ಕರ್ನಾಟಕ

karnataka

ETV Bharat / jagte-raho

ಲವ್, ಸೆಕ್ಸ್ ಬಳಿಕ ದೋಖಾ: ಬೆಂಗಳೂರಿನಲ್ಲಿ ನಿವೃತ್ತ ಸರ್ಕಾರಿ ಅಧಿಕಾರಿ ಬಂಧನ - ಲೈಂಗಿಕ ದೌರ್ಜನ್ಯ ಆರೋಪ

ಆರೋಪಿ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ ಯುವತಿ ಜೊತೆ ಸಲುಗೆ ಬೆಳೆಸಿದ್ದಾನೆ. ಪ್ರೀತಿ ಹೆಸರಲ್ಲಿ ಆಕೆಯ ಜೊತೆ ಬೆಂಗಳೂರು, ಮೈಸೂರಿಗೆಲ್ಲಾ ಟೂರ್ ಮಾಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಗಂಭೀರ ಆರೋಪ ಎದುರಿಸುತ್ತಿದ್ದಾನೆ.

retired-government-official-arrested-cheating-with-young-woman
ನಿವೃತ್ತ ಸರ್ಕಾರಿ ಅಧಿಕಾರಿ ಬಂಧನ

By

Published : Dec 12, 2020, 4:38 PM IST

ಬೆಂಗಳೂರು: ಆತ ನಿವೃತ್ತ ಸರ್ಕಾರಿ ಅಧಿಕಾರಿ. ನಿವೃತ್ತಿ ಬಳಿಕ ಹೆಂಡತಿ-ಮಕ್ಕಳ ಜೊತೆ ಕಾಲ ಕಳೆಯದೆ ಮಾಡ ಬಾರದ್ದನ್ನು ಮಾಡಲು ಹೋಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ‌.

ಬೆಂಗಳೂರಿನ ಬೃಂದಾವನ ನಗರ ನಿವಾಸಿಯಾದ ಶಂಕರ್‌ ಬಂಧಿತ ಆರೋಪಿ. ಈತ ಜಲಮಂಡಳಿಯಲ್ಲಿ ಸ್ಯಾನಿಟರಿ ಇನ್‌ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದನಂತೆ. ಕೆಲ ದಿನಗಳ ಹಿಂದಷ್ಟೇ ತನ್ನ ವೃತ್ತಿಯಿಂದ ಸ್ವಯಂ ನಿವೃತ್ತಿ ಹೊಂದಿದ್ದ ಈತ, ಯುವತಿ ಮೇಲೆ ಅತ್ಯಾಚಾರ ಮಾಡಿರುವ ಆರೋಪ ಎದುರಿಸುತ್ತಿದ್ದಾನೆ.

ಪ್ರಕರಣದ ವಿವರ:

ಸಂತ್ರಸ್ತ ಯುವತಿ‌ ಮೈಸೂರು‌ ಮೂಲದವಳಾಗಿದ್ದಾಳೆ. ಈಕೆ ಬೆಂಗಳೂರಿನ ತನ್ನ ಸಂಬಂಧಿಕರ ಮನೆಯಲ್ಲಿ ವಾಸ ಮಾಡುತ್ತಿದ್ದಳಂತೆ. ಹನುಮಂತನಗರ ಠಾಣೆ ವ್ಯಾಪ್ತಿಯಲ್ಲಿ ಬರುವ ಸಂಗೀತ ಶಾಲೆಯಲ್ಲಿ ಗಾಯನ ತರಬೇತಿ ಪಡೆಯುತ್ತಿದ್ದಳು. ಸಂಗೀತ ಕಾರ್ಯಕ್ರಮವೊಂದರಲ್ಲಿಯೇ ಯುವತಿಯನ್ನು ಶಂಕರ್ ಪರಿಚಯ ಮಾಡಿಕೊಂಡಿದ್ದಾನೆ.

ಓದಿ: ಮುಷ್ಕರದಿಂದ ಉಂಟಾದ ಸಮಸ್ಯೆ.. ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಸಿಎಂ ಬಿಎಸ್​ವೈ ಕಿಡಿ!!

ಬಳಿಕ ಆರೋಪಿ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ ಸಲುಗೆ ಬೆಳೆಸಿದ್ದಾನೆ. ಪ್ರೀತಿ ಹೆಸರಲ್ಲಿ ಯುವತಿಯ ಜೊತೆ ಬೆಂಗಳೂರು,ಮೈಸೂರು ಅಂತೆಲ್ಲಾ ಸುತ್ತಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಳಿಕ ನಾನು ಮದುವೆಯಾಗುವುದಿಲ್ಲ, ನನ್ನ ತಂಟೆಗೆ ಬರಬೇಡ ಎಂದು ಧಮಕಿ ಹಾಕಿದ್ದಾನೆ‌. ತನಗಾದ ಅನ್ಯಾಯದ ಬಗ್ಗೆ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಯುವತಿ ನೀಡಿದ್ದಾಳೆ. ಈ ದೂರಿನನ್ವಯ ಆರೋಪಿ ಶಂಕರ್‌ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ABOUT THE AUTHOR

...view details