ಸಿಯೋಲ್ (ದಕ್ಷಿಣ ಕೊರಿಯಾ): ದಕ್ಷಿಣ ಕೊರಿಯಾದಲ್ಲಿ ಈ ವಾರ ಹೊಸ ಬಜೆಟ್ ಫ್ರೆಂಡ್ಲಿ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದಾಗಿ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ತಿಳಿಸಿದೆ.
ಗ್ಯಾಲಕ್ಸಿ ಎ 42 5ಜಿ ಸ್ಮಾರ್ಟ್‌ಫೋನ್ $ 400 ಬೆಲೆಯೊಂದಿಗೆ ಬಿಡುಗಡೆಯಾಗಲಿದೆ ಎಂದು ಸ್ಯಾಮ್‌ಸಂಗ್ ತಿಳಿಸಿದ್ದು, ಇದು ದಕ್ಷಿಣ ಕೊರಿಯಾದಲ್ಲಿ ಮಾರಾಟವಾಗುವ 5ಜಿ ಸ್ಮಾರ್ಟ್‌ಫೋನ್ ಮಾದರಿಗಳಲ್ಲೇ ಅತ್ಯಂತ ಕಡಿಮೆ ಬೆಲೆಯದ್ದಾಗಿರಲಿದೆ.
ಗ್ಯಾಲಕ್ಸಿ ಎ 42 5 ಜಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 42 5ಜಿ ಈಗಾಗಲೇ ಯುರೋಪ್ ಮತ್ತು ಆಗ್ನೇಯ ಏಷ್ಯಾದ ಆಯ್ದ ಕೆಲವೆಡೆ ಕಳೆದ ವರ್ಷ ಬಿಡುಗಡೆಯಾಗಿದೆ.
6.6 ಇಂಚಿನ ಡಿಸ್ಪ್ಲೇ ಹೊಂದಿರುವ ಈ ಸ್ಮಾರ್ಟ್‌ಫೋನ್, ಕ್ವಾಡ್-ಕ್ಯಾಮೆರಾ ಸೆಟಪ್‌ನೊಂದಿಗೆ 48 ಎಂಪಿ ಮೇನ್ ಕ್ಯಾಮೆರಾ, 8 ಎಂಪಿ ಅಲ್ಟ್ರಾ ವೈಡ್ ಲೆನ್ಸ್, 5 ಎಂಪಿ ಡೆಪ್ತ್ ಸೆನ್ಸರ್ ಮತ್ತು 5 ಎಂಪಿ ಮ್ಯಾಕ್ರೋ ಕ್ಯಾಮೆರಾ ಹೊಂದಿದೆ. ಇದರ ಮುಂಭಾಗದಲ್ಲಿ 20 ಎಂಪಿ ಸೆಲ್ಫಿ ಕ್ಯಾಮೆರಾ ಕೂಡ ಇದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 42 ಕ್ಯಾಮೆರಾ ವೈಶಿಷ್ಟ್ಯಗಳು 5,000 ಎಂಎಹೆಚ್ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಇದು 4 ಜಿಬಿ ರ್ಯಾಮ್ ಮತ್ತು 128 ಜಿಬಿ ಇಂಟರನಲ್ ಮೆಮೊರಿ ಹೊಂದಿದೆ. ಇದನ್ನು ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 1 ಟೆರಾಬೈಟ್ವರೆಗೆ ವಿಸ್ತರಿಸಬಹುದು ಎಂದು ಸಂಸ್ಥೆ ತಿಳಿಸಿದೆ.