ಕರ್ನಾಟಕ

karnataka

ETV Bharat / jagte-raho

ದೆಹಲಿಯ ಏಮ್ಸ್ ಹಾಸ್ಟೆಲ್‌ ಕಟ್ಟಡದಿಂದ ಜಿಗಿದು ಬೆಂಗಳೂರಿನ ವಿದ್ಯಾರ್ಥಿ ಆತ್ಮಹತ್ಯೆ - ಏಮ್ಸ್

ಮನೋರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಎಂಬಿಬಿಎಸ್ ವಿದ್ಯಾರ್ಥಿಯೋರ್ವ ದೆಹಲಿಯ ಏಮ್ಸ್​ನ ಹಾಸ್ಟೆಲ್‌ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

MBBS student jumps off roof of AIIMS hostel in Delhi, dies
ಹಾಸ್ಟೆಲ್‌ ಕಟ್ಟಡದಿಂದ ಜಿಗಿದು ಬೆಂಗಳೂರಿನ ವಿದ್ಯಾರ್ಥಿ ಆತ್ಮಹತ್ಯೆ

By

Published : Aug 11, 2020, 3:42 PM IST

ನವದೆಹಲಿ:ಇಲ್ಲಿನ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ಹಾಸ್ಟೆಲ್‌ ಕಟ್ಟಡದಿಂದ ಜಿಗಿದು ವೈದ್ಯಕೀಯ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಂಗಳೂರು ಮೂಲದ ವಿಕಾಸ್ ಜಿ. (22) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈತ 2018ನೇ ಬ್ಯಾಚ್​ನ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದು, ಮನೋರೋಗದಿಂದ ಬಳಲುತ್ತಿದ್ದ ಕಾರಣ ಆಸ್ಪತ್ರೆಯ ಮನೋವೈದ್ಯಕೀಯ ವಾರ್ಡ್‌ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ವಿಕಾಸ್​ಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು

ಸೆಮಿಸ್ಟರ್ ಪರೀಕ್ಷೆ ಬಳಿಕ ವಿಕಾಸ್ ಮನೆಗೆ ಹೋಗಿದ್ದ. ಆದರೆ ಚಿಕಿತ್ಸೆಗಾಗಿ ಮತ್ತೆ ಅವನನ್ನು ಮನೆಯಿಂದ ಕರೆ ತರಲಾಗಿತ್ತು. ಒಂದು ಗಂಟೆ ವಿರಾಮ ತೆಗೆದುಕೊಂಡು ವಿಕಾಸ್​ ವಾರ್ಡ್‌ನಿಂದ ಹಾಸ್ಟೆಲ್​ಗೆ ತೆರಳಿದ್ದ. ಈ ವೇಳೆ ಕಟ್ಟಡದ ಮೇಲ್ಛಾವಣಿಗೆ ತೆರಳಿ ಅಲ್ಲಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಂಜೆ 6 ಗಂಟೆ ಸುಮಾರಿಗೆ ಘಟನೆ ನಡೆದಿದೆ ಎಂದು ವಿಕಾಸ್​ಗೆ ಚಿಕಿತ್ಸೆ ನೀಡುತ್ತಿದ್ದ ಡಾ. ರಾಜೀವ್ ಹೇಳಿದ್ದಾರೆ.

ಯಾವುದೇ ಡೆತ್​ನೋಟ್​ ಸಿಕ್ಕಿಲ್ಲ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದೇವೆ. ವಿಕಾಸ್ ಪೋಷಕರಿಗೆ ವಿಷಯ ತಿಳಿಸಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details