ಕರ್ನಾಟಕ

karnataka

ETV Bharat / jagte-raho

ಸಿನಿಮಾ ಆಸೆ ತೋರಿಸಿ ಬಾಲಕಿ ಮೇಲೆ ಅತ್ಯಾಚಾರ... ಕಂಬಿ ಹಿಂದೆ ಕಾಮುಕರು - ಅತ್ಯಾಚಾರ

ದಿನದಿಂದ ದಿನಕ್ಕೆ ಪಕ್ಕದ ರಾಜ್ಯದಲ್ಲಿ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ನಿನ್ನೆ ಸಹ ಸಿನಿಮಾ ಆಸೆ ತೋರಿಸಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

ಸಿನಿಮಾ ಆಸೆ ತೋರಿಸಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ

By

Published : Jul 22, 2019, 12:24 PM IST

ಹೈದರಾಬಾದ್​:ಸಿನಿಮಾ ಆಸೆ ತೋರಿಸಿ ಪಕ್ಕದ ಮನೆ ಯುವಕ ಮತ್ತು ಆತನ ಸ್ನೇಹಿತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

11 ವರ್ಷದ ಬಾಲಕಿಯ ಮೇಲೆ ಕಾಮುಕರು ಅತ್ಯಾಚಾರ ಎಸಗಿದ್ದಾರೆ. ನಿನ್ನೆ ಸಂಜೆ 6.30ಕ್ಕೆ ಇಲ್ಲಿನ ಸೈದಾಪೇಟ್​​ನ​ ಯುವಕ ದಸ್ರು (23) ಪಕ್ಕದ ಮನೆಯ ಬಾಲಕಿಯನ್ನು ಸಿನಿಮಾ ನೋಡಲು ಕರೆದುಕೊಂಡು ಹೋಗಿದ್ದ. ಆಕೆಯ ಜೊತೆ 8 ವರ್ಷದ ಬಾಲಕಿ ಮತ್ತು ಯುವಕನ ಸ್ನೇಹಿತ ಮೋತಿಲಾಲ್​ (30) ಬೈಕ್​ ಮೇಲೆ ತೆರಳಿದ್ದರು.

ಸಿನಿಮಾ ಇನ್ನು ತಡವಾಗಿ ಆರಂಭವಾಗುತ್ತೆ ಎಂದು ಬಾಲಕಿಗೆ ನಂಬಿಸಿ ಪಕ್ಕದ ನಿರ್ಮಾಣದ ಹಂತದ ಕಟ್ಟಡಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಬಳಿಕ ಆತನ ಸ್ನೇಹಿತ ಸಹ ದುಷ್ಕೃತ್ಯ ಎಸಗಲು ಮುಂದಾದಾಗ ಬಾಲಕಿ ನೋವು ತಾಳದೇ ಕಿರುಚಿಕೊಂಡಿದ್ದಾಳೆ. ಇದನ್ನರಿತ ಸ್ಥಳೀಯರು ಆರೋಪಿಗಳಿಬ್ಬರನ್ನು ಹಿಡಿದು, ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details