ಕರ್ನಾಟಕ

karnataka

ETV Bharat / jagte-raho

ಮಾವನ ಕಣ್ಣಿಗೆ ಸೊಸೆ ಎಸೆದ್ಲು ಖಾರದ ಪುಡಿ, ತಂದೆತಾಯಿ ಮೇಲೆ ಮಗನ ಹಲ್ಲೆ! - ಮಗನ ಹಲ್ಲೆ

ಅತ್ತೆ ಸೊಸೆ ಸೇರಿ ಮಾವನ ಕಣ್ಣಿಗೆ ಖಾರದ ಪುಡಿ ಎರಚುತ್ತಿದ್ರೆ, ಇತ್ತ ಮಗ ತಂದೆ, ತಾಯಿ ಮೇಲೆ ಹಲ್ಲೆ ನಡೆಸುತ್ತಿದ್ದ!

ಮಗನ ಹಲ್ಲೆ

By

Published : Jun 5, 2019, 3:50 PM IST

Updated : Jun 5, 2019, 4:13 PM IST

ತಿರುಪತಿ:ವೃದ್ಧ ತಂದೆ ತಾಯಿ ಮೇಲೆ ಮಗ ಮತ್ತು ಸೊಸೆ ಕರುಣೆ ಇಲ್ಲದೇ ನಡು ಬೀದಿಯಲ್ಲೇ ಮನಸೋ ಇಚ್ಚೆ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ.

ಆಸ್ತಿ ವಿಚಾರವಾಗಿ ಈ ಹೈಡ್ರಾಮಾ ನಡೆದಿದೆ ಎನ್ನಲಾಗಿದೆ. ಆಸ್ತಿಗಾಗಿ ಮಗ ವಿಜಯ್​ ತನ್ನ ಪತ್ನಿ ಹಾಗು ಪತ್ನಿ ಕುಟುಂಬಸ್ಥರ ಜೊತೆಗೂಡಿ ತಂದೆ ಮುನಿಕೃಷ್ಣಯ್ಯ ಮತ್ತು ತಾಯಿ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ಹಣ, ಆಸ್ತಿ ಎದುರು ಮರೆಯಾಯ್ತು ಮಾನವೀಯತೆ!

ವಿಜಯ್​ ಪತ್ನಿ ಮಾವ ಮುನಿಕೃಷ್ಣಯ್ಯರ ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಹೆಂಡ್ತಿ ಖಾರದ ಪುಡಿ ಎರಚಿದ ಬಳಿಕ ಮಗ ವಿಜಯ್​ ಕಬ್ಬಿಣದ ರಾಡ್​ನಿಂದ ತಂದೆ ಮೇಲೆ ಹಲ್ಲೆ ಮಾಡಿದ್ದಾನೆ.

ತಂದೆ-ಮಗನ ಜಗಳವನ್ನು ಸ್ಥಳೀಯರು ಮೊಬೈಲ್‌ ಕ್ಯಾಮೆರಾ ಮೂಲಕ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್​ ಆಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು,ತನಿಖೆ ಕೈಗೊಂಡಿದ್ದಾರೆ.

Last Updated : Jun 5, 2019, 4:13 PM IST

ABOUT THE AUTHOR

...view details