ಕರ್ನಾಟಕ

karnataka

ETV Bharat / jagte-raho

ಚಾಲಕನ ಅಜಾಗರೂಕತೆಯಿಂದ ಪಲ್ಟಿ ಹೊಡೆದ ಬುಲೆರೋ: ಓರ್ವ ಸಾವು - vehicle palty

ಚಾಲಕನ ಅಜಾಗರೂಕತೆಯಿಂದ ವಾಹನವೊಂದು ಪಲ್ಟಿಯಾಗಿದೆ. ಪರಿಣಾಮ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿದ್ದು 15 ಜನರು ಗಾಯಗೊಂಡಿದ್ದಾರೆ.

ಚಾಲಕನ ಅಜಾಗರೂಕತೆಯಿಂದ ಪಲ್ಟಿ ಹೊಡೆದ ಬುಲೆರೋ

By

Published : May 27, 2019, 10:05 PM IST

ಶಿರಸಿ : ಬುಲೆರೋ ವಾಹನವೊಂದು ಪಲ್ಟಿಯಾದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟು 15 ಜನರು ಗಾಯಗೊಂಡ ಘಟನೆ ಶಿರಸಿಯ ಬನವಾಸಿ ಬಳಿ ನಡೆದಿದೆ.

ಈರಣ್ಣ ಹೊಸಗಟ್ಟಿ ಕುರಸಾಪುರ ಶಿಗ್ಗಾಂವ (25) ಮೃತ ದುರ್ದೈವಿ. ಸೋಮಣ್ಣ ವಡ್ಡರ, ಸುದೀಪ, ಸಂತೋಷ ಜವಳಗಿ, ತುಕಾರಾಮ,‌ ತಳಹಳ್ಳಿ, ಜ್ಯೋತ್ಯಪ್ಪ, ವಿಶ್ವನಾಥ, ವಾಲ್ಮೀಕಿ, ಈರಣ್ಣ, ಪರಶುರಾಮ ಹಾಗೂ ಗಣೇಶ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಾಲಕನ ಅಜಾಗರೂಕತೆಯಿಂದ ಪಲ್ಟಿ ಹೊಡೆದ ಬುಲೆರೋ

ಎಲ್ಲರೂ ಕುರಸಾಪುರದವರಾಗಿದ್ದು, ದಿನಗೂಲಿ ಕಾರ್ಮಿಕರಾಗಿದ್ದಾರೆ. ವಿದ್ಯುತ್ ತಂತಿ ಎಳೆಯುವ ಕೆಲಸ ಮುಗಿಸಿಕೊಂಡು ಮರಳಿ ಬರುವಾಗ ಚಾಲಕನ ಅಜಾಗರೂಕತೆ ಮತ್ತು ಅತಿ ವೇಗದಿಂದ ವಾಹನ ಪಲ್ಟಿಯಾಗಿದೆ ಎನ್ನಲಾಗುತ್ತಿದೆ. ಬನವಾಸಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ABOUT THE AUTHOR

...view details