ಕರ್ನಾಟಕ

karnataka

By

Published : Mar 25, 2022, 4:27 PM IST

ETV Bharat / lifestyle

ಸಿಹಿಕಾರಕಗಳು ಕ್ಯಾನ್ಸರ್ ಅಪಾಯ ಹೆಚ್ಚಿಸಬಹುದು: ಸಂಶೋಧನೆ

ಸಿಹಿಕಾರಕಗಳು ನಮ್ಮ ಆರೋಗ್ಯಕ್ಕೆ ಹಾನಿಕಾರಕವೆಂದು ಬಹಳ ಹಿಂದಿನಿಂದಲೂ ಹೇಳಲಾಗುತ್ತಿದೆ. ಸ್ಥೂಲಕಾಯತೆ, ಟೈಪ್ 2 ಡಯಾಬಿಟಿಸ್ ಮತ್ತು ಹೃದಯರಕ್ತನಾಳದ ಕಾಯಿಲೆಯಂತಹ ಸಮಸ್ಯೆಗಳು ಹಲವಾರು ಸಿಹಿಕಾರಕಗಳನ್ನು ಸೇವಿಸುವುದರಿಂದ ಬರುತ್ತವೆ ಎಂದು ಅಧ್ಯಯನಗಳು ಹೇಳಿವೆ. ಆದರೆ ಸಿಹಿಕಾರಕಗಳನ್ನು ಸೇವಿಸುವುದರಿಂದ ಕ್ಯಾನ್ಸರ್​ ಅಪಾಯ ಹೆಚ್ಚು ಎಂದು ಹೊಸ ಅಧ್ಯಯನ ಎಚ್ಚರಿಸಿದೆ.

ಸಿಹಿಕಾರಕಗಳು
ಸಿಹಿಕಾರಕಗಳು

ಅಮೆರಿಕದಲ್ಲಿ 1970ರ ದಶಕದಲ್ಲಿ ಮಾರಾಟವಾದ ಸೈಕ್ಲೇಮೇಟ್ ಎಂಬ ಕೃತಕ ಸಿಹಿಕಾರಕವು ಇಲಿಗಳಲ್ಲಿ ಮೂತ್ರಕೋಶದ ಕ್ಯಾನ್ಸರ್ ಹೆಚ್ಚಿಸುತ್ತದೆ ಎಂದು ತಿಳಿದುಬಂದಿತ್ತು. ಆದ್ರೆ ಮಾನವನ ಶರೀರವು ಇಲಿಗಳಿಗಿಂತ ಬಹಳ ಭಿನ್ನ. ಹಾಗಾಗಿ ಈ ಕೃತಕ ಸಿಹಿಕಾರಕವು ಮಾನವರಲ್ಲಿ ಯಾವ ರೀತಿ ಕ್ಯಾನ್ಸರ್​ಗೆ ಕಾರಣವಾಗುತ್ತದೆ ಎಂದು ಕಂಡುಹಿಡಿಯುವಲ್ಲಿ ಅಧ್ಯಯನಗಳು ವಿಫಲವಾಗಿವೆ. ಇದರ ಹೊರತಾಗಿಯೂ, ಮಾಧ್ಯಮಗಳು ಸಿಹಿಕಾರಕಗಳು ಮತ್ತು ಕ್ಯಾನ್ಸರ್ ನಡುವಿನ ಸಂಬಂಧವನ್ನು ವರದಿ ಮಾಡುವುದನ್ನು ಮುಂದುವರೆಸಿವೆ.

ಆದರೆ, ಈಗ PLOS ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದಿಂದ, ಕೆಲವು ಸಿಹಿಕಾರಕಗಳನ್ನು ಸೇವಿಸುವವರಿಗೆ ಕ್ಯಾನ್ಸರ್ ಬರುವ ಅಪಾಯ ಹೆಚ್ಚಿದೆ ಎಂದು ತೋರಿಸಿದೆ. ಈ ಅಧ್ಯಯನಕ್ಕಾಗಿ ಸುಮಾರು 1,00,000 ಕ್ಕೂ ಹೆಚ್ಚು ಜನರನ್ನು ಪ್ರಯೋಗಕ್ಕೆ ಒಳಪಡಿಸಲಾಗಿತ್ತು. ಈ ಕೃತಕ ಸಿಹಿಕಾರಕಗಳನ್ನು ಸೇವಿಸುವುದರಿಂದ ಆಗುವ ಪರಿಣಾಮವನ್ನು ತಿಳಿಯಲು, ಸಂಶೋಧನೆಯಲ್ಲಿ ಭಾಗವಹಿಸುವವರಿಗೆ ಆಹಾರದ ಡೈರಿಯನ್ನು ಪಾಲಿಸಲು ಸೂಚಿಸಲಾಯಿತು. ಇದರಲ್ಲಿ ಭಾಗವಹಿಸಿದವರಲ್ಲಿ ಅರ್ಧದಷ್ಟು ಜನರು ಎಂಟು ವರ್ಷಗಳಿಗೂ ಹೆಚ್ಚು ಕಾಲ ಇದನ್ನು ಅನುಸರಿಸಿದರು.

ಆಸ್ಪರ್ಟೇಮ್ ಮತ್ತು ಅಸೆಸಲ್ಫೇಮ್ ಕೆ. ಇವುಗಳು ಹೆಚ್ಚು ಕ್ಯಾನ್ಸರ್​ ಅಪಾಯವನ್ನು ಹೊಂದಿವೆ. ವಿಶೇಷವಾಗಿ ಸ್ತನ ಮತ್ತು ಬೊಜ್ಜು-ಸಂಬಂಧಿತ ಕ್ಯಾನ್ಸರ್​ ಆಗಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ನಿಮ್ಮ ಆಹಾರದಿಂದ ಕೆಲವು ರೀತಿಯ ಸಿಹಿಕಾರಕಗಳನ್ನು ತೆಗೆದುಹಾಕುವುದರಿಂದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು ಎಂಬುದನ್ನು ಈ ಅಧ್ಯಯನ ಸೂಚಿಸುತ್ತದೆ.

ಕ್ಯಾನ್ಸರ್ ಅಪಾಯ: ಅನೇಕ ಸಾಮಾನ್ಯ ಆಹಾರಗಳು ಸಿಹಿಕಾರಕಗಳನ್ನು ಹೊಂದಿರುತ್ತವೆ. ಈ ಆಹಾರದಲ್ಲಿರುವ ಸಿಹಿ ನಮ್ಮ ಬಾಯಿಯ ರುಚಿಯನ್ನು ಹೆಚ್ಚಿಸುತ್ತದೆ. ಇಂತಹ ಆಹಾರ ಕಡಿಮೆ ಕ್ಯಾಲೋರಿಗಳೊಂದಿಗೆ ಉತ್ತಮವಾದ ಮಾಧುರ್ಯವನ್ನು ನೀಡುತ್ತದೆ. ಕೆಲವು ಸಿಹಿಕಾರಕಗಳು ನೈಸರ್ಗಿಕವಾಗಿ ಸಿಗುತ್ತವೆ.(ಉದಾಹರಣೆಗೆ ಸ್ಟೀವಿಯಾ ಅಥವಾ ಯಾಕೋನ್ ಸಿರಪ್). ಆಸ್ಪರ್ಟೇಮ್ನಂತಹ ಇತರವುಗಳು ಕೃತಕವಾಗಿವೆ. ಇವು ಕಡಿಮೆ ಅಥವಾ ಯಾವುದೇ ಕ್ಯಾಲೋರಿಗಳನ್ನು ಹೊಂದಿರದಿದ್ದರೂ, ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.

ಸಿಹಿಕಾರಕಗಳಿಂದ ಡಿಎನ್‌ಎಗೆ ಹಾನಿ:ನಮ್ಮ ಜೀವಕೋಶಗಳು ಕ್ಯಾನ್ಸರ್ ಉಂಟಾಗುವ ಸಮಯದಲ್ಲಿ ಸ್ವಯಂ-ನಾಶಪಡಿಸಲು ಸಮರ್ಥವಾಗಿವೆ. ಆದರೆ ಆಸ್ಪರ್ಟೇಮ್ ಈ ಕಾರ್ಯವನ್ನು ಮಾಡುವ ಜೀವ ಕೋಶಗಳನ್ನು ನಾಶಪಡಿಸುತ್ತದೆ. ಸುಕ್ರಲೋಸ್ ಮತ್ತು ಸ್ಯಾಕ್ರರಿನ್ ಸೇರಿದಂತೆ ಇತರ ಸಿಹಿಕಾರಕಗಳು ಡಿಎನ್‌ಎಗೆ ಹಾನಿ ಮಾಡುತ್ತವೆ ಎಂದು ತೋರಿಸಲಾಗಿದೆ. ಇದು ಕ್ಯಾನ್ಸರ್‌ಗೆ ಕಾರಣವಾಗಬಹುದು. ಆದರೆ ಇದು ಜೀವಂತ ಜೀವಿಗಳಿಗಿಂತ ಭಕ್ಷ್ಯದಲ್ಲಿರುವ ಜೀವಕೋಶಗಳಲ್ಲಿ ಮಾತ್ರ ತೋರಿಸಲ್ಪಟ್ಟಿದೆ.

ಸಿಹಿಕಾರಕಗಳು ನಮ್ಮ ಕರುಳಿನಲ್ಲಿ ವಾಸಿಸುವ ಬ್ಯಾಕ್ಟೀರಿಯಾದ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತವೆ. ಕರುಳಿನಲ್ಲಿರುವ ಬ್ಯಾಕ್ಟೀರಿಯಾವನ್ನು ಬದಲಾಯಿಸುವುದರಿಂದ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸಬಹುದು. ಇದರರ್ಥ ಪ್ರತಿಕಾಯಗಳು ನಾಶವಾದಾಗ ಕ್ಯಾನ್ಸರ್ ಕೋಶಗಳು ಹೆಚ್ಚಾಗುತ್ತವೆ.

ಇದನ್ನೂ ಓದಿ:'ವಾಂತಿ, ವಾಕರಿಕೆ ನಿರೋಧಕ ಔಷಧಿಗಳು ಸ್ಟ್ರೋಕ್‌ ಅಪಾಯವನ್ನು ಮೂರು ಪಟ್ಟು ಹೆಚ್ಚಿಸುತ್ತದೆ'

ಇತ್ತೀಚೆಗೆ ನಡೆಸಿದ ಸಂಶೋಧನೆಯಲ್ಲಿ ಸುಮಾರು 6,00,000 ಜನ ಭಾಗವಹಿಸಿದ್ದು, ಕೃತಕ ಸಿಹಿಕಾರಕಗಳ ಹೆಚ್ಚಿನ ಸೇವನೆಯಿಂದ ಕೆಲವು ಕ್ಯಾನ್ಸರ್​ಗಳ ಅಪಾಯ ಹೆಚ್ಚಾಗಬಹುದು ಎಂದು ಸೂಚಿಸಲು ಸೀಮಿತ ಪುರಾವೆಗಳಿವೆ ಎಂದು ಅಧ್ಯಯನ ಹೇಳಿದೆ. ಮೊದಲನೆಯದಾಗಿ, ಆಹಾರದ ಡೈರಿಗಳು ವಿಶ್ವಾಸಾರ್ಹವಲ್ಲ. ಏಕೆಂದರೆ ಜನರು ತಾವು ತಿನ್ನುವುದರ ಬಗ್ಗೆ ಯಾವಾಗಲೂ ಪ್ರಾಮಾಣಿಕವಾಗಿರುವುದಿಲ್ಲ ಅಥವಾ ಅವರು ಸೇವಿಸಿದ್ದನ್ನು ಮರೆತುಬಿಡಬಹುದು. ಈ ಅಧ್ಯಯನವು ಪ್ರತಿ ಆರು ತಿಂಗಳಿಗೊಮ್ಮೆ ಆಹಾರದ ಡೈರಿಗಳನ್ನು ಸಂಗ್ರಹಿಸಿದರೂ, ಜನರು ಯಾವಾಗಲೂ ತಾವು ತಿನ್ನುವುದನ್ನು ಮತ್ತು ಕುಡಿಯುವುದನ್ನು ನಿಖರವಾಗಿ ರೆಕಾರ್ಡ್ ಮಾಡದಿರುವ ಸಂಭವವಿದೆ. ಭಾಗವಹಿಸುವವರು ತಾವು ಸೇವಿಸಿದ ಆಹಾರದ ಫೋಟೋಗಳನ್ನು ತೆಗೆದುಕೊಳ್ಳುವ ಮೂಲಕ ಸಂಶೋಧಕರು ಈ ಅಪಾಯವನ್ನು ಭಾಗಶಃ ತಗ್ಗಿಸಿದರೂ, ಜನರು ಇನ್ನೂ ಅವರು ಸೇವಿಸಿದ ಎಲ್ಲಾ ಆಹಾರಗಳನ್ನು ಸೇರಿಸಿಲ್ಲ.

ದೇಹದ ತೂಕ ಹೆಚ್ಚಾಗುತ್ತದೆ:ಪ್ರಸ್ತುತ ಪುರಾವೆಗಳ ಆಧಾರದ ಮೇಲೆ, ಕೃತಕ ಸಿಹಿಕಾರಕಗಳ ಬಳಕೆಯು ದೇಹದ ತೂಕವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂಬುದನ್ನು ಒಪ್ಪಿಕೊಳ್ಳಲಾಗಿದೆ. ಆದರೆ ಈ ಸಿಹಿಕಾರಕಗಳು ನೇರವಾಗಿ ಇದು ಸಂಭವಿಸಲು ಕಾರಣವೇ ಎಂಬುದನ್ನು ಸಂಶೋಧಕರು ಖಚಿತಪಡಿಸಿಲ್ಲ. ಇತ್ತೀಚಿನ ಅಧ್ಯಯನವು ಜನರ ಬಾಡಿ ಮಾಸ್ ಇಂಡೆಕ್ಸ್ ಅನ್ನು ಗಣನೆಗೆ ತೆಗೆದುಕೊಂಡರೂ, ದೇಹದ ಕೊಬ್ಬಿನಲ್ಲಿನ ಬದಲಾವಣೆಯು ಈ ರೀತಿಯ ಕ್ಯಾನ್ಸರ್‌ಗಳ ಬೆಳವಣಿಗೆಗೆ ಕಾರಣವಾಗಿರಬಹುದು ಎನ್ನಲಾಗ್ತಿದೆ.

ಅಂತಿಮವಾಗಿ, ಕಡಿಮೆ ಪ್ರಮಾಣದಲ್ಲಿ ಸೇವಿಸುವವರಿಗೆ ಹೋಲಿಸಿದರೆ. ಅತಿ ಹೆಚ್ಚು ಕೃತಕ ಸಿಹಿಕಾರಕಗಳನ್ನು ಸೇವಿಸುವವರಲ್ಲಿ ಕ್ಯಾನ್ಸರ್ ಬೆಳವಣಿಗೆಯ ಅಪಾಯವು ಹೆಚ್ಚಾಗಿದೆ. ಅಧ್ಯಯನದ ಅವಧಿಯಲ್ಲಿ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವ ಶೇ.13ರಷ್ಟು ಹೆಚ್ಚಿನ ಸಾಪೇಕ್ಷ ಅಪಾಯವಿದೆ ಎಂಬುದು ತಿಳಿದುಬಂದಿದೆ. ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಸಿಹಿಕಾರಕವನ್ನು ಸೇವಿಸುವ ಜನರು ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೊಂದಿರುತ್ತಾರೆ ಎಂದು ಹೇಳಬಹುದು.

ABOUT THE AUTHOR

...view details