ಕರ್ನಾಟಕ

karnataka

ETV Bharat / jagte-raho

‘ಅವಳನ್ನ ಕಳ್ಕೊಂಡೆ, ಪೋಷಕರೇ ಕ್ಷಮಿಸಿ’... ದೇವರ ಸನ್ನಿಧಿಯಲ್ಲೇ ಯುವಕ ಎಫ್​ಬಿ ಲೈವ್​ ಸುಸೈಡ್​! - youth facebook live suicide

ಅವಳನ್ನ ನಾನು ಕಳೆದುಕೊಂಡೆ. ಅವಳು ನನ್ನಿಂದ ದೂರವಾದ್ಲು. ಈ ನಿರ್ಣಯಕ್ಕೆ ಅಪ್ಪ-ಅಮ್ಮ ನನ್ನನ್ನು ಕ್ಷಮಿಸಿ ಎಂದು ಯುವಕನೋರ್ವ ದೇವರ ಸನ್ನಿಧಿಯಲ್ಲೇ ಫೇಸ್​ಬುಕ್​​ ಲೈವ್​ ಮೂಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸಾಂದರ್ಭಿಕ ಚಿತ್ರ

By

Published : Jul 23, 2019, 2:26 PM IST

ಆಗ್ರಾ(ಉತ್ತರ ಪ್ರದೇಶ):ತಾನು ಪ್ರೀತಿಸಿದ ಹುಡುಗಿ ಬೇರೆ ವ್ಯಕ್ತಿ ಜೊತೆ ಮದುವೆಯಾಗುತ್ತಿರುವ ನೋವಿನಿಂದ ಯುವಕನೋರ್ವ ದುಡುಕಿ ಜೀವನ ಪಯಣವನ್ನೇ ಕೊನೆಗೊಳಿಸಿರುವ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ.

ಇಲ್ಲಿನ ರೈಬಾ ಗ್ರಾಮದ ಶ್ಯಾಮ್​ (22) ಶನಿವಾರದಂದು ಸ್ಥಳೀಯ ದೇವಾಲಯಕ್ಕೆ ತೆರಳಿ ಫೇಸ್ಬುಕ್​ ಲೈವ್ ಮೂಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೂ ಮುನ್ನ ಶ್ಯಾಮ್​ ನಾಲ್ಕು ಪುಟದಷ್ಟು ಡೆತ್​ನೋಟ್​ ಬರೆದಿದ್ದಾನೆ. ಈತ ಲೈವ್​ ಸುಸೈಡ್​ ಮಾಡಿಕೊಳ್ಳುತ್ತಿರುವುದನ್ನು ಸ್ನೇಹಿತರು ವೀಕ್ಷಿಸಿದ್ದಾರೆ.

ಶ್ಯಾಮ್​ ಯವತಿವೋರ್ವಳನ್ನು ಪ್ರೀತಿಸಿದ್ದ. ಆಕೆ ಬೇರೆ ವ್ಯಕ್ತಿ ಜೊತೆ ಮದುವೆ ಮಾಡಿಕೊಳ್ಳುತ್ತಿದ್ದಾಳೆಂದು ತಿಳಿದಿತ್ತು. ಕೂಡಲೇ ಶ್ಯಾಮ್​ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಣಯಿಸಿದ್ದ. ನಾಲ್ಕು ಪುಟದಷ್ಟು ಡೆತ್​ನೋಟ್ ಬರೆದಿಟ್ಟು, ಫೇಸ್ಬುಕ್​ ಲೈವ್​ನಲ್ಲಿ ನಾಲ್ಕು ನಿಮಿಷ ಮಾತನಾಡಿ, ಸ್ಥಳೀಯ ದೇವಾಲಯಕ್ಕೆ ತೆರಳಿ ನೇಣು ಬಿಗಿದುಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ಶ್ಯಾಮ್​ ತನ್ನ ಹೆತ್ತವರ ಬಳಿ ಕ್ಷಮೆ ಕೋರಿದ್ದಾನೆ.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details