ಈ ಘಟನೆ ಆಂಧ್ರಪ್ರದೇಶ ಕೃಷ್ಣಾ ಜಿಲ್ಲೆಯ ಕಾನೂರು ಗ್ರಾಮದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಖಲೀಲ್ ತನ್ನ ಅತ್ತಿಗೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ. ಕೆಲ ತಿಂಗಳು ಅತ್ತಿಗೆ-ಮೈದುನನ ಮಧ್ಯೆ ವಿವಾಹೇತರ ಸಂಬಂಧ ಮುಂದುವರಿದಿತ್ತು. ಆದ್ರೆ ಮೂರು ತಿಂಗಳ ಹಿಂದೆ ಖಲಿಲ್ ಮದುವೆ ಮಾಡಿಕೊಂಡಿದ್ದು, ಬಳಿಕ ತನ್ನ ಅತ್ತಿಗೆ ಮನೆಯ ಹತ್ತಿರ ಸುಳಿಯಲಿಲ್ಲ. ಖಲೀಲ್ ಮದುವೆ ಬಳಿಕ ವಿವಾಹೇತರ ಸಂಬಂಧಕ್ಕೆ ಗುಡ್ ಬೈ ಹೇಳಿದ್ದ.
ಇನ್ನು ಮೈದುನ ಖಲೀಲ್ ಮೇಲೆ ಅತ್ತಿಗೆ ಉದ್ರಿಕ್ತಗೊಂಡಿದ್ದಳು. ಬುಧವಾರದಂದು ಅತ್ತಿಗೆ ಪೆಟ್ರೋಲ್ ತೆಗೆದುಕೊಂಡು ನೇರ ಖಲೀಲ್ನ ಕೊಠಡಿಗೆ ತೆರಳಿದ್ದಾಳೆ. ಮೈದುನನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ರೂಂನ ಬಾಗಿಲಿಗೆ ಬೀಗ ಹಾಕಿದ್ದಾಳೆ. ಇನ್ನು ಬೆಂಕಿ ಖಲೀಲ್ನ್ನು ಆವರಿಸಿದೆ. ಆದ್ರೆ ಅದೇ ರೂಂನಲ್ಲಿ ಖಲೀಲ್ ಸಹೋದರಿ ಹಜಿನಿ (27) ಸಹ ಇದ್ದಳು. ಅಣ್ಣ ಸಹಾಯಕ್ಕೆ ದೌಡಾಯಿಸಿದ್ದಾಗ ಹಜಿನಿಗೂ ಬೆಂಕಿ ಆವರಿಸಿದೆ.