬ್ಯಾನ್ ಮಾಡಲಾಗಿತ್ತು ಎಂದು ವಾಟ್ಸಪ್ ಮಾಹಿತಿ ನೀಡಿತ್ತು.
ಕುಂದುಕೊರತೆ ವಿಭಾಗಕ್ಕೆ ಬಂದ ದೂರುಗಳಲ್ಲಿ ಅಥವಾ ಮನವಿಗಳಲ್ಲಿ 137 ಅಕೌಂಟ್ ಸಪೋರ್ಟ್, 316 ಬ್ಯಾನ್ಗಾಗಿ ಮನವಿ, ಇತರೆ ಸಪೋರ್ಟ್ಗಾಗಿ 45, ಪ್ರಾಡೆಕ್ಟ್ ಸಪೋರ್ಟ್ಗಾಗಿ 64, ಸೇಫ್ಟಿಗಾಗಿ 32 ಮನವಿ ಅಥವಾ ದೂರುಗಳು ಜೂನ್ 16ರಿಂದ ಜುಲೈ 31ರೊಳಗೆ ಬಂದಿವೆ ಎಂದು ವಾಟ್ಸಪ್ ಹೇಳಿದ್ದು, 74 ಮನವಿಗಳ ಮೇಲೆ ಕ್ರಮ ಜರುಗಿಸಲಾಗಿದೆ ಎಂದು ಮಾಹಿತಿ ನೀಡಿದೆ.